More

    VIDEO| ಆತನಿಗೆ ವರದಕ್ಷಿಣೆಯಾಗಿ ಸಿಕ್ಕಿದ್ದು ಎಕೆ-47! ಪಾಕಿಸ್ತಾನದಲ್ಲಿ ಇದೆಲ್ಲ ಕಾಮನ್​ ಅಂತೆ

    ಇಸ್ಲಾಮಾಬಾದ್​: ಮದುವೆಯಾಗುವ ವರನ ಮನೆಯವರಿಗೆ ವಧು ಮನೆಯವರು ವರದಕ್ಷಿಣೆ ಕೊಡುವ ಅನಿಷ್ಟ ಪದ್ಧತಿಯನ್ನು ಭಾರತದಲ್ಲಿ ಅನುಸರಿಸಲಾಗುತ್ತಿತ್ತು. ಆದರೆ ಆ ರೀತಿ ವರದಕ್ಷಿಣೆ ಪಡೆಯುವರರ ವಿರುದ್ಧ ಕಠಿಣ ಶಿಕ್ಷೆ ತೆಗೆದುಕೊಳ್ಳಲಾರಂಭಿಸಿದಾಗಿನಿಂದ ವರದಕ್ಷಿಣೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ನಮ್ಮಲ್ಲಿ ವರದಕ್ಷಿಣೆಯಾಗಿ ಬಂಗಾರ, ಹಣ, ಕಾರು, ಮನೆಯನ್ನು ಕೊಟ್ಟರೆ ಪಕ್ಕದ ಪಾಕಿಸ್ತಾನದಲ್ಲಿ ಬಂದೂಕನ್ನೇ ಕೊಡುತ್ತಾರಂತೆ.

    ಇದನ್ನೂ ಓದಿ: ಯೋಗಿ ಆದಿತ್ಯಾನಾಥ್​ಗೆ ಬಾಲಕನಿಂದ ಕೊಲೆ ಬೆದರಿಕೆ! ಮದುವೆ ಸಂಭ್ರಮದಲ್ಲಿದ್ದವ ಜೈಲು ಪಾಲಾದ

    ಹೌದು! ಆಶ್ಚರ್ಯವೆನಿಸಿದರೂ ಇದು ಸತ್ಯ. ವಧುವಿನ ತಾಯಿ ವರನಿಗೆ ಮದುವೆಯ ವೇದಿಕೆಯ ಮೇಲೆ ಎಕೆ-47 ಕೊಟ್ಟು ಚುಂಬಿಸುವ ವಿಡಿಯೋ ಇದಕ್ಕೆ ಸಾಕ್ಷಿ. ಇಂತದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿದೆ. ಅನೇಕ ಪಾಕಿಸ್ತಾನಿಯರು ಇದು ನಮ್ಮಲ್ಲಿ ಕಾಮನ್​ ಎಂದು ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಅದಕ್ಕೆ ವಿರೋಧವಾಗಿ ಭಾರತೀಯರು ಟ್ವೀಟ್​ ಮಾಡಿದ್ದು, ಇಂತಹ ಅನಿಷ್ಟ ಪದ್ಧತಿಗಳಿಂದಲೇ ಪಾಕಿಸ್ತಾನ ಭಯೋತ್ಪಾದಕರ ನಾಡಾಗಿದೆ ಎಂದು ದೂರಿದ್ದಾರೆ.

    ಇದನ್ನೂ ಓದಿ: ಈತನನ್ನು ಬಂಧಿಸಲು ಮಾಹಿತಿ ಕೊಟ್ಟರೆ ನಿಮಗೆ ಸಿಗುತ್ತೆ 37 ಕೋಟಿ ರೂಪಾಯಿ!

    ‘ವರದಕ್ಷಿಣೆಯಾಗಿ ಪೂರ್ತಿ ವಿಶ್ವವನ್ನೇ ಅತ್ತೆ ಕೊಡುತ್ತಿದ್ದಾರೆ’ ‘ಈ ಗಿಫ್ಟ್​ ವರನ ಬದಲಾಗಿ ವಧುವಿಗೆ ಕೊಡಬೇಕಿತ್ತು. ಕೌಟುಂಬಿಕ ಹಲ್ಲೆ ನಡೆದಾಗ, ಮುಲಾಜಿಲ್ಲದೆ ನಿನ್ನ ಗಂಡನ ಮೇಲೆ ಗುಂಡು ಹಾರಿಸು ಎಂದು ತಾಯಿ ಹೇಳಬೇಕಿತ್ತು’ ಹೀಗೆ ಹತ್ತು ಹಲವುಗಳು ಕಾಮೆಂಟ್​ಗಳು ವಿಡಿಯೋಕ್ಕೆ ಹರಿದುಬಂದಿವೆ. (ಏಜೆನ್ಸೀಸ್​)

    ಚಿನ್ನದ ದರದಲ್ಲಿ ಭಾರಿ ಇಳಿಕೆ; ಒಡವೆ ಪ್ರೇಮಿಗಳೀಗ ಫುಲ್​ ಖುಷ್​

    ಕಾಂಡೋಮ್​ನಲ್ಲಿ ರಂಧ್ರ ಮಾಡಿ ಸೆಕ್ಸ್​ ಮಾಡಿದ ಪ್ರಿಯಕರ: ಕೋರ್ಟ್​ ನೀಡಿತು ಶಿಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts