More

    ವೈದ್ಯರ ಸಲಹೆ ಇಲ್ಲದೇ ಅಂಗವಿಕಲರಿಗೆ ವಿಮಾನ ಪ್ರವೇಶ ನಿರಾಕರಿಸುವಂತಿಲ್ಲ: ಡಿಜಿಸಿಎ ಸೂಚನೆ

    ನವದೆಹಲಿ: ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ)ವಿಕಲಾಂಗರಿಗೆ ವಿಮಾನ ಪ್ರವೇಶದ ಕುರಿತ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು, ವೈದ್ಯರ ಸಲಹೆ ಪಡೆಯದೇ ವಿಕಲಾಂಗರಿಗೆ ವಿಮಾನ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಸೂಚಿಸಿದೆ.

    ವಿಮಾನದಲ್ಲಿ ಪ್ರಯಾಣಿಸುವ ವೇಳೆ ವಿಕಲಾಂಗ ವ್ಯಕ್ತಿಯ ಆರೋಗ್ಯದಲ್ಲಿ ಸಮಸ್ಯೆ ಕಂಡುಬರಬಹುದು ಹಾಗಾಗಿ ಇಂತಹ ವ್ಯಕ್ತಿಗಳು ಪ್ರಯಾಣಿಸುವಾಗ ವೈದ್ಯರ ಸಲಹೆ ಹಾಗೂ ಲಿಖಿತ ಮಾಹಿತಿ ನೀಡಬೇಕೆಂದು ಹೇಳಿದೆ.

    ವಿಮಾನ ಪ್ರಯಾಣದ ವೇಳೆ ಸಿಬ್ಬಂದಿ ಗಮನಕ್ಕೆ ಬಂದರೆ ವಿಮಾನ ನಿಲ್ದಾಣದ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರ ಸಲಗೆ ಮೇರೆಗೆ ವಿಮಾನ ಹತ್ತಿಸುವ ಅಥವಾ ನಿರಾಕರಿಸುವ ನಿರ್ಧಾರ ಕೈಗೊಳ್ಳಬೇಕೆಂದು ಡಿಜಿಸಿಎ ಶುಕ್ರವಾರ ತಿಳಿಸಿದೆ.

    ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ವಿಕಲಾಂಗ ಬಾಲಕನಿಗೆ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ಇಂಡಿಗೋ ಸಂಸ್ಥೆಗೆ 5ಲಕ್ಷ ರೂ. ದಂಡ ವಿಧಿಸಲಾಗಿತ್ತು. ಈ ಬಳಿಕ ವಿಕಲಾಂಗರಿಗಾಗಿಯೇ ಕೆಲ ನಿಯಮಗಳನ್ನೂ ಸಹ ಬದಲಾವಣೆ ಮಾಡಲಾಗಿತ್ತು. (ಏಜೆನ್ಸೀಸ್​)

    ಸಿಬ್ಬಂದಿ ವರ್ತನೆಯಿಂದ ಇಂಡಿಗೋ ಸಂಸ್ಥೆಗೆ ಬಿತ್ತು ಭಾರೀ ಮೊತ್ತದ ದಂಡ! ಕಾರಣ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts