More

    ತಿಗರಿ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ತಾತ್ಕಾಲಿಕ ಶೌಚಗೃಹ ವ್ಯವಸ್ಥೆ ಮಾಡಿದ ಗ್ರಾಪಂ

    ಅಳವಂಡಿ: ತಿಗರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮತ್ತೂರು ಗ್ರಾಮ ಪಂಚಾಯಿತಿ ತಾತ್ಕಾಲಿಕವಾಗಿ ಶೌಚಗೃಹ ವ್ಯವಸ್ಥೆ ಮಾಡಿದೆ. ಶಿಥಿಲಗೊಂಡ ಶೌಚಗೃಹ ಕಟ್ಟಡ ಕೆಡವಿ ಎರಡ್ಮೂರು ತಿಂಗಳಾದರೂ ಕಾಮಗಾರಿ ಆರಂಭಿಸರಲಿಲ್ಲ. ಹೀಗಾಗಿ ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರು ತೀವ್ರ ಸಮಸ್ಯೆ ಎದುರಿಸುವಂತಾಗಿತ್ತು. ವಿದ್ಯಾರ್ಥಿಗಳು ಶಾಲೆ ಪಕ್ಕದ ಮುಳ್ಳುಕಂಟಿ ಮರೆಗೆ ಹೋಗಿ ಜಲಬಾಧೆ ತೀರಿಸಕೊಳ್ಳಬೇಕಾಗಿತ್ತು. ಈ ಕುರಿತು ವಿಜಯವಾಣಿ ನ.30ರಂದು ‘ಶೌಚಕ್ಕೆ ಮುಳ್ಳು ಕಂಟಿ ಮರೆಯೇ ಆಸರೆ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಮತ್ತೂರು ಗ್ರಾಪಂ, ಶಾಲಾ ಆವರಣದಲ್ಲಿ ಟಿನ್‌ಶೆಡ್ ಮೂಲಕ ತಾತ್ಕಾಲಿಕ ಶೌಚಗೃಹ ನಿರ್ಮಾಣ ಮಾಡಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅನುಕೂಲವಾಗಿದೆ. ಈ ಕುರಿತು ಪಿಡಿಒ ಅಕ್ಬರ್ ಪ್ರತಿಕ್ರಿಯಿಸಿ, ಸದ್ಯ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದು, ಶೀಘ್ರವೇ ನೂತನ ಶೌಚಗೃಹ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts