More

    ಸಕಲ ಸಹಕಾರ ನೀಡಲು ಸದಾ ಸಿದ್ಧ

    ಅಥಣಿ: ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಕಲಿಸುವುದು ಅವಶ್ಯ. ಸನಾ ಪಿಯು ಕಾಲೇಜು ರಾಜ್ಯಕ್ಕೆ ಮಾದರಿಯಾಗುವಂತಹ ವಿದ್ಯಾರ್ಥಿಗಳನ್ನು ನೀಡಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

    ಪಟ್ಟಣದ ಸನಾ ಶಿಕ್ಷಣ ವೆಲ್ಫೇರ್ ಸೊಸೈಟಿಯ ಸನಾ ಪಿಯು ಕಾಲೇಜಿನ ಅಡಿಗಲ್ಲು ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಸನಾ ಶಿಕ್ಷಣ ಸಂಸ್ಥೆಗೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ. ಅದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

    ಬೀದರನ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಅಬ್ದುಲ್ ಖಾದಿರ್ ಮಾತನಾಡಿ, ನನ್ನ ಶಿಷ್ಯ ಗುರುವನ್ನು ಮೀರಿಸುವಂತೆ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಸನಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಖಲೀಲ್ ಬಾಗವಾನ ಮಾತನಾಡಿ, 2015ರಲ್ಲಿ ಕೇವಲ 5 ವಿದ್ಯಾರ್ಥಿಗಳಿಂದ ಆರಂಭವಾದ ಕೋಚಿಂಗ್ ಕ್ಲಾಸ್ ಇಂದು 300 ವಿದ್ಯಾರ್ಥಿಗಳನ್ನು ತಲುಪಿದೆ. ಈಗಾಗಲೆ ಇಬ್ಬರು ವಿದ್ಯಾರ್ಥಿಗಳು ಎಂಬಿಬಿಎಸ್ ಹಾಗೂ ಇಬ್ಬರು ಬಿಎಎಂಎಸ್‌ಗೆ ಆಯ್ಕೆಯಾಗಿದ್ದಾರೆ. ಗಡಿಭಾಗದ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯ ಒದಗಿಸುತ್ತಿದ್ದೇವೆ ಎಂದರು.

    ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿದರು. ಅಗಡಿಯ ಗುರುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಗಣ್ಯರಾದ ಮುಫ್ತ್ತಿ ಹಬೀಬ್‌ಉಲ್ಲಾ ಕಾಸ್ಮಿ, ಮೌಲಾನಾ ಅಬ್ಬಾಸ್ ಜಾಮಿಯಾ, ಇರ್ಷಾದ್ ನಾಯಕವಾಡಿ, ಅರ್ಷದ್‌ಹುಸೇನ್ ಗದ್ಯಾಳ, ಗಜಾನನ ಮಂಗಸೂಳಿ, ರಾವಸಾಬ ಐಹೊಳೆ, ರಫೀಕ್ ಡಾಂಗೆ, ಖಾಲೀದ್ ಬಾಗವಾನ, ಯೂನೀಸ್ ಮುಲ್ಲಾ, ಎಲ್.ಎನ್.ಬನಜವಾಡ, ಎಂ.ಬಿ.ಬಾಗವಾನ, ಮಹಮದ್ ಬಾಗವಾನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts