More

    ‘ನಂಗೆ ಬಿಜೆಪಿ ಬಗ್ಗೆ ನಂಬಿಕೆ ಇಲ್ಲ, ಕರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲ!’ ಕರೊನಾ ಲಸಿಕೆಯ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದ ನಾಯಕ

    ಲಖನೌ: ಕರೊನಾ ಲಸಿಕೆ ಬಹುತೇಕ ಯಶಸ್ವಿಯಾಗಿದ್ದು, ಇಂದಿನಿಂದ ಭಾರತದಲ್ಲಿಯೂ ಲಸಿಕೆ ವಿತರಣೆ ಕೆಲಸ ಆರಂಭವಾಗಿದೆ. ಆದರೆ ಕರೊನಾ ಲಸಿಕೆಯ ಸಾಮರ್ಥ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಜನರಲ್ಲಿ ಬಾಕಿಯುಳಿದಿವೆ. ಲಸಿಕೆ ವಿತರಣೆ ಆರಂಭವಾದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕರೊಬ್ಬರು, ಲಸಿಕೆಯನ್ನು ಬಿಜೆಪಿ ಲಸಿಕೆ ಎಂದು ಕರೆದಿದ್ದು, ಅದರ ವಿರುದ್ಧ ಅಪನಂಬಿಕೆ ಹೊರಹಾಕಿದ್ದಾರೆ.

    ಇದನ್ನೂ ಓದಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾದ ಸಚಿವೆ ಶಶಿಕಲಾ ಜೊಲ್ಲೆ; ಮೂರು ಶಾಲೆಗಳ ದತ್ತು

    ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​​ ಯಾದವ್​ ಕರೊನಾ ಲಸಿಕೆಯ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ. ಅದು ಬಿಜೆಪಿಯ ಲಸಿಕೆ, ನನಗೆ ಅದರ ಬಗ್ಗೆ ನಂಬಿಕೆಯಿಲ್ಲ ಹಾಗಾಗಿ ನಾನು ಲಸಿಕೆ ಪಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಪ್ರಿಯತಮನಿಗೆ ಜಾಮೀನು ಕೊಡಿಸಲು ಒಪ್ಪದ ಅಪ್ಪ; ಸಿಟ್ಟಿಗೆದ್ದ ಅಪ್ರಾಪ್ತೆ ಹೀಗಾ ಮಾಡೋದು?

    ಅಖಿಲೇಶ್​​ ಅವರ ಈ ಹೇಳಿಕೆಗೆ ಕೇಂದ್ರ ಮತ್ತು ರಾಜ್ಯದ ನಾಯಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜ್ಞಾನಿಗಳು ಹಗಲು ರಾತ್ರಿ ಎನ್ನದೆ ಲಸಿಕೆಗಾಗಿ ದುಡಿಯುತ್ತಿದ್ದಾರೆ. ಆದರೆ ಇಲ್ಲಿ ಕೆಲವರು ಲಸಿಕೆಯ ಬಗ್ಗೆ ಏನೂ ತಿಳಿಯದೆ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಅಖಿಲೇಶ್​​ ವಿರುದ್ಧ ಆಕ್ರೋಶ ಹೊರ ಹಾಕಿರುವ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಮೌರ್ಯ, ‘ಅಖಿಲೇಶ್ ಯಾದವ್ ಅವರು ಲಸಿಕೆಯನ್ನು ನಂಬುವುದಿಲ್ಲ ಮತ್ತು ಉತ್ತರ ಪ್ರದೇಶದ ಜನರು ಅಖಿಲೇಶ್ ಯಾದವ್ ಅವರನ್ನು ನಂಬುವುದಿಲ್ಲ. ಲಸಿಕೆಯನ್ನು ಪ್ರಶ್ನಿಸುವುದು ವಿಜ್ಞಾನಿಗಳಿಗೆ ಮಾಡಿದ ಅವಮಾನ, ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು’ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    2021ರಲ್ಲಿ ಭೂಮಿಯನ್ನ ಡ್ರ್ಯಾಗನ್​ ವಶಪಡಿಸಿಕೊಳ್ಳತ್ತೆ! ಭೀಕರವಾಗಿರುತ್ತೆ ಈ ವರ್ಷ ಎಂದ ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ!

    ಕೋವಿಡ್​ ರೋಗಿಯ ಜತೆ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ನರ್ಸ್​: ಪ್ರಕರಣದಲ್ಲಿದೆ ಊಹೆಗೂ ಮೀರಿದ ಸ್ಫೋಟಕ ಟ್ವಿಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts