More

    ಆಧುನಿಕ ಐಟಿ ತಂತ್ರಜ್ಞಾನದ ಸಹಕಾರ ಅಗತ್ಯ

    ಬಾಗಲಕೋಟೆ: ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಬ್ಯಾಂಕಿಂಗ್ ಕ್ಷೇತ್ರಕ್ಕೆ ಐಟಿ ತಂತ್ರಜ್ಞಾನದ ಸಹಕಾರ ಅಗತ್ಯವಾಗಿದೆ. ಇವರೆಡು ಜತೆಯಾಗಿ ಉತ್ತಮ ಸೇವೆ ನೀಡುವುದು ಅವಶ್ಯಕ. ವಿಶ್ವವು ವೇಗವಾಗಿ ಬದಲಾಗುತ್ತಿದೆ. ಐಟಿ ತಂತ್ರಜ್ಞಾನ ಬ್ಯಾಂಕಿನ ನಿತ್ಯ ವ್ಯವಹಾರ ನಿರ್ವಹಣೆಯ ಅವಿಭಾಜ್ಯ ಅಂಗ ಎಂದು ಇಂಡಿಯನ್ ಓವರ್ಸೀಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಅಜಯ ಕುಮಾರ ಶ್ರೀವಾಸ್ತವ ಹೇಳಿದರು.

    ನಗರದ ಬಿವಿವಿ ಸಂಘದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಸುಸ್ಥಿರ ಬ್ಯಾಂಕಿಂಗ್ ಮತ್ತು ಅದರ ಮುನ್ನೋಟ ಎಂಬ ವಿಷಯದ ಕುರಿತಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಸ್ಥಿರತೆಗೆ ಹೊಂದಿಕೊಳ್ಳುವಿಕೆ ಮತ್ತು ನಮ್ಯತೆ ಮುಖ್ಯ. ಗ್ರಾಹಕರ ಅವಶ್ಯಕತೆಗನುಗುಣವಾಗಿ ಪ್ರದೇಶವಾರು ಬ್ಯಾಂಕಿನ ವಿನೂತನ ಸೇವಾ ಸೌಲಭ್ಯಗಳನ್ನು ನೀಡುವುದು. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಸಾವಿರಾರು ಬ್ಯಾಂಕ್ ಶಾಖೆಗಳಿಗೆ ತ್ವರಿತ ಮತ್ತು ಉತ್ತಮ ಗುಣಮಟ್ಟದ ಸೇವೆ ನೀಡುವುದು ಮುಖ್ಯ ಎಂದರು.

    ಬಿವಿವಿ ಸಂಘದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಆರ್.ಎನ್. ಹೆರಕಲ್ಲ ಮಾತನಾಡಿ, ವಿದ್ಯಾರ್ಥಿಗಳು ಅಧುನಿಕ ತಂತ್ರಜ್ಞಾನದ ಕೌಶಲಗಳನ್ನು ಕಲಿತಾಗ ಉತ್ತಮ ಸೇವಾ ಅವಕಾಶಗಳು ದೊರೆಯುತ್ತವೆ. ವೃತ್ತಿಪರ ಜ್ಞಾನಾರ್ಜನೆಗೆ ಇಂತಹ ವ್ಯಕ್ತಿಗಳಿಂದ ಪ್ರೇರಣೆ ಪಡೆದುಕೊಳ್ಳಬೇಕು ಎಂದು ಹೇಳಿದರು.
    ವೇದಿಕೆಯಲ್ಲಿ ಐಒಸಿ ಬ್ಯಾಂಕಿನ ವಲಯ ವ್ಯವಸ್ಥಾಪಕ ಶ್ರೀನಿವಾಸ ಕಾಂತ, ಕಾಲೇಜಿನ ಪ್ರಾಚಾರ್ಯ ಡಾ. ದಾಕ್ಷಾಯಣಿ ಜಂಗಮಶೆಟ್ಟಿ ಇದ್ದರು. ಡಾ.ವೀಣಾ ಸೋರಗಾವಿ ಪರಿಚಯಿಸಿದರು, ಎಂಬಿಎ ವಿಭಾಗದ ಮುಖ್ಯಸ್ಥೆ ಡಾ. ರಶ್ಮಿ ಹುನ್ನೂರ ನಿರೂಪಿಸಿದರು. ಡಾ.ಎಸ್.ಜಿ.ಕಂಬಾಳಿಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts