More

  ಸೆಪ್ಟಂಬರ್‌ನಲ್ಲಿ ಶಿಕ್ಷಕರ ವರ್ಗಾವಣೆ

  ಆಲಮಟ್ಟಿ: ಸೆಪ್ಟಂಬರ್ 2022ರಿಂದ ಪ್ರಾಥಮಿಕ ಶಾಲೆ ಶಿಕ್ಷಕರ ವರ್ಗಾವಣೆ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಹೇಳಿದರು.ಶಾಸಕರ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆಲಮಟ್ಟಿ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು.

  ಇದೇ ವರ್ಷದಲ್ಲಿ ಎರಡನೇ ಬಾರಿಗೆ ಶಿಕ್ಷಕರ ವರ್ಗಾವಣೆ ಇದಾಗಲಿದ್ದು, ಸಹಸ್ರಾರು ಶಿಕ್ಷಕರಿಗೆ ಅನುಕೂಲವಾಗಲಿದೆ. ವರ್ಗಾವಣೆಗೂ ಮುನ್ನ ಮುಖ್ಯಶಿಕ್ಷಕರ ಹುದ್ದೆಗೆ ಬಡ್ತಿ ಪ್ರಕ್ರಿಯೆಯೂ ನಡೆಯಲಿದೆ ಎಂದರು.

  ಪ್ರಾಥಮಿಕ ಶಾಲೆ ಶಿಕ್ಷಕರಿಂದ ಪದವೀಧರ ಶಿಕ್ಷಕರ ಹುದ್ದೆಗೆ ಪದೋನ್ನತಿ ಸಿ ಆ್ಯಂಡ್ ಆರ್ ನಿಯಮಗಳ ತಿದ್ದುಪಡಿ ಪ್ರಕ್ರಿಯೆ ನಡೆಯುತ್ತಿದ್ದು, ಅಕ್ಟೋಬರ್ ವೇಳೆಗೆ ಪದವೀಧರ ಶಿಕ್ಷಕರ ಹುದ್ದೆಗೆ ಪದೋನ್ನತಿ ನಡೆಯಲಿದೆ ಎಂದು ತಿಳಿಸಿದರು.

  ಎರಡು ವರ್ಷಗಳಿಂದ ಶಿಕ್ಷಣ ಪೂರಕ ಚಟುವಟಿಕೆಗಳು ರದ್ದಾಗಿದ್ದವು. ಈಗ ಪುನಃ ಆರಂಭಗೊಂಡಿದ್ದು, ಶಾಲೆಗಳಲ್ಲಿ ಪ್ರತಿಭೆ, ಸೃಜನಾತ್ಮಕತೆ ಕಲರವ ಮತ್ತೆ ಆರಂಭಗೊಂಡಿವೆ. ಶಾಲೆ ಕಳೆ ಹೆಚ್ಚಿದೆ ಎಂದರು.

  ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ಗೌಡರ, ಆರ್.ಎ.ನದ್ಾ, ಎಂ.ಆರ್.ಮಕಾನದಾರ್, ಬಸವರಾಜ ಯರವಿನ ತೆಲಿಮಠ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts