More

    ಲಾಕ್​ಡೌನ್​ನಿಂದ ಸುಧಾರಿಸಿದ್ದ ದೆಹಲಿಯ ಗಾಳಿಯ ಗುಣಮಟ್ಟ ಮತ್ತೆ ಕಳಪೆ ಆಗಿದ್ದು ಏಕೆ ಗೊತ್ತಾ?

    ನವದೆಹಲಿ: ಕೋವಿಡ್​ 19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್​ಡೌನ್​ ಘೋಷಿಸಿರುವುದರಿಂದ, ಕೈಗಾರಿಕೆಗಳು ಸ್ಥಗಿತಗೊಂಡಿವೆ. ಮುಖ್ಯವಾಗಿ ವಾಹನ ಸಂಚಾರ ಗಣನೀಯವಾಗಿ ಕಡಿಮೆಯಾಗಿದ್ದ, ಎಲ್ಲೆಡೆ ವಾಯುಮಾಲಿನ್ಯ ಕಡಿಮೆಯಾಗಿ, ಉಸಿರಾಡುವ ಗಾಳಿ ಸ್ವಚ್ಛವಾಗಿದೆ.

    ಕೆಲದಿನಗಳ ಹಿಂದಿನವರೆಗೂ ದೆಹಲಿಯಲ್ಲೂ ಇದೇ ಪ್ರತೀತಿ ಕಂಡುಬಂದಿತ್ತು. ಆದರೆ, ಈಗ ಅಲ್ಲಿ ಪರಿಸ್ಥಿತಿ ಹಠಾತ್ತನೆ ಬದಲಾಗಿದೆ.
    ಲಾಕ್​ಡೌನ್​ ಹೊರತಾಗಿಯೂ ಕೇಂದ್ರ ಸಚಿವರು ಕಚೇರಿಗಳಿಗೆ ಹೋಗಲಾರಂಭಿಸಿದ್ದೇ ಇದಕ್ಕೆ ಕಾರಣವೇ ಎಂಬ ನಿಮ್ಮ ಅನುಮಾನ ಹುರುಳಿಲ್ಲದ್ದು, ಇದಕ್ಕೆ ದೆಹಲಿಯ ಪಶ್ಚಿಮ ಭಾಗದಲ್ಲಿ ಒಣಪ್ರದೇಶದಿಂದ ಗಾಳಿಯಲ್ಲಿ ಬರುತ್ತಿರುವ ಧೂಳಿನ ಕಣಗಳು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

    ಗಾಳಿಯ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಹಾಗೂ ಸಂಶೋಧನಾ ವ್ಯವಸ್ಥೆ (ಎಸ್​ಎಎಫ್​ಎಆರ್​) ಪ್ರಕಾರ ಗುರುವಾರ ದೆಹಲಿಯ ಎಕ್ಯೂಐ 150 ಇದೆ. ದೆಹಲಿಯ ಪಶ್ಚಿಮ ಭಾಗದಿಂದ ಬೀಸುವ ಗಾಳಿಯಲ್ಲಿ ಧೂಳಿನ ಕಣಗಳು ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದು ವಿವರಿಸಿದೆ.

    ಚಾಂದನಿ ಚೌಕ್​, ಲೋಧಿ ರೋಡ್​, ಧೀರ್​ಪುರ್​, ಐಐಟಿ ದೆಹಲಿ ಮತ್ತು ಮಥುರಾ ರಸ್ತೆಯಲ್ಲಿನ ಎಕ್ಯೂಐ ಕ್ರಮವಾಗಿ 157,174, 169, 166 ಮತ್ತು 190 ಇದೆ. ನೋಯ್ಡಾದ ಎಕ್ಯೂಐ 171 ಆಗಿದೆ.

    ಏಪ್ರಿಲ್​ 15ರ ನಂತರದಲ್ಲಿ ಪಶ್ಚಿಮ ಭಾಗದ ಒಣಪ್ರದೇಶದಿಂದ ಬೀಸುವ ಗಾಳಿಯಲ್ಲಿ ಧೂಳಿನ ಕಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೂಡ ಎಕ್ಯೂಐ ಹೆಚ್ಚಿದೆ ಎಂದು ಎಸ್​ಎಎಫ್​ಎಆರ್ ಅಭಿಪ್ರಾಯಪಟ್ಟಿದೆ.

    ಉತ್ತರ ಪ್ರದೇಶದಲ್ಲಿ 60 ವರ್ಷದ ಮಹಿಳೆಯ ಹತ್ಯೆ, ಸಹಾಯಕ್ಕೆ ಧಾವಿಸದೆ, ದೃಶ್ಯ ಚಿತ್ರೀಕರಿಸಿದವರಿಗೆ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts