More

    ಮುರ್ಲಾಪುರ ಗ್ರಾಮಕ್ಕೆ ಬಸ್ ಸಂಚಾರ ಮರು ಆರಂಭ

    ಅಳವಂಡಿ: ಸತತ ಮಳೆಯಿಂದ ಹಾಳಾಗಿದ್ದ ಸಮೀಪದ ಮುರ್ಲಾಪುರ-ಮುಂಡರಗಿ ರಸ್ತೆ ಸದ್ಯ ತಾತ್ಕಾಲಿಕ ದುರಸ್ತಿ ಕಾಣುತ್ತಿದೆ. ಸ್ಥಗಿತಗೊಂಡಿದ್ದ ಬಸ್ ಸಂಚಾರ ಮರು ಆರಂಭವಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ಸುಮಾರು ಮೂರು ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಮುರ್ಲಾಪುರ ಹತ್ತಿರದ ಹಿರೇಹಳ್ಳ ತುಂಬಿ ಹರಿದಿದ್ದರಿಂದ ಮುರ್ಲಾಪುರ-ಮುಂಡರಗಿ ಮಾರ್ಗದ ಸುಮಾರು 100 ಮೀಟರ್ ರಸ್ತೆ ಸಂಪೂರ್ಣ ಹಾಳಾಗಿ ಕೆಸರು ತುಂಬಿತ್ತು. ಇದರಿಂದ ಗ್ರಾಮದ ಸಂಚಾರ ಸಂಪರ್ಕ ಬಂದ್ ಆಗಿತ್ತು. ವಾಣಿಜ್ಯ ವ್ಯವಹಾರ, ಶಿಕ್ಷಣ ಸೇರಿ ಇತರ ವ್ಯವಹಾರ ಮಾಡಲು ಆರೇ ಕಿಮೀ ಅಂತರವಿರುವ ಮುಂಡರಗಿಗೆ ತೆರಳಲು 25 ಕಿಮೀ ಸುತ್ತಿ ಬಳಸಿ ಪ್ರಯಾಣಿಸಬೇಕಾದ ಪರಿಸ್ಥಿತಿ ಇತ್ತು.

    ಈ ಸಮಸ್ಯೆ ಬಗ್ಗೆ ವಿಜಯವಾಣಿ ಆ.28 ರಂದು ‘ಮುರ್ಲಾಪುರ ರಸ್ತೆ ಪೂರ್ಣ ಹಾಳು’ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು. ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಲೋಕೊಪಯೋಗಿ ಇಲಾಖೆ ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೆ ಕ್ರಮ ಕೈಕೊಂಡಿತ್ತು. ಈಗ ಗ್ರಾಮಕ್ಕೆ ಬಸ್ ಸಂಚಾರ ಪ್ರಾರಂಭಗೊಂಡಿದ್ದು, ಗ್ರಾಮಸ್ಥರು ಪತ್ರಿಕೆ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮುರ್ಲಾಪುರ ರಸ್ತೆ ತಾತ್ಕಾಲಿಕವಾಗಿ ದುರಸ್ತಿಯಾಗಿದ್ದರಿಂದ ಗ್ರಾಮಕ್ಕೆ ಬಸ್ ಸಂಚಾರ ಮತ್ತೆ ಆರಂಭಿಸಲಾಗಿದೆ.
    | ಬಸವರಾಜ ಬಟ್ಟೂರ ಡಿಪೋ ಮ್ಯಾನೇಜರ್, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts