More

    ಶಾಲೆಯ ಅಂಗಳದಲ್ಲೇ ತಾರಾಲಯ, ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ

    ಅಳವಂಡಿ: ಸಮೀಪದ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ವರ್ಣಾಜ್ ಟೆಕ್ನಾಲಜಿಸ್ ತಾರೇಜಮೀನ ಪರ್ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಶಾಲೆಯ ಅಂಗಳದಲ್ಲೇ ತಾರಾಲಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ತಾರಾಲಯದ ಕೋಆರ್ಡಿನೇಟರ್ ಚರಂತಯ್ಯ ಬೂಸನೂರಮಠ ಮಾತನಾಡಿ, ಮಕ್ಕಳು ಹಾಗೂ ಶಿಕ್ಷಕರಿಗೆ ಖಗೋಳಶಾಸ್ತ್ರ, ನಕ್ಷತ್ರಪುಂಜ, ನಕ್ಷತ್ರಗಳು, ಆಕಾಶಕಾಯಗಳ ಪರಿಚಯ ಹಾಗೂ ನಭೋಮಂಡಲದ ಬಗ್ಗೆ ಮಾಹಿತಿ ನೀಡಲಿಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ದೇಶದಲ್ಲಿಯೇ ಈ ಯೋಜನೆ ಪ್ರಥಮವಾಗಿ ಕರ್ನಾಟಕದಲ್ಲಿ ಆರಂಭವಾಗಿದೆ. ರಾಜ್ಯದಲ್ಲಿ ಒಟ್ಟು 11 ಸಂಚಾರ ಡಿಜಿಟಲ್ ತಾರಾಲಯ ಕಾರ್ಯನಿರ್ವಹಿಸುತ್ತಿವೆ. ಮೈಸೂರು, ಬೆಂಗಳೂರು, ಬೆಳಗಾವಿ ವಿಭಾಗಗಳು ಹಾಗೂ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಿಗೆ ತಲಾ ಒಂದರಂತೆ ಸಂಚಾರ ತಾರಾಲಯಗಳು ಮಕ್ಕಳಿಗೆ ಮಾಹಿತಿ ನೀಡುತ್ತಿವೆ. ಇವುಗಳ ಸದುಪಯೋಗಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

    ಮುಖ್ಯಶಿಕ್ಷಕ ವೀರಣ್ಣ ಮಟ್ಟಿ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಶಾಲೆ ಅಂಗಳದಲ್ಲೇ ನಭೋಮಂಡಲದ ಕೌತುಕಗಳನ್ನು ನೋಡುವ ಭಾಗ್ಯ ಸಿಕ್ಕಿರುವುದು ಸುದೈವವೇ ಸರಿ ಎಂದರು. ತಾಂತ್ರಿಕ ಸಹಾಯಕ ಚನ್ನಬಸಪ್ಪ ಬೆಂತೂರು, ಶಿಕ್ಷಕರಾದ ಶುಭಮಂಗಳ, ರವಿಕುಮಾರ, ಹಂಪವ್ವ ಪೂಜಾರ, ಶರಾವತಿ, ಗೌತಮಿ, ನೇತ್ರಾವತಿ, ಪ್ರಶಾಂತ, ಮಹಾಲಕ್ಷ್ಮೀ, ಲಕ್ಷ್ಮವ್ವ, ಹನುಮರಡ್ಡಿ, ಲಕ್ಷ್ಮೀ, ಲೋಹಿತ್, ಗವಿಸಿದ್ದಪ್ಪ ಇತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts