More

    ಜಮ್ಮು ಕಾಶ್ಮೀರದ ಹಳ್ಳಿಯೊಂದರ ಶಾಲೆ ನಿರ್ಮಾಣಕ್ಕೆ 1 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್

    ನವದೆಹಲಿ: ನಟ ಅಕ್ಷಯ್ ಕುಮಾರ್ ಸದಾ ಒಂದಿಲ್ಲೊಂದು ಸೇವೆಯಲ್ಲಿ ಕೈ ಜೋಡಿಸಿರುತ್ತಾರೆ. ಕೋವಿಡ್ ಸಾಂಕ್ರಾಮಿಕದಿಂದ ಕಂಗೆಟ್ಟಿದ್ದ ಜನತೆಗೆ ಸಾಕಷ್ಟು ಸಹಾಯವನ್ನೂ ಅಕ್ಷಯ್ ಮಾಡಿದ್ದಾರೆ. ಕೋಟಿಗಟ್ಟಲೇ ಹಣವನ್ನು ಪಿಎಂ ಕೇರ್ಸ್​ ನಿಧಿಗೂ ನೀಡಿದ್ದಾರೆ. ಇದೀಗ ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಳ್ಳಿಯೊಂದಕ್ಕೆ ತೆರಳಿ ಶಾಲೆಯ ನಿರ್ಮಾಣಕ್ಕೆ ಒಂದು ಕೋಟಿ ಹಣವನ್ನು ನೀಡಿದ್ದಾರೆ.


    ಬಿಎಸ್​ಎಫ್​ ಯೋಧರ ಜತೆಗೆ ಒಂದಷ್ಟು ಹೊತ್ತು ಸಮಯ ಕಳೆದ ಅಕ್ಷಯ್​, ಆ ಸಮಯದಲ್ಲಿ ಯೋಧರ ಜತೆಗೆ ಜಮ್ಮು ಕಾಶ್ಮೀರದ ತುಲೈಲ್‌ ಗ್ರಾಮಕ್ಕೂ ಭೇಟಿ ನೀಡಿದ್ದರು. ಗ್ರಾಮದಲ್ಲಿ ಶಾಲೆಯ ಸ್ಥಿತಿ ಕಂಡು ಮರುಗಿದ್ದರು. ತತಕ್ಷಣ 1 ಕೋಟಿ ದೇಣಿಗೆ ನೀಡಿ, ಶಾಲೆ ನಿರ್ಮಾಣ ಮಾಡಿಸುವುದಕ್ಕೆ ಮುಂದಾಗಿದ್ದಾರೆ.

    ಇದನ್ನೂ ಓದಿ: ಯಶ್ ಮುಂದಿನ ಚಿತ್ರದ ಪಾತ್ರ ರಿವೀಲ್; ನರ್ತನ್​ ನಿರ್ದೇಶನದ ಚಿತ್ರದಲ್ಲಿ ನೇವಿ ಆಫೀಸರ್…

    ಅಕ್ಷಯ್​ ಕೋಟಿ ರೂಪಾಯಿ ಘೋಷಣೆ ಮಾಡುತ್ತಿದ್ದಂತೆ, ಆ ಭಾಗದ ಜನರೆಲ್ಲ ಅಕ್ಷಯ್​ಗೆ ಜೈ ಕಾರ ಹಾಕಿರುವುದಲ್ಲದೆ, ಶಾಲೆ ನಿರ್ಮಾಣವಾದ ಬಳಿಕ ಅಕ್ಷಯ್ ಅವರ ತಂದೆ ಹರಿ ಓಂ ಅವರ ಹೆಸರನ್ನೇ ಶಾಲೆಗೆ ಇಡುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಬೆಲ್​ಬಾಟಂ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಜುಲೈನಲ್ಲಿ ಆ ಸಿನಿಮಾ ತೆರೆಗೆ ಬರಲಿದೆ. ಇತ್ತ ಇನ್ನೂ ಹಲವು ಚಿತ್ರಗಳ ಶೂಟಿಂಗ್​ನಲ್ಲಿಯೂ ಬಿಜಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts