More

    ಈ ರಾಜ್ಯದಲ್ಲಿ ಎಲ್ಲ ವಯಸ್ಕರಿಗೂ ಉಚಿತ ಕರೊನಾ ಲಸಿಕೆ !

    ಡೆಹ್ರಾಡೂನ್ : ಕೇಂದ್ರ ಸರ್ಕಾರವು ಮೇ 1 ರಿಂದ ಲಸಿಕೆ ಉತ್ಪಾದಕರಿಂದ ನೇರವಾಗಿ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳು ಹಣ ನೀಡಿ ಲಸಿಕೆಗಳನ್ನು ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಈಗ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಲಸಿಕೆಗಳನ್ನು ವಿನಿಯೋಗಿಸುವ ಮಾರ್ಗಗಳನ್ನು ರೂಪಿಸಬೇಕಿದೆ.

    ಕೇಂದ್ರ ಸರಕಾರದ ಆದೇಶದಲ್ಲಿ ಸರಕಾರಿ ಲಸಿಕಾ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಉಚಿತವಾಗಿ ಲಸಿಕೆ ನೀಡುವ ನಿರ್ದೇಶನವಿದೆ. ಆದರೆ ಉತ್ತರಾಖಂಡದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲೂ ಉಚಿತವಾಗಿ ಕರೊನಾ ಲಸಿಕೆ ನೀಡಲಾಗುವುದು ಎಂದು ರಾಜ್ಯದ ಸಿಎಂ ತೀರಥ್ ಸಿಂಗ್ ರಾವತ್ ಘೋಷಿಸಿದ್ದಾರೆ.

    ಸುಮಾರು 1 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಉತ್ತರಾಖಂಡದಲ್ಲಿ ಇಂದು 4,339 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 1,179 ಜನ ಗುಣಮುಖರಾಗಿದ್ದರೆ, 49 ಜನ ಸಾವನ್ನಪ್ಪಿದ್ದಾರೆ. ಒಟ್ಟು 29,949 ಸಕ್ರಿಯ ಪ್ರಕರಣಗಳಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಚಿಕ್ಕ ವಯಸ್ಸಿನಲ್ಲೇ ಮರೆಯಾದ ನಟ ಅಮಿತ್ ಮಿಸ್ತ್ರಿ

    ಮದುವೆ ನಿಶ್ಚಯ ಮಾಡಿ ಹಿಂತಿರುಗುತ್ತಿದ್ದರು… ಸೇತುವೆ ದಾಟುವಾಗ ನಡೆಯಿತು ದುರಂತ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts