More

    ಸರ್ವ ಕಾನೂನುಗಳ ಮೂಲ ಸಂವಿಧಾನ

    ಹರಪನಹಳ್ಳಿ: ಸಂವಿಧಾನ ಭಾರತದ ಶ್ರೇಷ್ಠ ಗ್ರಂಥವಾಗಿದ್ದು, ಇದರಿಂದ ವಕೀಲ ವೃತ್ತಿಯ ಘನತೆ, ಗೌರವ ಹೆಚ್ಚಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ ಹೇಳಿದರು.

    ಪಟ್ಟಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸೋಮವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ವಹಿಸಿದ ನಾಯಕತ್ವ, ಸಮನ್ವಯತೆ ಹಾಗೂ ಸಹಬಾಳ್ವೆ ಅಜರಾಮರವಾಗಿದೆ. ಇಂದು ನಾವು ನೋಡುತ್ತಿರುವಸರ್ವವ್ಯಾಪಿ, ಸರ್ವ ಕಾನೂನುಗಳ ಮೂಲ ನಮ್ಮ ಸಂವಿಧಾನ. ಸಂವಿಧಾನವನ್ನು ಕಾಲಕಾಲಕ್ಕೆ ಸೂಕ್ತವಾಗಿ ವ್ಯಾಖ್ಯಾನ ಮಾಡುತ್ತಿರುವುದು ವಕೀಲರು ಎಂದರು.

    ಇದನ್ನು ಓದಿ: ನ್ಯಾಯಾಂಗವು ಸಂವಿಧಾನದ ಅವಿಭಾಜ್ಯ ಅಂಗ

    ಕಿರಿಯ ಸಿವಿಲ್ ನ್ಯಾಯಾಧೀಶೆ ಫಕ್ಕಿರವ್ವ ಕೆಳಗೇರೆ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ನಾಯಕತ್ವ ವಹಿಸಿದ್ದ ನಾಯಕರನ್ನು ಗಮನಿಸಿದರೆ ಬಹುತೇಕರು ವಕೀಲರಾಗಿದ್ದರು. ಕಾನೂನಿನ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದರು ಎಂಬುದು ವಿಶೇಷ. ಮಹಾತ್ಮ ಗಾಂಧೀಜಿ, ಲಾಲ್ ಲಜಪತ್ ರಾಯ್, ಬಾಬು ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭಭಾಯ್ ಪಟೇಲ್, ಸುರೇಂದ್ರನಾಥ ಬ್ಯಾನರ್ಜಿ, ಲೋಕಮಾನ್ಯ ಬಾಲಗಂಗಾಧರ ತಿಲಕ್, ಸಿ.ರಾಜಗೋಪಾಲಾಚಾರಿ, ಸಿ.ಆರ್.ದಾಸ್, ಬುಲಾಭಾಯಿ ದೇಸಾಯಿ, ಕೈಲಾಶ ನಾಥ್ ಸೇರಿ ಸಂವಿಧಾನ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸಿದರು.

    ವಕೀಲರ ಸಂಘದ ಅಧ್ಯಕ್ಷ ಎಂ.ಅಜ್ಜಣ್ಣ ಮಾತನಾಡಿ, ಸಮಾಜದ ಡೊಂಕನ್ನು ತಿದ್ದುವಲ್ಲಿ ವಕೀಲರ ಪಾತ್ರ ಮಹತ್ವದ್ದು. ಸಾಮಾಜಿಕ ಸುಧಾರಣೆ ತರಲು ಮತ್ತು ಪಿಡುಗುಗಳನ್ನು ಕೊನೆಗಾಣಿಸಲು ಮಹತ್ವದ ಪಾತ್ರ ವಹಿಸಿದ್ದಾರೆ. ಕಾಲಕಾಲಕ್ಕೆ ಜನಪರ ಹೋರಾಟ, ಚಳವಳಿಗಳಿಗೆ ನಾಯಕತ್ವ ನೀಡುವುದು ಮಾತ್ರವಲ್ಲದೆ ನ್ಯಾಯಾಲಯಗಳಲ್ಲಿ ದೀನ, ದಲಿತ, ಶೋಷಿತ, ಅಸಂಘಟಿತ ವರ್ಗದವರ ಹಕ್ಕು, ಅಭಿವೃದ್ಧಿಗಾಗಿ ನ್ಯಾಯಯುತ ಹೋರಾಟ ಮಾಡಬೇಕಾದುದು ವಕೀಲರೇ ಎಂದರು.

    ಹಿರಿಯ ವಕೀಲರಾದ ಬಿ.ಕೃಷ್ಣಮೂರ್ತಿ, ಪಿ.ಜಗದೀಶಗೌಡ, ಚಿಗಟೇರಿ ವೀರಣ್ಣ, ಕೇಶವ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಕೆ.ಆನಂದ, ಜಂಟಿ ಕಾರ್ಯದರ್ಶಿ ಹೂಲೆಪ್ಪ, ವಕೀಲರಾದ ಬಿ.ಗೋಣಿಬಸಪ್ಪ, ಬಿ.ಹಾಲೇಶ, ಎಸ್.ಎಂ.ರುದ್ರಮುನಿ ಸ್ವಾಮಿ, ಕೆ.ಪ್ರಕಾಶ, ಎಂ.ಮೃತ್ಯುಂಜಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts