More

    ಕುಡಿವ ನೀರಿಗೆ ಬವಣೆ ಬಾರದಿರಲಿ

    ಅಳವಂಡಿ: ಇಲ್ಲಿನ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷೆ ಭಾರತಿ ಬೆಣಕಲ್ ಅಧ್ಯಕ್ಷತೆಯಲ್ಲಿ ಶನಿವಾರ ಸಾಮಾನ್ಯ ಸಭೆ ನಡೆದು ವಿವಿಧ ವಿಷಯ ಕುರಿತು ಚರ್ಚೆ ನಡೆಯಿತು. ಪಿಡಿಒ ಬಸವರಾಜ ಕೀರ್ದಿ, ಕಳೆದ ಸಭೆಯ ನಡಾವಳಿ ಓದಿದರು.

    ಸಾರ್ವಜನಿಕ ಅರ್ಜಿ, ಮಾಸಿಕ ಜಮಾ-ಖರ್ಚು ಕುರಿತ ಚರ್ಚೆ ಜತೆಗೆ, 2023-24ನೇ ಸಾಲಿನ ಅಂದಾಜು ಪತ್ರಿಕೆ ಮಂಡಿಸಲಾಯಿತು. ನರೇಗಾ ಯೋಜನೆಯ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಪ್ರಗತಿ ಪರಿಶೀಲನೆ, ಶುದ್ಧ ನೀರಿನ ಘಟಕಗಳ ದರುಸ್ತಿ, ಗ್ರಾಮದ ಸ್ವಚ್ಛತೆ, ಚರಂಡಿ ತ್ಯಾಜ್ಯ ತೆರವು, ಸ್ವಚ್ಛ ಭಾರತ ಯೋಜನೆಯಡಿ ಮಲತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ, ಸೋಲಾರ್ ಕಂಪನಿಗೆ ನಿರಪೇಕ್ಷಣಾ ಪ್ರಮಾಣ ಪತ್ರ ನೀಡಿಕೆ, ತೋಟಗಾರಿಕೆ ಇಲಾಖೆಗೆ 23-24ನೇ ಸಾಲಿನ ಕ್ರೀಯಾಯೋಜನೆ ಸಲ್ಲಿಸುವ ಬಗ್ಗೆ ಚರ್ಚೆ ನಡೆಯಿತು.

    ಉಪಾಧ್ಯಕ್ಷೆ ಶಂಕ್ರಮ್ಮ ಜೋಗಿನ, ಕಾರ್ಯದರ್ಶಿ ಕೊಟ್ರಪ್ಪ ಅಂಗಡಿ, ಸದಸ್ಯರಾದ ಅನ್ವರ್ ಗಡಾದ, ಹನುಮಂತ ಮೂಲಿಮನಿ, ಹನುಮಂತ ಮೋರನಾಳ, ಗವಿಸಿದ್ದಪ್ಪ, ವಿಶ್ವನಾಥ ದೋತರಗಾವಿ, ಮಂಜುನಾಥ ಬೆದವಟ್ಟಿ, ಪ್ರಶಾಂತಗೌಡ, ಸುವರ್ಣಾ, ಗೌಸ್‌ಬೀ, ರೇಣುಕಾ, ಶಶಿಕಲಾ, ಲಕ್ಷ್ಮವ್ವ, ಮೀನಾಕ್ಷ್ಮೀ, ಹನುಮವ್ವ, ಶಾರಮ್ಮ, ಸಿಬ್ಬಂದಿ ಶಿವಮೂರ್ತಿ, ದೇವೆಂದ್ರರಡ್ಡಿ, ಮಾರುತಿ, ಹನುಮಂತ, ಚಂದ್ರಶೇಖರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts