More

    ಜ್ಞಾನಿಯಿಂದ ಮಾತ್ರ ಸಾಧನೆ ಸಾಧ್ಯ

    ಅಳವಂಡಿ: ಮಕ್ಕಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕವನ್ನು ತಲೆತಗ್ಗಸಿ ಓದಿದರೆ, ಪುಸ್ತಕ ನಿಮ್ಮನ್ನು ತಲೆ ಎತ್ತಿ ನಿಲ್ಲುವಂತೆ ಹಾಗೂ ಜ್ಞಾನಿಯನ್ನಾಗಿ ಮಾಡಲಿದೆ. ಜ್ಞಾನಿ ಮಾತ್ರ ಜಗತ್ತಿನಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹಟ್ಟಿ ಗ್ರಾಮ ಪಂಚಾಯಿತಿ ಪಿಡಿಒ ರತ್ನಾ ಹೇಳಿದರು.

    ಸಮೀಪದ ಹಟ್ಟಿ ಗ್ರಾಪಂನಲ್ಲಿ ಕರ್ನಾಟಕ ಆರೋಗ್ಯ ಸಂವರ್ಧನಾ ಸಂಸ್ಥೆ (ಕೆಎಚ್‌ಪಿಟಿ)ಯಿಂದ ಗ್ರಾಪಂ ಗ್ರಂಥಾಲಯಕ್ಕೆ ಮಂಗಳವಾರ ನೀಡಿದ ಸುಮಾರು 500 ಪುಸ್ತಕಗಳನ್ನು ಸ್ವೀಕರಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

    ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಧ್ಯಾರ್ಥಿಗಳು ಭಾಗವಹಿಸಬೇಕಾದರೆ ಸಾಮಾನ್ಯ ಜ್ಞಾನ ಅತ್ಯವಶ್ಯ. ಗ್ರಂಥಾಲಯದಲ್ಲಿ ಸಿಗುವ ಪುಸ್ತಕಗಳನ್ನು ಅಭ್ಯಸಿಸಬೇಕು. ಓದು ನಿಮ್ಮ ಪ್ರತಿದಿನದ ಅಭ್ಯಾಸವಾಗಬೇಕು. ಓದಿಗೆ ಸಮಯ ಮೀಸಲಿಡಿ. ಮೊಬೈಲ್, ಟಿವಿ ನೋಡುತ್ತ ಕಾಲಹರಣ ಮಾಡಬೇಡಿ. ಇದು ನಿಮ್ಮ ಅತ್ಯಮೂಲ್ಯ ಜೀವನ ಹಾಗೂ ಸಮಯ ಹಾಳು ಮಾಡುತ್ತದೆ ಎಂದರು.

    ಕೆಎಚ್‌ಪಿಟಿ ಸಮುದಾಯ ಸಂಘಟಕರಾದ ಯಲ್ಲಪ್ಪ ಮೇಣೆಗಾರ, ಸುಷ್ಮಾ ಸಂಗರಡ್ಡಿ, ಗ್ರಾಪಂ ಸಿಬ್ಬಂದಿಗಳಾದ ಲಕ್ಷ್ಮಣ, ನಾಗಪ್ಪ, ಗ್ರಂಥಪಾಲಕ ರೇವಣಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts