More

    ಮಕ್ಕಳ ಆಸಕ್ತಿ ಪ್ರೋತ್ಸಾಹಿಸಿ

    ಚಿಕ್ಕಬಳ್ಳಾಪುರ: ಮಕ್ಕಳು ತಮ್ಮಿಷ್ಟದ ಕ್ಷೇತ್ರದಲ್ಲಿ ಸಾಧನೆ ತೋರಲು ಸೂಕ್ತ ರೀತಿಯ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಬಿ ಫೌಜೀಯಾ ತರುನ್ನುಮ್ ಸಲಹೆ ನೀಡಿದರು.

    ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯುಕೆಜಿ ಮಕ್ಕಳ ಗ್ರಾೃಜುಯೇಷನ್ ಡೇ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಪ್ರತಿಯೊಬ್ಬರಿಗೂ ನಿರ್ದಿಷ್ಟ ಗುರಿ, ಸಾಧನೆಯ ಛಲ ಇರಬೇಕು. ಗುರಿ ಮುಟ್ಟಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.

    ಒಳ್ಳೆಯ ವಾತಾವರಣದಲ್ಲಿ ಬೆಳೆದ ಮಗು ದೇಶದ ಸತ್ಪ್ರಜೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಶಾಲೆ ಮತ್ತು ಮನೆಯು ಉತ್ತಮ ವ್ಯಕ್ತಿತ್ವ ರೂಪಿಸುವ ರೀತಿಯಲ್ಲಿರಬೇಕು ಎಂದರು.

    ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು,
    ವಿಶ್ವಮಾನವರಾಗಿ ಜನಿಸಿದ ಮಕ್ಕಳನ್ನು ಸಮಾಜವು ಅಲ್ಪಮಾನವನ್ನಾಗಿಸುತ್ತದೆ ಎಂಬ ಕುವೆಂಪು ಮಾತಿನ ಅರ್ಥ ಅರಿತು ನಾವೆಲ್ಲರೂ ವಿಶ್ವಮಾನವರಾಗಿಯೇ ಬೆಳೆಯಬೇಕು ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಸಲಹೆ ನೀಡಿದರು.

    ಹುಟ್ಟುತ್ತಲೇ ಯಾರೂ ಕೆಟ್ಟವರಾಗಿರುವುದಿಲ್ಲ. ಸುತ್ತಲಿನ ವಾತಾವರಣ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಮಾದರಿಯಾಗಿರಬೇಕು ಎಂದರು.

    ಎಲ್ಲರೂ ಸಾಧನೆಯ ಕನಸು ಕಾಣುತ್ತಾರೆ. ಆದರೆ, ಕೆಲವರು ಮಾತ್ರ ನನಸಾಗಿಸಿಕೊಳ್ಳುತ್ತಾರೆ. ಛಲ ಬಿಡದೇ ಪ್ರಾಮಾಣಿಕವಾಗಿ ಪ್ರಯತ್ನಿಸಿದಾಗ ಗೆಲುವು ಸಿಕ್ಕೇ ಸಿಗುತ್ತದೆ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆ ಸಿಇಒ ಡಾ ಎನ್.ಶಿವರಾಮರೆಡ್ಡಿ ಹುರಿದುಂಬಿಸಿದರು.
    ವಿದ್ಯಾರ್ಥಿಗಳು ಮತ್ತು ಪಾಲಕರ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಬಿಜಿಎಸ್ ಶಾಲಾ ಮುಖ್ಯಶಿಕ್ಷಕ ಡಿ.ಸಿ.ಮೋಹನ್ ಕುಮಾರ್, ಪಿಯು ಕಾಲೇಜು ಪ್ರಾಂಶುಪಾಲ ಮಹದೇವ್, ನಿಲಯ ಪಾಲಕ ಎಚ್.ಎಂ ರಾಜು ಇತರರಿದ್ದರು.

    ಅವಕಾಶಗಳ ಸದ್ವಿನಿಯೋಗಕ್ಕೆ ಸಹಕಾರಿ: ಪುಟಾಣಿಗಳೇ ಕಾರ್ಯಕ್ರಮದ ನಿರೂಪಣೆ ಸೇರಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯ. ಇದು ಅವರಲ್ಲಿ ಧೈರ್ಯ ನೀಡುತ್ತದೆ. ಮುಂದಿನ ದಿನಗಳಲ್ಲಿ ಸಿಗುವ ಮತ್ತಷ್ಟು ಅವಕಾಶಗಳನ್ನು ಸದ್ವಿನಿಯೋಗಪಡಿಸಿಕೊಳ್ಳಲು ಪ್ರೇರಣೆದಾಯಕ ಎಂದು ಜಿಪಂ ಸಿಇಒ ೌಜೀಯ ತರುನ್ನುಮ್ ಅಭಿಪ್ರಾಯಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts