More

    ರಂಗ ಕಲೆಗಳ ಉಳಿವಿಗೆ ಪ್ರೋತ್ಸಾಹ ಅಗತ್ಯ

    ಅಳವಂಡಿ: ರಂಗಭೂಮಿ ಕಲೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಮುಖ್ಯ ಶಿಕ್ಷಕ ಮಾರುತಿ ಕಾತರಕಿ ಹೇಳಿದರು.

    ಇದನ್ನೂ ಓದಿ: ರಂಗಭೂಮಿಗೆ ಪ್ರೋತ್ಸಾಹ ದೊರೆತರೆ ಕಲಾವಿದನ ಬದುಕು ಹಸನು, ರಂಗಕರ್ಮಿ ಚಿದಾನಂದಕುಲುಕರ್ಣಿ ಅಭಿಮತ, ನಾಟಕ ನೋಡುವ ಹವ್ಯಾಸ ಬೆಳೆಸಿಕೊಳ್ಳಿ

    ಸಮೀಪದ ತಿಗರಿ ಗ್ರಾಮದಲ್ಲಿ ಪುಟ್ಟರಾಜ ಗವಾಯಿಗಳ ನಾಟ್ಯ ಸಂಘ ಆಯೋಜಿಸಿದ್ದ ‘ಮಗ ಹೋದರು ಮಾಂಗಲ್ಯ ಬೇಕು’ ಎಂಬ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.

    ರಂಗಭೂಮಿ ಕಲೆಯಲ್ಲಿನ ಸಾಮಾಜಿಕ ಕಳಕಳಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾಟಕ, ಬಯಲಾಟ, ಗೀಗಿಪದ, ಹಂತಿಪದ, ಜಾನಪದ ಮುಂತಾದ ಗ್ರಾಮೀಣ ಕಲೆಗಳ ಪ್ರದರ್ಶನ ಹೆಚ್ಚಬೇಕು. ಇದರಿಂದ ಸಮಾಜ ಪರಿವರ್ತನೆ ಸಾಧ್ಯ. ಯುವಕರಿಗೆ ಈ ಕಲೆಗಳನ್ನು ಪರಿಚಯಿಸುವ ದೃಷ್ಟಿ ಇಟ್ಟುಕೊಂಡು ನಾಟಕಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

    ಪ್ರಮುಖರಾದ ಭೀಮನಗೌಡ, ಚನ್ನಪ್ಪ, ಶಂಕರ, ಪ್ರಭು, ರೇಣುಕವ್ವ, ದುರುಗಪ್ಪ, ಮಾರುತಿ, ಬಸಪ್ಪ, ಗಜಾನನ, ಹನುಮಗೌಡ, ಈಶಪ್ಪ, ಪಕ್ಕೀರಶೆಟ್ಟಿ, ಸುರೇಶ, ರಮೇಶ, ವೀರಭದ್ರಪ್ಪ, ಹಾಲಯ್ಯ, ಉಡಚಪ್ಪ, ಬಸವರಾಜ, ವೀರೇಶ, ಹನುಮೇಶ, ಮಂಜುನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts