More

    ರೈಲ್ವೆ ಪ್ರಯಾಣಿಕರಿಗೆ ಶುಲ್ಕದ ಬರೆ: ಹೊಸದಾಗಿ ಮರುಅಭಿವೃದ್ಧಿ ಪಡಿಸಿದ ರೈಲ್ವೆ ನಿಲ್ದಾಣಗಳಲ್ಲಿ ಬಳಕೆದಾರ ಅಭಿವೃದ್ಧಿ ಶುಲ್ಕ ಶೀಘ್ರ

    ನವದೆಹಲಿ: ವಿಮಾನ ನಿಲ್ದಾಣದ ಮಾದರಿಯಲ್ಲಿ ಮರು ಅಭಿವೃದ್ಧಿ ಪಡಿಸಿದ ರೈಲ್ವೆ ನಿಲ್ದಾಣಗಳಲ್ಲೂ ಶೀಘ್ರವೇ ಬಳಕೆದಾರ ಅಭಿವೃದ್ಧಿ ಶುಲ್ಕವನ್ನು ಪ್ರಯಾಣಿಕರು ಪಾವತಿಸಬೇಕಾಗುತ್ತದೆ. ಪರಿಣಾಮ ಪ್ರಯಾಣದರದಲ್ಲಿ ಸಾಂಕೇತಿಕವಾದ ಏರಿಕೆ ಉಂಟಾಗಬಹುದು ಎಂದು ರೈಲ್ವೆ ಮಂಡಳಿ ಚೇರ್​ಮನ್ ವಿ.ಕೆ.ಯಾದವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಈ ಸಂಬಂಧ ಶೀಘ್ರವೇ ಅಧಿಸೂಚನೆಯನ್ನು ರೈಲ್ವೆ ಸಚಿವಾಲಯ ಪ್ರಕಟಿಸಲಿದೆ. ಬಳಕೆದಾರ ಅಭಿವೃದ್ಧಿ ಶುಲ್ಕವನ್ನು ಆಯಾ ನಿಲ್ದಾಣಗಳ ಜನಸಂದಣಿ ಅನುಸರಿಸಿ ನಿರ್ಧರಿಸಲಾಗುತ್ತಿದೆ. ಹೀಗಾಗಿ ಶುಲ್ಕದಲ್ಲಿ ವ್ಯತ್ಯಯ ಇದ್ದೇ ಇರುತ್ತದೆ ಎಂದು ಯಾದವ್ ಸ್ಪಷ್ಟಪಡಿಸಿದ್ದಾರೆ.

    ಅಮೃತಸರ, ನಾಗಪುರ, ಗ್ವಾಲಿಯರ್​, ಸಾಬರ್​ಮತಿ ರೈಲ್ವೆ ನಿಲ್ದಾಣಗಳನ್ನು ಅಂದಾಜು 1,296 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ಅಭಿವೃದ್ಧಿಪಡಿಸಲು ರೈಲ್ವೆ ಪ್ರಸ್ತಾವನೆ ಸಿದ್ಧಪಡಿಸಿದೆ. ಸರ್ಕಾರ ಕೂಡ ಭಾರತೀಯ ರೈಲ್ವೆ ನಿಲ್ದಾಣ ಮರು ಅಭಿವೃದ್ಧಿ ನಿಗಮದ ಮೂಲಕ 50 ನಿಲ್ದಾಣಗಳನ್ನು ಮರು ಅಭಿವೃದ್ಧಿ ಪಡಿಸಲು ಬಿಡ್​ಗಳನ್ನು ಆಹ್ವಾನಿಸಲು ಸಿದ್ಧತೆ ನಡೆಸಿದೆ. 2020-21ರಲ್ಲಿ ಈ ಯೋಜನೆಯ ಮೂಲಕ ಅಂದಾಜು 50,000 ಕೋಟಿ ರೂಪಾಯಿ ಹೂಡಿಕೆಯನ್ನು ಸರ್ಕಾರ ನಿರೀಕ್ಷಿಸುತ್ತಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts