More

    ನಿರ್ಭೀತಿಯಿಂದ ಹಕ್ಕು ಚಲಾಯಿಸಿ- ಹಟ್ಟಿ ಗ್ರಾಪಂ ಪಿಡಿಒ ರತ್ನವ್ವ ಸಲಹೆ

    ಅಳವಂಡಿ: ಸಂವಿಧಾನ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡಿದ್ದು ಕಡ್ಡಾಯವಾಗಿ ಚಲಾಯಿಸಿ ಹಾಗೂ ಇತರರರಿಗೂ ಜಾಗೃತಿ ಮೂಡಿಸಬೇಕು ಎಂದು ಪಿಡಿಒ ರತ್ನವ್ವ ಕಂಬಳಿ ತಿಳಿಸಿದರು.

    ರಘುನಾಥನಹಳ್ಳಿಯಲ್ಲಿ ಹಟ್ಟಿ ಗ್ರಾಪಂನಿಂದ ಮಂಗಳವಾರ ಹಮ್ಮಿಕೊಂಡಿದ್ದ ಚುನಾವಣಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತದಾನದಿಂದ ಸದೃಢ ದೇಶ ನಿರ್ಮಾಣ ಸಾಧ್ಯ ಎಂದರು.

    ಇದನ್ನೂ ಓದಿ: ಮತದಾನ ಪ್ರಮಾಣ ಹೆಚ್ಚಳಕ್ಕೆ ಸಹಕರಿಸಿ

    ವೈದ್ಯಾಧಿಕಾರಿ ಡಾ.ಸಿ.ಸಿ.ವಾಚದಮಠ ಮಾತನಾಡಿ, ಸರ್ಕಾರ ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದು, ಪ್ರತಿ ಗ್ರಾಮದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದೆ. ಜನ ಇದರ ಉಪಯೋಗ ಪಡೆಯಬೇಕು. ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಹಕ್ಕು ಚಲಾಯಿಸಬೇಕೆಂದರು.

    ಇದೇವೇಳೆ ಚುನಾವಣಾ ಜಾಗೃತಿ ಪ್ರತಿಜ್ಞಾ ವಿಧಿ ಸ್ವೀಕಾರ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ, ಜಿಲ್ಲಾ ಆರೋಗ್ಯ ಇಲಾಖೆ, ಕವಲೂರು ಪಿಎಚ್‌ಸಿ, ಬೆಳಗಟ್ಟಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಆಶ್ರಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.

    ನೇತ್ರಾಧಿಕಾರಿ ಸಿದ್ದಪ್ಪ ಕಲ್ಯಾಣಿ, ಗ್ರಾಪಂ ಕಾರ್ಯದರ್ಶಿ ಮಂಜುನಾಥಯ್ಯ, ಸಿಬ್ಬಂದಿ ಲಕ್ಷ್ಮಣ, ನೀಲಕಂಠಪ್ಪ, ಅರೋಗ್ಯ ಇಲಾಖೆಯ ವಸಂತ ಗದ್ದಿಕೇರಿ, ಗವಿಸಿದ್ದಪ್ಪ ಗೊಂದಿಹೊಸಳ್ಳಿ, ಸುಜಾತಾ ಇಟಗಿ, ಪ್ರಮುಖರಾದ ರಾಮಪ್ಪ ಕಾಳಿ, ಶಿವಪ್ಪ ಉಪ್ಪಾರ, ಶಿವಪುತ್ರಪ್ಪ, ಬಸವರಾಜ ಕಮತರ, ಲಕ್ಷ್ಮಣ ಉಪ್ಪಾರ, ಯಲ್ಲಪ್ಪ ಕಮತರ, ಪ್ರಕಾಶ ಕಮತರ, ಬಸಪ್ಪ ಹರಿಜನ, ಯಮನಪ್ಪ ಪೂಜಾರ, ಶಿವರಾಜ ಬೋಚನಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts