More

  ಯುವಪೀಳಿಗೆಗೆ ನಿರ್ದಿಷ್ಟ ಗುರಿಯಿದ್ದರೆ ಯಶಸ್ಸು ಸಾಧ್ಯ

  ಅಳವಂಡಿ: ಯುವಪೀಳಿಗೆ ನಿರ್ದಿಷ್ಟ ಗುರಿಯೊಂದಿಗೆ ಧೈರ್ಯವಾಗಿ ಮುನ್ನುಗ್ಗಿದಾಗ ಮಾತ್ರ ಸಾಧನೆ ಸಾಧ್ಯ ಎಂದು ಪ್ರೊಬೆಷನರಿ ಡಿವೈಎಸ್ಪಿ ರವಿಕುಮಾರ ತಿಳಿಸಿದರು.

  ಗ್ರಾಮದ ಶ್ರೀಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪೊಲೀಸ್ ಠಾಣೆಯಿಂದ ಯುವಕರಿಗೆ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ನಿಮ್ಮನ್ನು ಹಾಳು ಮಾಡುವ ಸಾಮರ್ಥ್ಯ ಬೇರೆ ಯಾರಿಗೂ ಇಲ್ಲ. ಆ ಸಾಮರ್ಥ್ಯ ನಿಮಗೆ ಮಾತ್ರ ಇದೆ. ದುರ್ಜನರ ಸಹವಾಸ ಹಾಗೂ ದುಶ್ಚಟದಿಂದ ಜೀವನ ಹಾಳಾಗುತ್ತದೆ ಎಂದರು.

  ಇದನ್ನೂ ಓದಿ: ಯುವಪೀಳಿಗೆ ಇತಿಹಾಸ ಪುರುಷರನ್ನು ಸ್ಮರಿಸಲಿ

  ಜೀವನದಲ್ಲಿ ಸಾಧಿಸುತ್ತೇನೆಂಬ ದೃಢ ವಿಶ್ವಾಸ ಇದ್ದರೆ, ಸಾಧನೆಯ ಹಾದಿ ಸುಲಭವಾಗಲಿದೆ. ಬೇರೆಯವರ ತಪ್ಪನ್ನು ಹಿಯಾಳಿಸದೆ ನಿಮ್ಮಲ್ಲಿರುವ ತಪ್ಪನ್ನು ತಿದ್ದಿಕೊಳ್ಳಬೇಕು. ಓದುವ ವಯಸ್ಸಿನಲ್ಲಿ ದುಶ್ಚಟ, ಟಿವಿ, ಮೊಬೈಲ್ ಮುಂತಾದವುಗಳಿಗೆ ದಾಸರಾಗಿ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಡಿ.

  ಕಳೆದುಹೋದ ಸಮಯ ಮತ್ತೆಂದೂ ಬಾರದ ಕಾರಣ ಸಮಯಕ್ಕೆ ಬೆಲೆ ಕೊಡುವಂತೆ ಸಲಹೆ ನೀಡಿದರು. ಪಿಎಸ್‌ಐ ಹನುಮಂತಪ್ಪ ನಾಯಕ್, ಎಚ್‌ಸಿ ಮಲ್ಲಪ್ಪ, ಸಿಬ್ಬಂದಿ ಕನಕಪ್ಪ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts