More

    ಕಿಲ್ಲರ್​ ಕರೊನಾಗೆ ರಾಮಬಾಣವಾಯ್ತಾ ಪಾಚಿ ಕಡಲೆ ಮಿಠಾಯಿ…?

    ಮೈಸೂರು: ಕರೊನಾ ವೈರಸ್​ ಕಬಂಧಬಾಹುವಿನಿಂದ ತಪ್ಪಿಸಿಕೊಳ್ಳಲು ಸರ್ಕಾರ ಹಾಗೂ ಜನರು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಕರೊನಾಗೆ ಇನ್ನು ಲಸಿಕೆ ಕಂಡುಹಿಡಿದಿಲ್ಲವಾದ್ದರಿಂದ ದೇಹದ ಕ್ಷಮತೆ ಹೆಚ್ಚಿಸಿಕೊಳ್ಳುವುದೊಂದೆ ದಾರಿ. ಅದಕ್ಕಾಗಿ ಇಂಥದ್ದೇ ಆಹಾರಗಳನ್ನು ಸೇವಿಸಬೇಕೆಂದು ಸರ್ಕಾರ ಹಾಗೂ ವೈದ್ಯರು ಜನರಿಗೆ ಸಲಹೆ ನೀಡುತ್ತಿದ್ದಾರೆ.

    ದೇಹದ ಕ್ಷಮತೆ ಹೆಚ್ಚಿಸಿಕೊಳ್ಳಲು ಪಾಚಿ ಕಡಲೆ ಮಿಠಾಯಿ ಸಹಕಾರಿ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ(ಸಿಎಫ್‌ಟಿಆರ್‌ಐ)ಯ ಉತ್ಪನ್ನ‌ವಾಗಿದ್ದು, ಸಮುದ್ರ ಪಾಚಿ ಬಳಿಸಿಕೊಂಡು ಪಾಚಿ ಮಿಠಾಯಿ ತಯಾರಿಸಲಾಗುತ್ತದೆ.

    ಇದನ್ನೂ ಓದಿ: ವಿಚಿತ್ರ ಕಾಯಿಲೆಯಿಂದ ಪ್ರತಿನಿತ್ಯ ನೋವುಂಡು ಬದುಕುತ್ತಿರೋ ವ್ಯಕ್ತಿಯ ಕಣ್ಣೀರ ಕತೆಯಿದು!

    ಕರೊನಾ ರೋಗಿಗಳಿಗೆ ಹಾಗೂ ಕರೊನಾ ವಾರಿಯರ್ಸ್‌ಗೆ ನೀಡಲು ಬಳಕೆ ಮಾಡಲಾಗುತ್ತಿದ್ದು, ಸಿಎಫ್‌ಟಿಆರ್‌ಐ ಮೂಲಕ ಅಗತ್ಯ ಇರುವ ಕಡೆ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಮೈಸೂರು, ಬೆಂಗಳೂರು ಹಾಗೂ ಮಂಡ್ಯದಲ್ಲಿ ಬಳಕೆ ಮಾಡಲಾಗಿದದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೂ ವಿತರಣೆ ಮಾಡಲಾಗಿದೆ.

    ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಮತ್ತಷ್ಟು ಬೇಡಿಕೆ ಬಂದಿದ್ದು, ಸಿಎಫ್‌ಟಿಆರ್‌ಐ ಬಂದ್ ಆಗಿರುವ ಹಿನ್ನೆಲೆಯಲ್ಲಿ ಸರ್ಟಿಫೈಯ್ಡ್ ಫ್ಯಾಕ್ಟರಿಯಿಂದ ಸಿಎಫ್‌ಟಿಆರ್‌ಐ ನೀಡುವ ಫಾರ್ಮುಲಾ ಬಳಸಿ ಪಾಚಿ ಮಿಠಾಯಿ ತಯಾರು ಮಾಡಲಾಗುತ್ತಿದೆ.

    ಇದನ್ನೂ ಓದಿ: VIDEO| ಭಾರತದಲ್ಲಿ ಎರಡು ತಲೆ ಹಾವು ಪತ್ತೆ: ಇದರ ವಿಶೇಷತೆ ಕೇಳಿದ್ರೆ ಶಾಕ್ ಆಗ್ತೀರಾ!

    ಮೊದಲು ಸಮುದ್ರಪಾಚಿ ಉತ್ಪಾದನೆ ಮಾಡಿ ನಂತರ ಕಡಲೆ ಮಿಠಾಯಿಗೆ ಮಿಶ್ರಣ ಮಾಡಲಾಗುತ್ತದೆ. ಈಗಾಗಲೇ 1.7 ಟನ್ ಸ್ಪಿರುಲಿನಾ ಚಿಕ್ಕಿ ತಯಾರಿಸಿ ಖಾಸಗಿ ಫ್ಯಾಕ್ಟರಿ ಸರಬರಾಜು ಮಾಡಿದೆ. ಒಂದು‌ ಪೀಸ್ ಪಾಚಿ ಕಡಲೆಕಾಯಿ ಮಿಠಾಯಿಂದ 15% ಪ್ರೋಟೀ‌ನ್ ಸಿಗುತ್ತದೆ. ನಾವು ಸದ್ಯ ತಿನ್ನುವ ಸಾಮಾನ್ಯ ಆಹಾರಕ್ಕಿಂತ ಸ್ಪಿರುಲಿನ ಚಿಕ್ಕಿಯಲ್ಲಿ ಹೆಚ್ಚಿನ ಪ್ರೋಟೀನ್ ಸಿಗುತ್ತದೆ. (ದಿಗ್ವಿಜಯ ನ್ಯೂಸ್​)

    ಕೊಡವ ಜನಾಂಗದ ವಿರುದ್ಧ ಅವಹೇಳನಕಾರಿ ಪೋಸ್ಟ್: ಯುವಕನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts