More

    ಧಾರವಾಡ ಸೋಂಕು ಪೀಡಿತ ಪ್ರದೇಶದಲ್ಲಿ ಅಲರ್ಟ್

    ಧಾರವಾಡ: ನಗರದ ವ್ಯಕ್ತಿಯಲ್ಲಿ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಭಾನುವಾರ ನಗರ ನೈರ್ಮಲ್ಯ ಕಾರ್ಯ ಕೈಗೊಂಡಿತು. ನಗರದ ಹೊಸಯಲ್ಲಾಪುರ ಸೇರಿ ಅವಳಿನಗರದ ವಿವಿಧ ಸ್ಥಳಗಳಲ್ಲಿ ಪೌರ ಕಾರ್ವಿುಕರು ಸೋಡಿಯಂ ಹೈಪೋ ಕ್ಲೋರೈಡ್​ಯುುಕ್ತ ರಾಸಾಯನಿಕ ಮಿಶ್ರಿತ ನೀರಿನಿಂದ ಶುಚಿಗೊಳಿಸುವ ಕಾರ್ಯ ಕೈಗೊಂಡರು.

    ಧಾರವಾಡದ ಹೊಸಯಲ್ಲಾಪುರ, ಕೋಳಿಕೆರೆ, ಪಾರ್ಶ್ವನಾಥ ಕಾಲನಿ, ಜಿಲ್ಲಾ ಆಸ್ಪತ್ರೆ, ಬಸ್ ನಿಲ್ದಾಣ, ಹುಬ್ಬಳ್ಳಿಯ ಕಿಮ್್ಸ, ಚಿಟಗುಪ್ಪಿ ಆಸ್ಪತ್ರೆ, ಗಣೇಶಪೇಟೆ, ಮೀನು ಮಾರುಕಟ್ಟೆ, ಕಾಯಿಪಲ್ಲೆ ಮಾರುಕಟ್ಟೆ, ಸಿಬಿಟಿ, ಬಸ್ ನಿಲ್ದಾಣಗಳು, ಇತರ ಜನನಿಬಿಡ ಸ್ಥಳಗಳನ್ನು ಶುಚಿಗೊಳಿಸಲಾಯಿತು.

    ವಾಹನಗಳಿಗೆ ಸಿಂಪಡಣೆ: ಧಾರವಾಡ ನಗರದ ನುಗ್ಗಿಕೇರಿ, ಕೆಲಗೇರಿ ಹಾಗೂ ಕೃಷಿ ವಿಶ್ವವಿದ್ಯಾಲಯದ ಬಳಿ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿ ಸರದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಜಂಟಿ ಆಯುಕ್ತ ಅಜೀಜ್ ದೇಸಾಯಿ, ಪರಿಸರ ಇಂಜಿನಿಯರ್ ವಿಜಯಕುಮಾರ, ಇತರ ಅಧಿಕಾರಿಗಳು, ಸಿಬ್ಬಂದಿ ಬೆಳಗ್ಗೆಯಿಂದಲೇ ನಿರಂತರವಾಗಿ ಭೇಟಿ ನೀಡಿದ್ದರು. ಈ ಎಲ್ಲ ರಸ್ತೆಗಳಲ್ಲಿ ಬೇರೆಡೆಯಿಂದ ಆಗಮಿಸುವ ವಾಹನಗಳಿಗೆ ಸೋಡಿಯಂ ಹೈಪೋ ಕ್ಲೋರೈಡ್ ಸಿಂಪಡಣೆ ಮತ್ತು ವ್ಯಕ್ತಿಗಳ ಥರ್ಮಲ್ ಸ್ಕ್ರೀನಿಂಗ್ ಕಾರ್ಯ ನಡೆಸಲಾಯಿತು.

    ಕಲಘಟಗಿಯಲ್ಲಿ ಶೋಧ: ಕೆಲ ದಿನಗಳ ಹಿಂದೆ ದುಬೈನಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿಯೋರ್ವನಿಗಾಗಿ ಕಲಘಟಗಿ ಪೊಲೀಸರು ಶೋಧ ನಡೆಸಿದ್ದಾರೆ. ಕರೊನಾ ಭೀತಿಯ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದುಕೊಂಡಿದೆ. ವ್ಯಕ್ತಿಯೊಬ್ಬ ಮಾ. 10ರಂದು ಭಾರತಕ್ಕೆ ಬಂದಿದ್ದಾರೆ ಎಂದು ಆರೋಗ್ಯ ಇಲಾಖೆ, ಕಲಘಟಗಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಇದನ್ನು ಆಧರಿಸಿ ಪೊಲೀಸರು ಆತನ ಕಲಘಟಗಿ ವಿಳಾಸದಲ್ಲಿ ಹುಡುಕಾಡಿದ್ದರು. ಆದರೆ, ಅವರು ಅಲ್ಲಿ ವಾಸವಿಲ್ಲ ಎಂಬುದು ಗೊತ್ತಾಗಿದೆ. ಬಳಿಕ ಮೊಬೈಲ್​ಗೆ

    ಕರೆ ಮಾಡಿದಾಗ, ತಾನು 2 ವರ್ಷಗಳ ಹಿಂದೆ ಕಲಘಟಗಿಯಲ್ಲಿ ಇದ್ದೆ. ಈಗ ಹುಬ್ಬಳ್ಳಿಯಲ್ಲಿ ಇದ್ದೇನೆ ಎಂದು ಹೇಳಿದ್ದರು. ಆದರೆ, ಮೊಬೈಲ್ ಲೊಕೇಶನ್ ಪರಿಶೀಲಿಸಿದಾಗ ದಾಂಡೇಲಿ ಬಾರ್ಚಿ ರಸ್ತೆ ಎಂದು ತೋರಿಸಿದೆ. ಇದೀಗ ಕಲಘಟಗಿ ಪೊಲೀಸರು ದಾಂಡೇಲಿ ಪೊಲೀಸರಿಗೆ ಮಾಹಿತಿ ಕಳುಹಿಸಿ ಪತ್ತೆಗೆ ಕೋರಿದ್ದಾರೆ.

    ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ: ಧಾರವಾಡ ಹೊಸಯಲ್ಲಾಪುರ ಪ್ರದೇಶದ ಓರ್ವ ವ್ಯಕ್ತಿಗೆ ಕೋವಿಡ್ 19 ಕರೊನಾ ಪಾಸಿಟಿವ್ ವರದಿ ಬಂದಿದೆ. ಇಂಥ ಸಂದರ್ಭದಲ್ಲಿ ಕೆಲವರು ಕಾಲ್ಪನಿಕ ಹೆಸರಿನೊಂದಿಗೆ ಬೇರೊಬ್ಬ ಆರೋಗ್ಯವಂತ ವ್ಯಕ್ತಿಯ ಫೋಟೋವನ್ನು ವಾಟ್ಸ್ ಆಪ್​ನಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ದುಷ್ಟ ಕೆಲಸ ಮಾಡಿದ್ದಾರೆ. ಅಂಥ ಸುಳ್ಳು ಸುದ್ದಿಗಳನ್ನು ಸೃಷ್ಟಿಸುವವರು ಮತ್ತು ಫಾರ್ವರ್ಡ್ ಮಾಡುವವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜನತೆ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಬೇಕು. ಸುಳ್ಳು ವದಂತಿಗಳನ್ನು ಹರಡಿ ಸಮಾಜದಲ್ಲಿ ಆತಂಕ ಸೃಷ್ಟಿಸಬಾರದು. ಅನಗತ್ಯ ಗೊಂದಲಗಳಿಗೆ ಆಸ್ಪದ ಮಾಡಿಕೊಡಬಾರದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts