More

    ಪರಿಹಾರ ಸಿಕ್ಕಿರುವುದು ಹೋರಾಟದ ಫಲ

    ಅಳವಂಡಿ: ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಉಪ ಕಾಲುವೆಗೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಸರ್ಕಾರ ಪರಿಹಾರ ಧನ ಬಿಡುಗಡೆಗೆ ಮಾಡಿದ್ದು, ಗ್ರಾಮದಲ್ಲಿ ಏತ ನೀರಾವರಿ ಹೋರಾಟ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಸಿಹಿ ಹಂಚಿ, ಪಟಾಕಿ ಸಿಡಿಸಿ ಗುರುವಾರ ಸಂಭ್ರಮಿಸಿದರು.

    ಸರ್ಕಾರದಿಂದ ಪರಿಹಾರ ಧನ ಬಿಡುಗಡೆ

    ಕವಲೂರು, ಹಂದ್ರಾಳ, ಅಳವಂಡಿ, ಹಿರೇಸಿಂದೋಗಿ, ಮೈನಹಳ್ಳಿ, ಬಿಕನಳ್ಳಿ, ತಳಕಲ್, ನರಸಿಪುರ, ಕೋಮಲಾಪುರ ಗ್ರಾಮಗಳ ರೈತರ ಜಮೀನುಗಳಿಗೆ ಪರಿಹಾರ ಧನ 9 ಕೋಟಿ ರೂ. ಮಂಜೂರು ಮಾಡಿ ಆದೇಶ ಹೊರಡಿಸಿರುವುದು ರೈತರ ಸಂಭ್ರಮಕ್ಕೆ ಕಾರಣವಾಗಿದೆ.
    ಹಲವಾರು ವರ್ಷ ಕಳೆದರೂ ಪರಿಹಾರಧನ ಬಿಡುಗಡೆ ಮಾಡಿರಲಿಲ್ಲ. ಇದನ್ನು ಖಂಡಿಸಿ ಏತ ನೀರಾವರಿ ಹೋರಾಟ ಸಮಿತಿಯ ಸದಸ್ಯರು ಕೆಲ ದಿನ ಹಿಂದೆ ಗ್ರಾಮದ ನಾಡ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆಯ ಎಸಿ ಹಾಗೂ ಅಧಿಕಾರಿಗಳು ರೈತರಿಗೆ ಪರಿಹಾರ ಹಣ ನೀಡುವ ಭರವಸೆ ನೀಡಿದ್ದರಿಂದ ಸತ್ಯಾಗ್ರಹ ಹಿಂಪಡೆಯಲಾಗಿತ್ತು. ಈಗ ಪರಿಹಾರ ಹಣ ಬಿಡುಗಡೆ ಮಾಡಿರುವುದು ರೈತರಿಗೆ ಸಂತಸ ತರಿಸಿದೆ.

    ಇದನ್ನೂ ಓದಿ: ವಿಜಯೇಂದ್ರ ಆಯ್ಕೆ ಬಗ್ಗೆ ಡಿ. ಸುಧಾಕರ್​ ಪ್ರತಿಕ್ರಿಯೆ

    ಹೋರಾಟ ಸಮಿತಿಯ ಅಧ್ಯಕ್ಷ ಶರಣಪ್ಪ ಜಡಿ ಮಾತನಾಡಿ, ಭೂಮಿ ಕಳೆದುಕೊಂಡ ರೈತರ ಜಮೀನುಗಳಿಗೆ ಸರ್ಕಾರ ಪರಿಹಾರ ಧನ ಬಿಡುಗಡೆಗೆ ಮಾಡಿರುವುದು ಹೋರಾಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ.ಹೋರಾಟದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳು ಎಂದರು.
    ಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯ, ಪ್ರಮುಖರಾದ ದೇವಪ್ಪ ಕಟ್ಟಿಮನಿ, ನಾಗಪ್ಪ ಸವಡಿ, ಭೀಮರಡ್ಡಿ ಗದ್ದೀಕೇರಿ, ಬಸವರಡ್ಡಿ ಮೂಲಿಮನಿ, ಶರಣಪ್ಪ ಜಡಿ, ಜಗನ್ನಾಥರಡ್ಡಿ ದಾಸರಡ್ಡಿ, ಗೂಳರಡ್ಡಿ ತವದಿ, ವಸಂತ ಹಟ್ಟಿ, ವೀರಣ್ಣ ಶೆಟ್ಟರ, ಮಲ್ಲಣ್ಣ ಯರಾಶಿ, ಚಂದ್ರಪ್ಪ ಜಂತ್ಲಿ, ನಂದಪ್ಪ ಹೂಗಾರ, ಪಕೀರೇಶ ಕುರ್ತಕೋಟಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts