More

    ಎಲ್ಲ ಕ್ಷೇತ್ರದಲ್ಲೂ ಮಹಿಳೆ ದಾಪುಗಾಲು

    ಬೆಳಗಾವಿ: ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದ್ದು, ಪ್ರಕೃತಿ ಸೌಂದರ್ಯ, ಸಮಾಜದ ಬದಲಾವಣೆ ಹಾಗೂ ಪ್ರಗತಿಗೆ ಸಾಕಷ್ಟು ಕೃತಿಗಳನ್ನು ಬರೆದಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು.

    ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಹಾಗೂ ಮಾಲಗತ್ತಿ ಪ್ರಕಾಶನದಿಂದ ಬುಧವಾರ ಆಯೋಜಿಸಿದ್ದ ಅನಿತಾ ಮಾಲಗತ್ತಿ ಅವರ ‘ಇಳಿಹೊತ್ತು ಕಥಾ ಸಂಕಲನ’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕೃತಿಗಳಿಂದ ಮಹಿಳೆಯರು ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಹೊಂದಿದ್ದು, ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಕ್ರೀಡೆ, ಸಾಹಿತ್ಯ, ಕಲೆ, ಸಾಂಸ್ಕೃಂತಿಕ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಮಹಿಳೆಯರು ಪುರುಷರಿಗೆ ಸವಾಲೊಡ್ಡಿ ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ ಎಂದರು.

    ರಂಗಸಂಪದ ಅಧ್ಯಕ್ಷ ಅರವಿಂದ ಕುಲಕರ್ಣಿ ಅವರು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಉತ್ತಮ ಸಂದೇಶವನ್ನು ಮಾಲಗತ್ತಿ ಕೃತಿಯಲ್ಲಿ ತಿಳಿಸಿದ್ದಾರೆ. ಕೃತಿಯಲ್ಲಿ ಸರಳತೆ ಇದ್ದರೆ ನಾಟಕಕ್ಕೆ ಬಳಸಿಕೊಳ್ಳಲು ಸರಳವಾಗಿರುತ್ತದೆ. ಮಾಲಗತ್ತಿಯವರ ಕೃತಿ ಜೀವನದ ಪಾಠಗಳನ್ನು ಸೂಕ್ಷ್ಮವಾಗಿ ತಿಳಿಸಿದೆ ಎಂದರು.

    ಸಂಘ- ಸಂಸ್ಥೆಗಳಿಂದ ಅನಿತಾ ಮಾಲಗತ್ತಿ ಅವರನ್ನು ಸನ್ಮಾನಿಸಲಾಯಿತು. ಚನ್ನಬಸಪ್ಪ ಮಾಲಗತ್ತಿ, ಜಯಶೀಲಾ ಬ್ಯಾಕೋಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಡಾ.ಭಾರತಿ ಮಠದ ಪುಸ್ತಕ ಪರಿಚಯಿಸಿದರು. ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕಿ ಶೈಲಜಾ ಭಿಂಗೆ, ಶಶಿಕಲಾ ಬಸವರಾಜ, ಆಶಾ ಕಡಪಟ್ಟಿ, ನೀಲಗಂಗಾ ಚರಂತಿಮಠ, ನಂದಾ ಗಾರ್ಗಿ, ಜ್ಯೋತಿ ಮಾಳೆ ಇದ್ದರು. ಆಶಾ ಯಮಕನಮರಡಿ ಸ್ವಾಗತಿಸಿ, ನಿರೂಪಿಸಿದರು. ಅನ್ನಪೂರ್ಣಾ ಹಿರೇಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts