More

    ಅಮೆರಿಕದ ಕ್ರಿಕೆಟಿಗನಿಗೆ ಒಲಿದುಬಂತು ಐಪಿಎಲ್​ ಅವಕಾಶ

    ನವದೆಹಲಿ: ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಮೆರಿಕದ ಕ್ರಿಕೆಟಿಗನೊಬ್ಬ ಆಡುವ ಅವಕಾಶ ಪಡೆದಿದ್ದಾನೆ. ಅಮೆರಿಕದ ವೇಗದ ಬೌಲರ್ ಅಲಿ ಖಾನ್ ಅವರನ್ನು ಕೋಲ್ಕತ ನೈಟ್‌ರೈಡರ್ಸ್‌ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

    ಇಂಗ್ಲೆಂಡ್‌ನ ಗಾಯಾಳು ವೇಗಿ ಹ್ಯಾರಿ ಗುರ್ನಿ ಅಲಭ್ಯತೆಯಿಂದ ತೆರವಾಗಿದ್ದ ಸ್ಥಾನವನ್ನು 29 ವರ್ಷದ ಅಲಿ ಖಾನ್ ತುಂಬಲಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ ಟ್ರಿನ್‌ಬಾಗೊ ನೈಟ್‌ರೈಡರ್ಸ್‌ ಪರ ಆಡಿ 8 ಪಂಧ್ಯಗಳಲ್ಲಿ ಅಷ್ಟೇ ವಿಕೆಟ್ ಕಬಳಿಸಿದ್ದ ಅಲಿ ಖಅನ್, 2018ರ ಗ್ಲೋಬಲ್ ಟಿ20 ಕೆನಡ ಟೂರ್ನಿಯಲ್ಲೂ ಗಮನ ಸೆಳೆದಿದ್ದರು.

    ಇದನ್ನೂ ಓದಿ: ಕೆವಿನ್ ಪೀಟರ್ಸೆನ್ ಪ್ರಕಾರ ಈ ತಂಡವೇ ಐಪಿಎಲ್-2020 ಗೆಲ್ಲಲಿದೆ!

    ಗಂಟೆಗೆ 140 ಕಿಮೀ. ವೇಗದಲ್ಲಿ ಚೆಂಡೆಸೆಯಬಲ್ಲ ಪಾಕಿಸ್ತಾನ ಮೂಲದ ಅಲಿ ಖಾನ್, ಮಾರಕ ಯಾರ್ಕರ್ ಕೂಡ ಎಸೆಯುತ್ತಾರೆ. ಟ್ರಿನ್‌ಬಾಗೊ ಮತ್ತು ಕೋಲ್ಕತ ನೈಟ್‌ರೈಡರ್ಸ್ ಫ್ರಾಂಚೈಸಿಯ ಮಾಲೀಕರು (ಶಾರುಖ್ ಖಾನ್) ಮತ್ತು ಕೋಚ್ (ಬ್ರೆಂಡನ್ ಮೆಕ್ಕಲಂ) ಒಬ್ಬರೇ ಆಗಿರುವುದರಿಂದ ಅಲಿ ಖಾನ್ ಸಾಮರ್ಥ್ಯವನ್ನು ಅರಿತುಕೊಂಡಿದ್ದಾರೆ.

    ಶ್ರೀಶಾಂತ್ ನಿಷೇಧ ಮುಕ್ತಾಯಕ್ಕೆ ಅಭಿಮಾನಿಗಳ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts