More

    ನೈಟ್​ ಕರ್ಫ್ಯೂ ಮುಂದುವರಿಕೆ; ಜ. 25ಕ್ಕೆ ಅತಿಯಾಗಲಿದೆ ಕರೊನಾ ಅಲೆ!; ಇಲ್ಲಿದೆ ಇವತ್ತಿನ ಸಿಎಂ ಸಭೆಯ ವಿವರ…

    ಬೆಂಗಳೂರು: ಕರೊನಾ ತಡೆ ಹಾಗೂ ನಿಯಂತ್ರಣ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಎಲ್ಲ ನಿಯಮಗಳೂ ಜ. 21ರ ವರೆಗೂ ಮುಂದುವರಿಯಲಿವೆ. ಕರೊನಾ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ಸಂಜೆ ಬಳಿಕ ನಡೆದ ಸಭೆಯಲ್ಲಿ ಈ ನಿರ್ಧಾರ ತಳೆಯಲಾಗಿದೆ.

    ಸಿಎಂ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಆರ್.ಅಶೋಕ, ಸಭೆಯ ಮುಖ್ಯಾಂಶಗಳನ್ನು ತಿಳಿಸಿದರು. ಸದ್ಯ ಎಲ್ಲ ತಜ್ಞರು ಟೆಸ್ಟಿಂಗ್ ಜಾಸ್ತಿ ಮಾಡುವ ಅವಶ್ಯಕತೆ ಇಲ್ಲ ಅಂತ ಹೇಳಿದ್ದಾರೆ. ಲಸಿಕೆ ಕಡಿಮೆ ಆಗಿರುವ ಜಿಲ್ಲೆಗಳಲ್ಲಿ ಹೆಚ್ಚು ಗಮನ ಹರಿಸಲು ಸೂಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಪ್ರಿಯಾಂಕ ಉಪೇಂದ್ರ ‘ಉಗ್ರಾವತಾರ’; ‘ಅಯ್ಯೋ ನನ್ನ ದೇವರೇ..’ ಅಂದ್ರು ‘ಟಿಣಿಂಗ ಮಿಣಿಂಗ ಟಿಶ್ಯಾ’ ಸಿಸ್ಟರ್ಸ್…

    ಅಲ್ಲದೆ ತಜ್ಞರ ಪ್ರಕಾರ ಜ.25, 26ರಂದು ಕರೊನಾ ಪ್ರಕರಣಗಳ ಸಂಖ್ಯೆ ಅತಿಯಾಗಲಿದೆ. ಆ ಬಳಿಕ ಪ್ರಕರಣಗಳು ಕಡಿಮ ಆಗಬಹುದು ಎಂದು ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ಜ. 21ರವರೆಗೂ ಈ ವರೆಗೆ ಇರುವ ಎಲ್ಲ ನಿರ್ಬಂಧಗಳೂ ಮುಂದುವರಿಯಲಿವೆ. ನೈಟ್​ ಕರ್ಫ್ಯೂ ಕೂಡ ಯಥಾವತ್ ಮುಂದುವರಿಯಲಿದೆ. ಆದರೆ ಶುಕ್ರವಾರ ಸಿಎಂ ನೇತೃತ್ವದಲ್ಲಿ ಇನ್ನೊಂದು ಸಭೆ ನಡೆಸಲಿದ್ದು, ಅಂದು ವಾರಾಂತ್ಯ ಕರ್ಫ್ಯೂ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು.

    ಹಿಸ್ಟರಿ ರಿಪೀಟ್ಸ್​.. ಇದು ಚರಿತ್ರೆ ಸೃಷ್ಟಿಸೋ ಅವತಾರ: ಭಕ್ತರ ಆವೇಶಕ್ಕೆ ಪೊಲೀಸರ ಸರ್ಪಗಾವಲೂ ತತ್ತರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts