More

    ಕೆಲಸ ಇಲ್ಲದಿದ್ದರೂ ವಿಚ್ಛೇದಿತ ಪತ್ನಿಗೆ ಜೀವನಾಂಶ ಕೊಡಲೇಬೇಕು!

    ಲಕನೌ: ವಿಚ್ಛೇದನ ಪ್ರಕರಣದಲ್ಲಿ ಒದಗಿಸಲಾದ ಜೀವನಾಂಶಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬೇರ್ಪಟ್ಟ ಪತ್ನಿಗೆ ಕೆಲಸ ಇಲ್ಲದಿದ್ದರೂ ಜೀವನಾಂಶ ನೀಡುವುದು ಪತಿಯ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದೆ.

    ಇದನ್ನೂ ಓದಿ:ಫ್ರೀ ಬಸ್ ಪ್ರಯಾಣ: ತೆಲಂಗಾಣದಲ್ಲಿ 45 ದಿನದಲ್ಲಿ 12 ಕೋಟಿ ಮಹಿಳೆಯರು ಸಂಚಾರ!

    ನಿರುದ್ಯೋಗಿಯಾಗಿರುವ ಕಾರಣ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂಬ ಪತಿಯ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ.ಈ ವೇಳೆ ಪತಿ ಕೂಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

    ಉತ್ತರ ಪ್ರದೇಶದ ದಂಪತಿ 2015ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಮತ್ತು ಆತನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಿಚ್ಛೇದನ ನೀಡಿತ್ತು. ದೂರವಾಗಿರುವ ಪತ್ನಿಗೆ ಅಡಿಯಲ್ಲಿ ಮಾಸಿಕ ರೂ.2 ಸಾವಿರ ನೀಡುವಂತೆ ಆದೇಶಿಸಿತ್ತು. ಅಂತಹ ಮಾಸಿಕ ಜೀವನಾಂಶವನ್ನು ಪಾವತಿಸುವ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಪತಿ 2023ರ ಫೆಬ್ರವರಿ 21ರಂದು ಹೈಕೋರ್ಟ್ ಮೆಟ್ಟಿಲೇರಿದ್ದ.

    ತನ್ನ ಪತ್ನಿ ಶಿಕ್ಷಕಿಯಾಗಿ ತಿಂಗಳಿಗೆ 10 ಸಾವಿರ ರೂ.ವೇತನ ಪಡೆಯುತ್ತಿದ್ದರೂ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಪರಿಗಣಿಸಿಲ್ಲ ಎಂದು ಹೈಕೋರ್ಟ್ ನಲ್ಲಿ ವಾದ ಮಂಡಿಸಿದರು. ತಾನು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ತಿಳಿಸಿದರು. ಬಾಡಿಗೆ ನಿವಾಸದಲ್ಲಿ ವಾಸವಿರುವುದರಿಂದ ತಂದೆ-ತಾಯಿ, ಸಹೋದರಿಯರು ಕೂಡ ತನ್ನ ಮೇಲೆ ಅವಲಂಬಿತರಾಗಿದ್ದಾರೆ ಎಂದು ಮನವಿ ಮಾಡಿದರು. ಆದರೆ, ಪತ್ನಿ ತಿಂಗಳಿಗೆ ರೂ.10 ಸಾವಿರ ವೇತನ ಪಡೆಯುತ್ತಿದ್ದುದನ್ನು ನ್ಯಾಯಾಲಯದ ಮುಂದೆ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.

    ಅಕಾಡೆಮಿ ಮ್ಯೂಸಿಯಂ ಗಾಲಾದಲ್ಲಿ ಭಾಗವಹಿಸಿದ ಮೊದಲ ಭಾರತೀಯ ನಟಿ ದೀಪಿಕಾ: ವಿಶೇಷತೆ ಏನು?

    ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರೇಣು ಅಗರ್‌ವಾಲ್ ಅವರು ಎರಡೂ ಕಡೆಯ ವಾದವನ್ನು ಆಲಿಸಿ, ನೌಕರಿ ಇಲ್ಲದಿದ್ದರೂ ಪತ್ನಿಗೆ ಜೀವನಾಂಶ ನೀಡಬೇಕು ಎಂದು ಸ್ಪಷ್ಟಪಡಿಸಿದರು. ಕೂಲಿ ಮಾಡಿ ದಿನಕ್ಕೆ ಕನಿಷ್ಠ 300 ರಿಂದ 400 ರೂ. ಗಳಿಸಬಹುದು ಎಂದು ಹೇಳಿ ಪತಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts