More

    ಆರ್ ಕೆ ವಾರಿಯರ್ಸ್ ಚಾಂಪಿಯನ್

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬ್ಯಾಟರ್ ವೀರಾಜ ಹಾವೇರಿ ಆಲ್ರೌಂಡ್ ನಿರ್ವಹಣೆ (73ರನ್, 72 ಎಸೆತ, 6ಬೌಂ., 1ಸಿ. ಹಾಗೂ 30ಕ್ಕೆ 2 ವಿಕೆಟ್)ಯ ಬಲದಿಂದ ಆರ್.ಕೆ. ವಾರಿಯರ್ಸ್ , ಹುಬ್ಬಳ್ಳಿ ಟೈಗರ್ಸ್ ತಂಡದ ವಿರುದ್ಧ 14 ರನ್​ಗಳಿಂದ ಜಯ ಗಳಿಸಿ ಹುಬ್ಬಳ್ಳಿ ಪ್ರೀಮಿಯಂ ಲೀಗ್ (ಎಚ್​ಪಿಎಲ್) ಯುತ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.

    ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಶನಿವಾರ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್.ಕೆ. ವಾರಿಯರ್ಸ್ 30 ಓವರ್​ಗಳಲ್ಲಿ 4 ವಿಕೆಟ್​ಗೆ 192ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಹುಬ್ಬಳ್ಳಿ ಟೈಗರ್ಸ್ 178ರನ್​ಗೆ ಆಲೌಟ್ ಆಯಿತು. ವೀರಾಜ ಹಾವೇರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

    ಹುಬ್ಬಳ್ಳಿ ಟೈಗರ್ಸ್ ತಂಡದ ಮಣಿಕಂಠ ಬುಕಿಟಗರ ಸರಣಿ ಶ್ರೇಷ್ಠ, ಹುಬ್ಬಳ್ಳಿ ಹಿರೋಸ್ ತಂಡದ ಅಬ್ದುಲ್ ದಿವಾನಲಿ (19ವಯೋಮಿತಿ) ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡದ ಕೃಷ್ಣ ಪಹುಜಾ (16 ವಯೋಮಿತಿ) ಉತ್ತಮ ಬ್ಯಾಟರ್, ಆರ್.ಕೆ. ವಾರಿಯರ್ಸ್​ನ ವಿನಾಯಕ ಪಾಂಡೆ (19ವಯೋಮಿತಿ) ಹಾಗೂ ಡಿಪೋಟ್ ಟೈಗರ್ಸ್​ನ ಅರ್ನವ ಕೆ. (16 ವಯೋಮಿತಿ) ಉತ್ತಮ ಬೌಲರ್ ಪ್ರಶಸ್ತಿ ಪಡೆದರು.

    ಸ್ವರ್ಣಾ ಗ್ರುಪ್ ಆಫ್ ಕಂಪನೀಸ್​ನ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಹಾಗೂ ಕ್ರಿಕೆಟಿಗ ಶಿಶಿರ್ ಭವಾನೆ ಟ್ರೋಫಿ ವಿತರಿಸಿದರು. ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಟ್ರಸ್ಟಿ ಬಾಬಾ ಭೂಸದ, ಎಂ.ಜಿ. ಅಮುಗಮ್ ಪಂಕಜ ಮುನ್ವರ, ಕೈಲಾಸ ಮುನ್ವರ, ಉದಯ ಲೋಡಯಾ, ವಿನಾಯಕ ಗುಡಿ, ಮನೀಷ್ ಠಕ್ಕರ್, ಕಾರ್ತಿಕ ಚವ್ಹಾಣ, ಇತರರು ಇದ್ದರು.

    ಸಂಕ್ಷಿಪ್ತ ಸ್ಕೋರ್

    ಆರ್.ಕೆ. ವಾರಿಯರ್ಸ್: 4ವಿಕೆಟ್​ಗೆ 192 (ವೀರಾಜ್ ಹಾವೇರಿ 73, ಸುಪ್ರೀತ್ ಎನ್. 52, ಕವಿಷ್ ಮೂಕಣ್ಣವರ 34, ಸಿದ್ದು ಸಾವೋಜಿ 43ಕ್ಕೆ 2, ಆದಿತ್ಯಾ ಉಮರಾಣಿ 21ಕ್ಕೆ 2).

    ಹುಬ್ಬಳ್ಳಿ ಟೈಗರ್ಸ್: 178ಕ್ಕೆ ಆಲೌಟ್ (ಕೃಷ್ಣ ಪಹುಜಾ 50, ಮಣಿಕಂಠ ಬುಕಿಟಗರ 29, ಸಿದ್ದು ಸಾವೋಜಿ 29, ಪವನ ಎಸ್. 25, ಸಿದ್ದಪ್ಪ ಪಿ. 37ಕ್ಕೆ 4, ವೀರಾಜ ಹಾವೇರಿ 30ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts