More

    ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾದ ಸಚಿವೆ ಶಶಿಕಲಾ ಜೊಲ್ಲೆ; ಮೂರು ಶಾಲೆಗಳ ದತ್ತು

    ಬೋರಗಾಂವ: ಕರ್ನಾಟಕ-ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ನೂತನ ನಿಪ್ಪಾಣಿ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಗಡಿಭಾಗದಲ್ಲಿ ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾಡಲು ಮುಂದಾಗಿದ್ದಾರೆ.

    ನಿಪ್ಪಾಣಿ ಕ್ಷೇತ್ರ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಅಕ್ಕೋಳ. ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಸೌಂದಲಗಾ ಶಾಲೆ ದತ್ತು ಪಡೆದು ಶಾಲೆಗಳಲ್ಲಿ ಆಗಬೇಕಾದ ಮೂಲ ಸೌಲಭ್ಯಗಳ ಕುರಿತು ಅಂದಾಜು 2.40 ಕೋಟಿ ರೂ.ವೆಚ್ಚದ ಯೋಜನೆ ಸಿದ್ಧಪಡಿಸಿದ್ದಾರೆ. ದತ್ತು ಪಡೆದ ಶಾಲೆಗಳಲ್ಲಿ ಕೊಠಡಿ ಸಮಸ್ಯೆ, ಗಣಕಯಂತ್ರ, ಆಟದ ಮೈದಾನ, ಪ್ರೊಜೆಕ್ಟರ್, ಗ್ರಂಥಾಲಯ ಮತ್ತು ಶೌಚಗೃಹ ಸಮಸ್ಯೆ ಪ್ರಮುಖವಾಗಿದೆ. ಹೀಗಾಗಿ ಶಾಲೆ ಅಭಿವೃದ್ಧಿಪಡಿಸಲು ಸಚಿವರು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಿ ಮಕ್ಕಳ ಆರೋಗ್ಯ ಕಡೆ ಗಮನಹರಿಸಲು ಅಧಿಕಾರಿಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದ್ದಾರೆ. ದತ್ತು ಈ ಮೂರು ಶಾಲೆಗಳಲ್ಲಿ ಮೂಲ ಸೌಲಭ್ಯ ಮರೀಚಿಕೆಯಾಗಿದೆ. 1ರಿಂದ 10ನೆಯ ತರಗತಿ ಶಾಲೆಗೆ ಹೆಚ್ಚುವರಿ ಕೊಠಡಿ, ಪ್ರಯೋಗಾಲಯ, ಕಂಪ್ಯೂಟರ್, ಕಾಂಪೌಂಡ್, ಗ್ರಂಥಾಲಯ, ಆಟದ ಮೈದಾನ, ಶೌಚಗೃಹ, ಹೊಸ ಕಟ್ಟಡ, ಹೆಚ್ಚುವರಿ ಕೊಠಡಿ, ಪ್ರತ್ಯೇಕ ಶೌಚಗೃಹ ಒದಗಿಸಲು 81.40 ಲಕ್ಷ ರೂ ವೆಚ್ಚದ ಯೋಜನೆ ರೂಪಿಸಿದ್ದಾರೆ.

    ಅಕ್ಕೋಳ ಶಾಲೆ ಅಭಿವೃದ್ಧಿಪಡಿಸಲು ಸಚಿವರು ಮನಸ್ಸು ಮಾಡಿದ್ದು ಸಂತಸ ತಂದಿದೆ. ಶಾಲೆಗೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಶೀಘ್ರ ಅಭಿವೃದ್ಧಿ ಕೆಲಸಗಳು ಆರಂಭವಾಗಬೇಕು.
    | ಬಿ.ಜಿ.ಲಠ್ಠೆ ಮುಖ್ಯಾಧ್ಯಾಪಕ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅಕ್ಕೋಳ

    ನಾಲ್ಕೈದು ವರ್ಷದಲ್ಲಿ ನಿಪ್ಪಾಣಿ ಕ್ಷೇತ್ರದ ಸರ್ಕಾರಿ ಶಾಲೆಗಳ ಪ್ರಗತಿಗೆ ವಿಶೇಷ ಕಾಳಜಿ ವಹಿಸಿದ್ದು, ಶಾಲೆಗೆ ಮೂಲ ಸೌಲಭ್ಯ ಒದಗಿಸಲು ಪ್ರಯತ್ನ ಮಾಡಲಾಗಿದೆ. ಮೂರು ಶಾಲೆಗಳನ್ನು ದತ್ತು ಪಡೆದುಕೊಂಡು ಆಗಬೇಕಾದ ಕೆಲಸಗಳ ಪಟ್ಟಿ ಮಾಡಲಾಗಿದೆ. ಗಡಿಭಾಗದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
    | ಶಶಿಕಲಾ ಜೊಲ್ಲೆ ಮಹಿಳಾ-ಮಕ್ಕಳ ಅಭಿವೃದ್ಧಿ ಸಚಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts