More

    ಲಕ್ಷದೀಪೋತ್ಸವಕ್ಕಾಗಿ ಸಕಲ ಸಿದ್ಧತೆ

    ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದಲ್ಲಿ ವರ್ಷದ ಮೊದಲ ಸುಗ್ಗಿ ಹಬ್ಬ ಮಕರ ಸಂಕ್ರಾತಿಯ ವಿಜೃಂಭಣೆಯ ಆಚರಣೆಗೆ ಸಜ್ಜಾಗಿದ್ದು, ಲಕ್ಷದೀಪೋತ್ಸವಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

    ಕ್ಷೇತ್ರಪಾಲಕ ಶ್ರೀ ಆದಿರಂಗನಾಥಸ್ವಾಮಿ ದೇವಾಲಯ ಮುಂಭಾಗದಲ್ಲಿ 34ನೇ ವರ್ಷದ ಲಕ್ಷದೀಪೋತ್ಸವವನ್ನು ಪಟ್ಟಣದ ಲಕ್ಷ ದೀಪೋತ್ಸವ ಸಮಿತಿಯಿಂದ ಆಚರಿಸಲಾಗುತ್ತಿದ್ದು, ಇದಕ್ಕಾಗಿ ಶ್ರೀ ರಂಗನಾಥಸ್ವಾಮಿ ದೇವಾಲಯ ಮುಂಭಾಗ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವರ್ಣರಂಜಿತ ವಿದ್ಯುತ್ ದೀಪಗಳ ಅಲಂಕಾರದ ಜತೆಗೆ ದೇವಾಲಯ ಮುಂದಿನ ರಸ್ತೆಯ 300 ಮೀಟರ್ ಉದ್ದಕ್ಕೂ ಎರಡು ಇಕ್ಕೆಲಗಳಲ್ಲಿ ಕಂಬಗಳನ್ನು ನೆಡಲಾಗಿದೆ. ಬಿದಿರಿನ ಅಡ್ಡಪಟ್ಟಿಯಲ್ಲಿ 8 ಸಾಲುಗಳು ಹಾಗೂ ನೆಲದ ಮೇಲೆ 10 ಸಾಲು ಸೇರಿದಂತೆ ಒಟು 18 ಸಾಲುಗಳಲ್ಲಿ ಲಕ್ಷಾಂತರ ದೀಪಗಳನ್ನು ಇಡಲು ದಬ್ಬೆಗಳ ಸಹಾಯದಿಂದ ಅಟ್ಟಣೆಗಳ ಪಟ್ಟಿಗಳನ್ನು ಈಗಾಗಲೇ ಕಟ್ಟಲಾಗಿದ್ದು, ಇದರೊಂದಿಗೆ ಗಂಡಭೇರುಂಡ ವೃತ್ತವನ್ನು ಸಹ ಶುಚಿತ್ವದೊಂದಿಗೆ ಸಿದ್ಧತೆಗೊಳಿಸಿ ವಿಶೇಷವಾಗಿ ಅಲಂಕರಿಸಲಾಗಿದೆ.

    ಇನ್ನು ಮಕರ ಸಂಕ್ರಾಂತಿ ದಿನದ ಪೂರ್ವ ಸಿದ್ಧತೆಗಾಗಿ ಹಿಂದಿನ ದಿನದಿಂದಲೇ ಲಕ್ಷಾಂತರ ದೀಪಗಳನ್ನು ಸಾಲಾಗಿ ಜೋಡಿಸಲು ಅವಶ್ಯವಿರುವ ಹಸುವಿನ ಸಗಣಿ ಸಂಗ್ರಹಿಸಿದ್ದು, ಇವುಗಳ ಮೇಲೆ ಇಡುವ ದೀಪಗಳನ್ನು ಬೆಳಗಲು ಶ್ರೀರಂಗನ ಭಕ್ತರು, ದಾನಿಗಳು ಹಾಗೂ ಪುರಜನರ ಸ್ವಯಂಪ್ರೇರಣೆ ಸಹಾಯದಿಂದ ನೀಡಿದ ಲಕ್ಷಗಟ್ಟಲೆ ದೀಪಗಳು ಹಾಗೂ ಬೇಕಾಗುವ 75 ಟಿನ್ (80 ಸಾವಿರ ಲೀಟರ್‌ನಷ್ಟು) ದೀಪದ ಎಣ್ಣೆಯನ್ನು ತರಲಾಗಿದೆ. ಈ ದೀಪಗಳನ್ನು ಸಾಲಾಗಿ ಜೋಡಿಸುವ ಹಾಗೂ ಎಣ್ಣೆ ಹಾಕುವ ಪ್ರಕ್ರಿಯೆ ಮತ್ತು ನಿರ್ವಹಣೆಗೆ ಲಕ್ಷದೀಪೋತ್ಸವ ಸಮಿತಿಯ ಮುಖ್ಯಸ್ಥ ಇಡ್ಲಿ ವೆಂಕಟೇಶ್ ಹಾಗೂ ವೈದ್ದಿಕ ಲಕ್ಷ್ಮೀಶ ಶರ್ಮ ನೇತೃತ್ವದಲ್ಲಿ ಸಮಿತಿಯ ಸದಸ್ಯರು, ಅಭಿನವ ಭಾರತ್, ವಿದ್ಯಾಭಾರತಿ ಹಾಗೂ ಪಟ್ಟಣದ ಒಟ್ಟು 100 ಜನರ ಸ್ವಯಂ ಸೇವಕರ ತಂಡ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts