More

    ಅಲ್​​ ಖೈದಾದ ಅಯೋಧ್ಯಾ ಅಜೆಂಡಾ: ಭಾರತ ಹೇಗೆ ಮತಾಂಧ ಬೆದರಿಕೆಯನ್ನು ಎದುರಿಸಬಲ್ಲದು?

    | ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    ಅಲ್​​ ಖೈದಾದ ಅಯೋಧ್ಯಾ ಅಜೆಂಡಾ: ಭಾರತ ಹೇಗೆ ಮತಾಂಧ ಬೆದರಿಕೆಯನ್ನು ಎದುರಿಸಬಲ್ಲದು?ಮುಸ್ಲಿಂ ಭಯೋತ್ಪಾದನಾ ಸಂಘಟನೆ ಅಲ್ ಖೈದಾ ತನ್ನ ಮೂಲಭೂತವಾದಿ ಪತ್ರಿಕೆ ‘ಘಜ್ವಾ ಎ ಹಿಂದ್’ನ ಡಿಸೆಂಬರ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ವರದಿಗಳ ಪ್ರಕಾರ, ಆ ಪತ್ರಿಕೆಯ ಮೂಲಕ ಅಲ್​ ಖೈದಾ ತಾನು ಒಂದಲ್ಲ ಒಂದು ದಿನ ಅಯೋಧ್ಯೆಯ ರಾಮ ಮಂದಿರವನ್ನು ಧ್ವಂಸಗೊಳಿಸಿ, ಆ ಜಾಗದಲ್ಲಿ ಮಸೀದಿ ನಿರ್ಮಿಸುವುದಾಗಿ ಹೇಳಿಕೊಂಡಿದೆ.

    ಅಲ್​ ಖೈದಾ ಅಂದರೇನು?
    ಅಲ್ ಖೈದಾ ಎಂಬುದು ಒಂದು ಮೂಲಭೂತವಾದಿ ಇಸ್ಲಾಮಿಕ್ ಜಿಹಾದಿ ಸಂಘಟನೆಯಾಗಿದ್ದು, ಅದು ಇಸ್ಲಾಮಿಗೆ ಸ್ವಕಲ್ಪಿತ ತೊಂದರೆಯಾದ ಪಾಶ್ಚಾತ್ಯ ಸಂಸ್ಕೃತಿಯ ಅಪಾಯದ ವಿರುದ್ಧ ಹೋರಾಡುವ ಗುರಿ ಹೊಂದಿದೆ. ಅಲ್ ಖೈದಾ ಸಂಘಟನೆ ವಹಾಬಿ ಜೀವನ ಶೈಲಿಯನ್ನು ಬೆಂಬಲಿಸುತ್ತದೆ. ವಹಾಬಿ ಎಂಬುದು ಸುನ್ನಿ ಇಸ್ಲಾಮಿನ ತೀವ್ರ ರೂಪವಾಗಿದ್ದು, ಕುರಾನಿನ ಅಕ್ಷರಶಃ ಅಳವಡಿಕೆಯನ್ನು ಆಗ್ರಹಿಸುತ್ತದೆ. ಅಲ್ ಖೈದಾವನ್ನು 1988ರಲ್ಲಿ ಸೋವಿಯತ್ ಪಡೆಗಳು ನೆರೆಯ ಅಫ್ಘಾನಿಸ್ತಾನದಿಂದ ಹಿಂದೆ ಸರಿಯುವ ಸ್ವಲ್ಪ ಮೊದಲು ಒಸಾಮಾ ಬಿನ್ ಲಾಡೆನ್ ಮತ್ತು ಮೊಹಮ್ಮದ್ ಆತಿಫ್ ಪಾಕಿಸ್ತಾನದಲ್ಲಿ ಸ್ಥಾಪಿಸಿದರು.

    ಅಲ್ ಖೈದಾ ಸಂಘಟನೆ ‘ರಕ್ಷಣಾತ್ಮಕ ಜಿಹಾದ್’ ಎಂಬ ವಿಚಾರದಲ್ಲಿ ನಂಬಿಕೆ ಹೊಂದಿದ್ದು, ಇಸ್ಲಾಮನ್ನು ವಿರೋಧಿಸುವವರ ವಿರುದ್ಧ ಹೋರಾಡುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯ ಎಂದು ಆಗ್ರಹಿಸುತ್ತದೆ. ಈ ಭಯೋತ್ಪಾದಕ ಸಂಘಟನೆ 2001ರಲ್ಲಿ ನ್ಯೂಯಾರ್ಕ್ ಮೇಲೆ ನಡೆದ 9/11 ದಾಳಿಯ ರೂವಾರಿಯಾಗಿತ್ತು. ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದ ಆ ದಾಳಿಯಲ್ಲಿ 2,977 ಜನರು ಸಾವನ್ನಪ್ಪಿದ್ದರು.

    ಅಲ್ ಖೈದಾ ಪಾಶ್ಚಾತ್ಯ ಜಗತ್ತು ಮತ್ತು ಅಲ್ಲಿನ ಸಂಸ್ಕೃತಿಯನ್ನು ಇಸ್ಲಾಮಿಗೆ ಅಪಾಯ ಎಂದು ಪರಿಗಣಿಸಿದೆ. ಅದರ ಪ್ರಮುಖ ಗುರಿ ಎಂದರೆ ಶರಿಯಾ ಆಧಾರಿತವಾದ ಇಸ್ಲಾಮಿಕ್ ಸಾಮ್ರಾಜ್ಯದ ಸ್ಥಾಪನೆ. ಇದನ್ನು 2011ರಲ್ಲಿ ಒಸಾಮಾ ಬಿನ್ ಲಾಡೆನ್ ಸಾವಿನ ಬಳಿಕ ಅಲ್ ಖೈದಾ ಮುಖ್ಯಸ್ಥನಾದ ಅಯ್ಮನ್ ಅಲ್ ಜವಾಹಿರಿ ತೀವ್ರವಾಗಿಸಿದ. ಸೆಪ್ಟೆಂಬರ್ 2014ರಲ್ಲಿ ಅಲ್ ಜವಾಹಿರಿ ಆನ್‌ಲೈನ್ ನಲ್ಲಿ ಒಂದು ವೀಡಿಯೋ ಬಿಡುಗಡೆಗೊಳಿಸಿ, ಭಾರತೀಯ ಉಪಖಂಡದಲ್ಲಿ ಉಗ್ರ ಸಂಘಟನೆಯ ವಿಭಾಗ ತೆರೆಯುವುದಾಗಿ ಘೋಷಿಸಿದ. ಕರ್ನಾಟಕದಲ್ಲಿ ಹಿಜಾಬ್ ಪರ ಪ್ರತಿಭಟನೆಗಳು ನಡೆಯುತ್ತಿದ್ದಾಗ ಅದನ್ನು ಬೆಂಬಲಿಸಿ ಜವಾಹಿರಿ ಸ್ವತಃ 2022ರ ಏಪ್ರಿಲ್‌ ನಲ್ಲಿ ಒಂದು ವೀಡಿಯೋ ಬಿಡುಗಡೆ ಮಾಡಿದ್ದ. ಜುಲೈ 31, 2022ರಂದು ಅಮೆರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಜವಾಹಿರಿ ಕಾಬೂಲಿನ ತನ್ನ ಮನೆಯಲ್ಲಿ ಸಾವಿಗೀಡಾದ.

    ರಾಮ ಮಂದಿರ ಮತ್ತು ಭಾರತಕ್ಕೆ ಬೆದರಿಕೆ ಒಡ್ಡಿದ ಅಲ್ ಖೈದಾ
    ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ರಾಮ ಮಂದಿರದೊಡನೆ, ನರೇಂದ್ರ ಮೋದಿ ಸರ್ಕಾರ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ವಿರುದ್ಧ ಕೆಂಡಕಾರಿದೆ. ಅದರೊಡನೆ ಭಾರತೀಯ ಮುಸಲ್ಮಾನರಿಗೆ ನಿಮ್ಮ ದೇಶವನ್ನು ತೊರೆದು, ಜಿಹಾದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಕರೆ ನೀಡಿದೆ! 110 ಪುಟಗಳ ಸುದೀರ್ಘ ಸಂಪಾದಕೀಯದಲ್ಲಿ, ಪತ್ರಿಕೆ “ಬಾಬ್ರಿಯಲ್ಲಿನ ದೇವಾಲಯ ನಾಶವಾಗುತ್ತದೆ. ಅದರ ಜಾಗದಲ್ಲಿ ಒಂದು ಬೃಹತ್ ಮಸೀದಿ ನಿರ್ಮಾಣಗೊಳ್ಳಲಿದೆ. ಆದರೆ ಇದಕ್ಕಾಗಿ ತ್ಯಾಗದ ಅಗತ್ಯವಿದೆ” ಎಂದು ಬರೆದಿದೆ.

    ಪತ್ರಿಕೆಯ ಹೇಳಿಕೆಯಲ್ಲಿ ಅಂತದ್ದೇನಿದೆ?
    ಘಜ್ವಾ ಎ ಹಿಂದ್ ಪತ್ರಿಕೆಯಲ್ಲಿ ಬಂದ ಪ್ರಮುಖ ಅಂಶಗಳ ಸಾಲುಗಳು ಇಲ್ಲಿವೆ.

    “ಬಾಬ್ರಿ ಮಸೀದಿಯ ಅವಶೇಷಗಳ ಮೇಲೆ ಈಗ ರಾಮ ಮಂದಿರ ನಿರ್ಮಾಣವಾದರೂ, ಅದನ್ನು ಮತ್ತೆ ನಿರ್ನಾಮಗೊಳಿಸಿ, ಮೂರ್ತಿ ಪೂಜೆ ನಡೆಯುವ ಆ ಜಾಗದಲ್ಲಿ ಮರಳಿ ಭವ್ಯ ಬಾಬ್ರಿ ಮಸೀದಿ ನಿರ್ಮಾಣವಾಗಿ, ಅಲ್ಲಾಹುವಿನ ಆರಾಧನೆ ನಡೆಯಲಿದೆ. ಆದರೆ ಇದೆಲ್ಲಕ್ಕೂ ತ್ಯಾಗದ ಅಗತ್ಯವಿದೆ”

    ಹೀಗೆ ಸಾಗುತ್ತದೆ ಅಲ್ ಖೈದಾ ಸಂಘಟನೆಯ ಬರಹಗಳು. ಈ ಪತ್ರಿಕೆ ಜಾತ್ಯಾತೀತ ಸರ್ಕಾರಗಳನ್ನು ಹಾಗೂ ಪ್ರಜಾಪ್ರಭುತ್ವದ ಆಳ್ವಿಕೆಯನ್ನು ವಿರೋಧಿಸುತ್ತದೆ. ಅಮೆರಿಕಾ ಸರ್ಕಾರವನ್ನು ಮೋದಿ ಪರ ಸರ್ಕಾರ ಎನ್ನುತ್ತದೆ. ಸಂಪೂರ್ಣ ಭಾರತ ಮುಸ್ಲಿಂ ಆಳ್ವಿಕೆಗೆ ಒಳಪಡದ ಹೊರತು, ಬಾಕಿ ಎಲ್ಲ ಕ್ರಮಗಳೂ ಮುಸ್ಲಿಮರು ವಿಗ್ರಹಾರಾಧಕರ ಆಡಳಿತದಲ್ಲಿರುವಾಗ ವ್ಯರ್ಥ ಮತ್ತು ನಾಚಿಕೆಗೇಡು ಎನ್ನುತ್ತದೆ.

    “ಇದೆಲ್ಲ ಕೇವಲ ಮಾತಲ್ಲ. ಬಾಬ್ರಿ ಮಸೀದಿ 30 ವರ್ಷಗಳ ಹಿಂದೆ ನಾಶವಾಯಿತು. 20 ವರ್ಷಗಳ ಹಿಂದೆ ಗುಜರಾತಿನ ಅಹಮದಾಬಾದ್‌ನಲ್ಲಿ ಗರ್ಭಿಣಿ ಮಹಿಳೆಯರ ಹೊಟ್ಟೆಯನ್ನು ಸೀಳಿ, ಅವರ ಮಕ್ಕಳಿಗೆ ಬೆಂಕಿ ಹಚ್ಚಲಾಯಿತು. ಇಂದು ಭಾರತದಲ್ಲಿ ಎಲ್ಲೆಡೆ ಬುಲ್‌ಡೋಜರ್‌ಗಳು ಕಾಣುತ್ತಿವೆ. ಹಿಂದೂಗಳು ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಆಲಿಘರ್, ಜಾಮಿಯಾ ಒಸ್ಮಾನಿಯಾ ಹೈದರಾಬಾದ್, ದಿಯೋಬಂದ್‌ಗಳಿಂದ ಬರುವ ಮುಸ್ಲಿಮರ ವಿರುದ್ಧ ಚಾಕು, ಖಡ್ಗಗಳನ್ನು ಹರಿತಗೊಳಿಸುತ್ತಿದ್ದಾರೆ” ಎಂದು ಆರೋಪಿಸಿದೆ.

    ಇದೇ ಪತ್ರಿಕೆ ಭಾರತೀಯ ಮುಸ್ಲಿಮರಿಗೆ ನಿಮ್ಮ ಆಸ್ತಿ ಪಾಸ್ತಿ ನಷ್ಟದ ಕುರಿತು ಯೋಚನೆ ಮಾಡಬೇಡಿ, ಯಾಕೆಂದರೆ ನೀವು ದಶಕಗಳಿಂದ ಆಸ್ತಿ ನಷ್ಟ ಅನುಭವಿಸುತ್ತಾ ಬಂದಿದ್ದೀರಿ. ಅದರ ಬದಲಿಗೆ ಭಾರತೀಯ ಮುಸ್ಲಿಮರು ತಮ್ಮ ಪ್ರಾಣವನ್ನೂ ಉಪಯೋಗಿಸಿ, ಇಸ್ಲಾಮಿಕ್ ಜಿಹಾದ್‌ಗೆ ಬೆಂಬಲಿಸಬೇಕು ಎಂದು ಕರೆ ನೀಡುತ್ತದೆ.

    ಅಲ್ ಖೈದಾ ತನ್ನ ಪೂರ್ಣ ಗುರಿ ಸಂಪೂರ್ಣ ಭಾರತೀಯ ಉಪಖಂಡ ಇಸ್ಲಾಮಿನ ಭಾಗವಾಗಿ, ಮೂರ್ತಿ ಪೂಜೆ ನಿಲ್ಲುವುದು ಎಂದಿದೆ. ಶ್ರೀನಗರದ ಜಾಮಿಯಾ ಮಸೀದಿಯಿಂದ ಬಾಬ್ರಿ ಮಸೀದಿಯ ತನಕ ಜಿಹಾದ್ ಒಂದೇ ಪರಿಹಾರ ಎಂದಿದೆ ಅಲ್ ಖೈದಾ.

    ಭಾರತೀಯ ಆಡಳಿತ ವ್ಯವಸ್ಥೆಯನ್ನು ಜಾತ್ಯಾತೀತ ನರಕ ಎನ್ನುವ ಅಲ್ ಖೈದಾ, ಭಾರತೀಯ ಮುಸ್ಲಿಮರಿಗೆ ಮುಸ್ಲಿಮೇತರರೊಡನೆ ಸಹಬಾಳ್ವೆ ನಡೆಸುವ ಯೋಚನೆ ಬಿಟ್ಟು ಬಿಡಬೇಕು ಎನ್ನುತ್ತದೆ.

    ಭಾರತದೆಡೆ ಅಲ್ ಖೈದಾ ಗಮನ
    ಒಸಾಮಾ ಬಿನ್ ಲಾಡೆನ್ 1988ರಲ್ಲಿ ಸ್ಥಾಪಿಸಿದ ಅಲ್ ಖೈದಾ, ಮುಂದೆ ಅಯ್‌ಮಾನ್ ಅಲ್ ಜ಼ವಾಹರಿಯ ಅವಧಿಯಲ್ಲಿ ಭಾರತದ ಮೇಲೆ ಗಮನ ಕೇಂದ್ರೀಕರಿಸಿತು. ಆತ 2011 ರಲ್ಲಿ ಲಾಡೆನ್ ನಿಧನದ ಬಳಿಕ ಅಲ್ ಖೈದಾದ ಮುಖ್ಯಸ್ಥನಾದ. 014ರಲ್ಲಿ ಅಲ್ ಜ಼ವಾಹಿರಿ ಆನ್‌ಲೈನ್ ನಲ್ಲಿ ಬಿಡುಗಡೆಗೊಳಿಸಿದ ವೀಡಿಯೋದಲ್ಲಿ ಉಗ್ರ ಸಂಘಟನೆಯ ಭಾರತೀಯ ಉಪಖಂಡದ ಶಾಖೆಯನ್ನು ಘೋಷಿಸಿದ.

    ಅಲ್ ಖೈದಾ ದಕ್ಷಿಣ ಏಷ್ಯಾ ವಿಭಾಗದ ಸ್ಥಾಪಕ ಮುಖ್ಯಸ್ಥ ಸನಾ ಅಲ್ ಹಕ್ 2019ರಲ್ಲಿ ಅಫ್ಘಾನಿಸ್ತಾನದ ಮುಸಾ ಕಲಾ ಜಿಲ್ಲೆಯಲ್ಲಿ ಅಮೆರಿಕಾದ ವಾಯುದಾಳಿಯಲ್ಲಿ ಸಾವನ್ನಪ್ಪಿದ. ಆತ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ಜನಿಸಿದವನಾಗಿದ್ದ. ರ್ನಾಟಕದಲ್ಲಿ ನಡೆದ ಜಿಹಾದ್ ಪರ ಹೋರಾಟವನ್ನೂ ಅಲ್ ಜವಾಹಿರಿ ಬೆಂಬಲಿಸಿದ್ದ. ಆತ 2022ರ ಜುಲೈಯಲ್ಲಿ ಆತನ ಕಾಬೂಲ್ ನಿವಾಸದ ಮೇಲೆ ಅಮೆರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ.

    ವರದಿಗಳ ಪ್ರಕಾರ, ಅಲ್ ಖೈದಾದ ಪತ್ರಿಕೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇತರ ಮುಸ್ಲಿಂ ರಾಷ್ಟ್ರಗಳ ಸರ್ಕಾರಗಳಿಗೂ ಬೆದರಿಕೆ ಒಡ್ಡಿದೆ. ಅದು ಪಾಕಿಸ್ತಾನದ ತೆಹ್ರೀಕ್ ಎ ತಾಲಿಬಾನ್ ಸಂಘಟನೆಗೆ ಬೆಂಬಲಿಸಿದ್ದು, ಢಾಕಾದ ಕುಸಿತಕ್ಕೆ ಕರೆ ನೀಡಿದೆ. ಅಲ್ ಖೈದಾ ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಆಯೋಜಿಸಿದ್ದನ್ನು ವ್ಯಂಗ್ಯ ಮಾಡಿದ್ದು, ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಕ್ಕೆ ಹೊಗಳಿಕೆಯ ಸುರಿಮಳೆಗೈದಿದೆ!

    ಅಯೋಧ್ಯೆಯ ರಾಮ ಮಂದಿರ ಎಷ್ಟು ಸುರಕ್ಷಿತ?
    ಅಲ್ ಖೈದಾ ದಾಳಿ ಮಾಡುವುದಾಗಿ ಹೇಳಿದರೂ, ರಾಮ ಮಂದಿರಕ್ಕೆ ತೊಂದರೆ ನೀಡುವುದು ಸಾಧ್ಯವಿಲ್ಲ. ಯಾಕೆಂದರೆ ಈಗಾಗಲೇ ಅಯೋಧ್ಯೆಯ ರಾಮ ಮಂದಿರದ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗಿದೆ. ಸುರಕ್ಷತೆಯ ವಿಚಾರಕ್ಕೆ ಬಂದರೆ, ಆಡಳಿತ ಮಂಡಳಿ ಅತ್ಯಾಧುನಿಕ ಮತ್ತು ಸಮರ್ಥ ತಂತ್ರಜ್ಞಾನವನ್ನು ದೇಗುಲದ ಸುರಕ್ಷತೆಗೆ ಬಳಸಲು ತೀರ್ಮಾನಿಸಿದ್ದು, ಕಡಿಮೆ ಸುರಕ್ಷತಾ ಸಿಬ್ಬಂದಿಗಳನ್ನು ಬಳಸಲಾಗುತ್ತದೆ. ಗುಲ ಟ್ರಸ್ಟ್ ದೇವಾಲಯ ಸಂಕೀರ್ಣದ ಸುರಕ್ಷತೆ ಮತ್ತು ವಿಚಕ್ಷಣೆಗೆ ಆಧುನಿಕ ಕ್ರಮಗಳನ್ನೇ ಆಯ್ಕೆ ಮಾಡುತ್ತಿದೆ.

    ರಾಮ ಮಂದಿರದ ಸುರಕ್ಷತೆಯೊಡನೆ, ಅಯೋಧ್ಯೆಯ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದ್ದರಿಂದ ಇಡಿಯ ನಗರದ ಸುರಕ್ಷತೆಗಾಗಿ ನೂತನ ಕಾವಲುಗೋಪುರಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ ಸೈನಿಕರನ್ನು ನಿಯೋಜಿಸಲಾಗಿದೆ. ಇವುಗಳ ಮೂಲಕ ನಗರಕ್ಕೆ ಬಂದು ಹೋಗುವವರನ್ನು ಗಮನಿಸಬಹುದು. ಅದರೊಡನೆ, ಸಂಪೂರ್ಣ ಅಯೋಧ್ಯೆ ಸಿಸಿಟಿವಿ ಕ್ಯಾಮರಾಗಳ ಕಣ್ಗಾವಲಿನಲ್ಲಿದ್ದು, ಸದ್ಯದಲ್ಲೇ ಸುರಕ್ಷತೆಗಾಗಿ ಕಂಟ್ರೋಲ್ ರೂಮ್ ನಿರ್ಮಾಣವಾಗಲಿದೆ.

    ಆದ್ದರಿಂದ ಅಲ್ ಖೈದಾ ಏನೇ ಹೇಳಿಕೆ ನೀಡಿದರೂ, ಆಧುನಿಕ, ಸಮರ್ಥ ಸುರಕ್ಷತೆ ಹೊಂದಿರುವ ಅಯೋಧ್ಯೆ ಎಲ್ಲ ದಾಳಿಗಳಿಂದಲೂ ಅಭೇದ್ಯವಾಗಿದೆ.

    ಒಡತಿಗಾಗಿ 4 ದಿನ ಆಸ್ಪತ್ರೆಯ ಬಾಗಿಲು ಕಾದ ಪಪ್ಪಿ… ಒಡತಿ ಬದುಕಿ ಬರಲೇ ಇಲ್ಲ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

    ಚಿಕನ್​ ತಿಂದ ಯುವತಿ ಸಾವು ಪ್ರಕರಣ: ಪುದಿನಾ ಚಟ್ನಿ ಮೇಲೆ ಸಂಶಯ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವೈದ್ಯಾಧಿಕಾರಿ!

    ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಹೃದಯವಿದ್ರಾವಕ ಘಟನೆ: ಬೆಂಕಿ ಅವಘಡದಲ್ಲಿ ಕರುಳಕುಡಿಯ ಜೀವ ಉಳಿಸಿ ಪ್ರಾಣಬಿಟ್ಟ ಉದ್ಯಮಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts