More

    ಪ್ರಗತಿಗೆ ಮತ್ತೊಂದು ಹೆಸರು ವೀರಶೈವ ಲಿಂಗಾಯತ

    ಬಾಗಲಕೋಟೆ: ಇಡೀ ದೇಶದಲ್ಲಿ ನೂರು ವರ್ಷಗಳ ಹಿಂದೆಯೇ ಖಾಸಗಿ ಶಿಕ್ಷಣ ಹಾಗೂ ದಾಸೋಹ ಕಲ್ಪನೆಯನ್ನು ಕೊಟ್ಟಿದ್ದೆ ವೀರಶೈವ ಲಿಂಗಾಯತರು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

    ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರಗತಿಗೆ ಮತ್ತೊಂದು ಹೆಸರೇ ವೀರಶೈವ-ಲಿಂಗಾಯತ ಎಂದರು.

    ನಮ್ಮಲ್ಲಿ ವೀರಶೈವ ಲಿಂಗಾಯತ ಸಂಸ್ಥೆಗಳು ಇದ್ದರೂ ನಮ್ಮ ಸಮಾಜದ ಹಿರಿಯರು, ಮಠಾಧೀಶರು, ಶಾಲೆ, ಬೋರ್ಡಿಂಗ್ ಗಳನ್ನು ತೆರೆದು ಎಲ್ಲರಿಗೂ ಶಿಕ್ಷಣ ನೀಡುವ ಕೆಲಸ ಮಾಡಿದ್ದಾರೆ.

    ಇದನ್ನೂ ಓದಿ: ದಾವಣಗೇರಿಯಲ್ಲಿ ೨೪ನೇ ಮಹಾ ಅಧಿವೇಶನ

    ನಮ್ಮ ಸಮಾಜಕ್ಕೆ ಮಾತ್ರ ಸೀಮಿತಗೊಳಿಸಿದೇ ಎಲ್ಲ ಬಡವರು, ದೀನ-ದಲಿತರು, ಹಿಂದುಳಿದವರಿಗೂ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಕೆಲಸ ಮಾಡಿದ್ದಾರೆ. ಸ್ವಧರ್ಮ ನಿಷ್ಠೆ, ಪರಮರ್ಧ ಸಹಿಷ್ಣುತೆ ಅನುಸರಿಸಿಕೊಂಡು ಬಂದಿದ್ದೇವೆ. ಕರ್ನಾಟಕದಲ್ಲಿ ಪ್ರಗತಿ ಮಾಡಿದವರೇ ವೀರಶೈವ ಲಿಂಗಾಯತರು ಎಂದು ಹೇಳಿದರು.

    ಈಗೆಲ್ಲ ಶಿಕ್ಷಣ ಸಂಸ್ಥೆಗಳು, ಮೆಸ್ ಗಳು ಕಮರ್ಷಿಯಲ್ ಆಗಿವೆ. ಆದರೆ, ನೂರು ವರ್ಷಗಳ ಹಿಂದೆಯೇ ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದು ಕೆಲಸ ಮಾಡಿದವರು ವೀರಶೈವ ಲಿಂಗಾಯತರು. ಇದೇ ಕಾರಣಕ್ಕೆ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕಲಬುರಗಿ, ಮೈಸೂರ, ಸಿದ್ದಗಂಗ ಸೇರಿ ಅನೇಕ ಕಡೆಗೆ ಶಿಕ್ಷಣ ಸಂಸ್ಥೆಗಳು ಆರಂಭಗೊಂಡವು. ಸಣ್ಣ ಮಠಾಧೀಶರು ಇದ್ದರೂ ಅವರು ಕನಿಷ್ಠ ಒಂದು ಕನ್ನಡ ಶಾಲೆ, ಹೈಸ್ಕೂಲ್ ಹಾಗೂ ಒಂದು ಬೋರ್ಡಿಂಗ್ ಮಾಡಿದ್ದಾರೆ. ಪ್ರಗತಿ ಅಲ್ಲಿಂದಲೇ ಅರಂಭವಾಗಿದೆ. ಪ್ರಗತಿಗೆ ಮೊದಲ ಹೆಸರು ವೀರಶೈವ-ಲಿಂಗಾಯತ ಸಂಸ್ಥೆಗಳು ಎಂದು ಮತ್ತೊಮ್ಮೆ ಪುನರುಚ್ಛರಿಸಿದರು.

    ವೀರಶೈವ ಲಿಂಗಾಯತರನ್ನು ಒಡೆಯುವ ಕೆಲಸ

    ಹಿಂದೆಯೂ ರಾಜ್ಯದಲ್ಲಿ ವೀರಶೈವ ಲಿಂಗಾಯತರನ್ನು ಒಡೆಯುವ ಕೆಲಸ ಆಗಿದೆ, ಆಗ ಅದರ ಪರಿಣಾಮ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಒಡೆಯುವ ಕೆಲಸ ಈಗಲೂ ನಡೆದಿದೆ. ನಮ್ಮಲ್ಲೀ ಒಗ್ಗಟ್ಟು ಇದೆ. ಆದರೆ, ಕೆಲವೊಂದು ಸ್ವಾರ್ಥದ ಪರಿಣಾಮ ಹೀಗೆಲ್ಲ ಆಗುತ್ತಿದೆ ಎಂದರು.
    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೌಲಭ್ಯಗಳು ಕೊಡುವುದರಲ್ಲಿ ನಾಲ್ಕು ವಿಭಾಗ ಮಾಡಿದ್ದಾರೆ. ರೈತರು, ಬಡವರು, ಯುವಕರು, ಮಹಿಳೆಯರು ಎಂದು. ಇದು ಎಲ್ಲರಿಗೂ ಸಿಗುತ್ತದೆ ಅಲ್ಲವೆ? ಇಲ್ಲಿ ಯಾವುದೇ ಒಡೆಯುವ ಕೆಲಸ ಆಗಿಲ್ಲ. ಆಡಳಿತ ಚುಕ್ಕಾಣಿ ಹಿಡಿದವರಿಗೆ, ರಾಜಕೀಯ ಮುಖಂಡರು ಓಟ್ ಬ್ಯಾಂಕ್ ಗಾಗಿ ತುಷ್ಠಿಕರಣ ಮಾಡಬಾರದು.ಈ ಹಿಂದೆ ಕಾಂಗ್ರೆಸ್ ಪಕ್ಷದವರು ಮಂಡಲ್ ವರದಿಯನ್ನು ಬಂದ್ ಮಾಡಿ ಟ್ರೇಜರಿಯಲ್ಲಿ ಇಟ್ಟಿದ್ದರು. ಅದನ್ನು ತೆಗೆದು ಜಾರಿಗೊಳಿಸಿದ್ದು ವಿ.ಪಿ.ಸಿಂಗ್ ಇದ್ದಾಗ. ಅದಕ್ಕೆ ಸಂವಿಧಾನ ಮಾನ್ಯತೆ ಕೊಟ್ಟಿದ್ದು ನರೇಂದ್ರ ಮೋದಿ ಅವರು. ವೀರಶೈವ ಲಿಂಗಾಯತರು ಈಗಲೂ ಜಾತಿ ಗಣತಿ ಬೇಡ ಎನ್ನುತ್ತಿಲ್ಲ. ಅದು ವೈಜ್ಞಾನಿಕವಾಗಿ ನಡೆಯಬೇಕು. ಇದನ್ನೆ ನಮ್ಮವರು ಪಕ್ಷ ಬೇಧ ಮರೆತು ಹೇಳಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts