More

    ಮೊದಲ ಬಾರಿಗೆ ಒಂದಾಗುತ್ತಿದ್ದಾರೆ ಅಕ್ಷಯ್​ ಕುಮಾರ್​- ಅರ್ಷದ್​ ವಾರ್ಸಿ

    ಮುಂಬೈ: ಲಾಕ್​ಡೌನ್​ ಸಡಿಲಿಕೆ ಆಗುತ್ತಿದ್ದಂತೆ ವಿದೇಶಕ್ಕೆ ತೆರಳಿ ಬೆಲ್​ಬಾಟಂ ಸಿನಿಮಾ ಶೂಟಿಂಗ್​ ಮುಗಿಸಿದ ಬಾಲಿವುಡ್​ ನಟ ಅಕ್ಷಯ್​ ಕುಮಾರ್​, ಓಟಿಟಿಯಲ್ಲಿ ಲಕ್ಷ್ಮೀ ಚಿತ್ರದ ಮೂಲಕವೂ ಎಂಟ್ರಿಕೊಟ್ಟು ಹೆದರಿಸುವ ಪ್ರಯತ್ನ ಮಾಡಿದ್ದರು. ಇದೀಗ ಈ ನಡುವೆ ಬಚ್ಚನ್ ಪಾಂಡೆ ಸಿನಿಮಾ ಸಹ ಸದ್ದು ಮಾಡುತ್ತಿದೆ.

    ಇದನ್ನೂ ಓದಿ: ಚಿರು ಸರ್ಜಾ ಸಮಾಧಿ ನಿರ್ಮಾಣಕ್ಕೆ ಶಂಕುಸ್ಥಾಪನೆ

    ಲುಕ್ ಮೂಲಕವೇ ಸಾಕಷ್ಟು ಸುದ್ದಿ ಮಾಡಿದ್ದ ಬಚ್ಚನ್ ಪಾಂಡೆ ಬಳಗಕ್ಕೆ ಮತ್ತೋರ್ವ ಖ್ಯಾತ ನಟ ಎಂಟ್ರಿಯಾಗಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ. ಹೌದು, ಅರ್ಷದ್ ವಾರ್ಸಿ ಮೊದಲ ಬಾರಿಗೆ ಅಕ್ಷಯ್ ಕುಮಾರ್​ ಜತೆ ತೆರೆಹಂಚಿಕೊಳ್ಳುತ್ತಿದ್ದಾರೆ.

    ಈ ಹಿಂದೆ ಬಾಲಿವುಡ್​ನಲ್ಲಿ ತೆರೆಕಂಡಿದ್ದ ಜಾಲಿ ಎಲ್​ಎಲ್​ಬಿ ಚಿತ್ರದ ಫ್ರಾಂಚೈಸಿಯಲ್ಲಿ ಈ ಇಬ್ಬರೂ ಬೇರೆ ಬೇರೆ ಭಾಗಗಳಲ್ಲಿ ನಟಿಸಿದ್ದರು. ಇದೀಗ ಮೊದಲ ಬಾರಿಗೆ ಬಚ್ಚನ್ ಪಾಂಡೆ ಸಿನಿಮಾ ಮೂಲಕ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಹಾಗಾದರೆ ಪಾತ್ರ ಎಂಥದ್ದು, ಸದ್ಯಕ್ಕೆ ಆ ಬಗ್ಗೆ ಮಾಹಿತಿ ನೀಡದ ತಂಡ, ಇನ್ನೇನು ಶೀಘ್ರದಲ್ಲಿ ಅವರ ಲುಕ್​ ಅನ್ನೂ ಬಿಡುಗಡೆ ಮಾಡಲಿದೆ.

    ಇದನ್ನೂ ಓದಿ: ಪೀಕು ಸಿನಿಮಾದ ರಿಮೇಕ್​ನಲ್ಲಿ ತ್ರಿಷಾ

    ಫಹಾದ್ ಸಮ್ಜಿ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರ 2021ರ ಜನವರಿಯಲ್ಲಿ ರಾಜಸ್ತಾನದ ಜೈಸಲ್ಮೇರ್​ನಲ್ಲಿ ಶೂಟಿಂಗ್​ ಆರಂಭಿಸಲಿದೆ. ಸದ್ಯ ಪ್ರಥ್ವಿರಾಜ್ ಚೌಹಾಣ್​ ಚಿತ್ರದ ಶೂಟಿಂಗ್​ನಲ್ಲಿ ಅಕ್ಷಯ್​ ಕುಮಾರ್ ಬಿಜಿಯಾಗಿದ್ದಾರೆ.

    ಓಟಿಟಿನಾ, ಚಿತ್ರಮಂದಿರವಾ?: ಬಿಡುಗಡೆ ಬಗ್ಗೆ ಸ್ಪಷ್ಟನೆ ನೀಡಿದ ‘ಮಾಸ್ಟರ್’ ಚಿತ್ರತಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts