More

    Air India: ಏರ್‌ ಇಂಡಿಯಾ ವಿಮಾನದ ಲೋಗೋ ಬದಲಾವಣೆ, ಹೇಗಿದೆ ನೋಡಿ

    ಏರ್ ಇಂಡಿಯಾ ಏರ್‌ಲೈನ್ ತನ್ನ ಸಂಸ್ಥೆಯಲ್ಲಿ ಬದಲಾವಣೆ ತರುವ ಯೋಜನೆಯನ್ನು ಮುಂದುವರೆಸಿದ್ದು, ಲೋಗೋ ಬದಲಾವಣೆ ಮಾಡಿಕೊಂಡಿದೆ. ನಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಜನವರಿ 2022 ರಲ್ಲಿ ಟಾಟಾ ಗ್ರೂಪ್ ನಿಯಂತ್ರಣಕ್ಕೆ ತೆಗೆದುಕೊಂಡಿತು. ದೀರ್ಘಕಾಲದವರೆಗೆ, ಟಾಟಾ ಒಡೆತನದ ಏರ್‌ಲೈನ್ ಹೊಸ ಲೋಗೋ ತಯಾರಿಯಲ್ಲಿ ತೊಡಗಿತ್ತು. ಈಗ ಲೋಗೋ ಬದಲಾವಣೆ ಮಾಡಿದೆ.


    ಆಗಸ್ಟ್‌ನಲ್ಲಿ ಏರ್ ಇಂಡಿಯಾ ತನ್ನ ಹೊಸ ಲೋಗೋ ಮತ್ತು ಬಣ್ಣವನ್ನು ಮರು ಬ್ರಾಂಡಿಂಗ್​​ ಮಾಡಿಕೊಂಡಿದ್ದು, ಇದೀಗ ಹೊಸ ಲೋಗೋ ಅನಾವರಣಗೊಂಡಿದೆ. ಕೆಂಪು, ಬಿಳಿ ಮತ್ತು ನೇರಳೆ ಬಣ್ಣದ ಹೊಸ ಲೋಗೋ ಅನಾವರಣಗೊಂಡಿದೆ. ಬಿಳಿ ಬಣ್ಣದ ವಿಮಾನದ ಮೇಲೆ ಏರ್ ಇಂಡಿಯಾವನ್ನು ಕೆಂಪು ಬಣ್ಣದಲ್ಲಿ ಬರೆಯಲಾಗಿದೆ.


    ಹೊಸ ಬಣ್ಣದ ಲೋಗೋ ಏರ್ ಇಂಡಿಯಾದ ದಪ್ಪ ಕೆಂಪು ಅಕ್ಷರಗಳನ್ನು ಉಳಿಸಿಕೊಂಡಿದೆ ಆದರೆ ವಿಭಿನ್ನ ಫಾಂಟ್‌ನಲ್ಲಿದೆ. ಹೊಸ ಲೋಗೋವನ್ನು ಬಿಡುಗಡೆ ಮಾಡಿದ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್, ಹೊಸ ಲೋಗೋ “ಅಪರಿಮಿತ ಸಾಧ್ಯತೆಗಳನ್ನು ಸೂಚಿಸುತ್ತದೆ” ಎಂದು ಹೇಳಿದ್ದಾರೆ.


    ಟಾಟಾ ಸನ್ಸ್ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ತಾಲೇಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಜನವರಿ 2022 ರಲ್ಲಿ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡಿತ್ತು.

    ಏರ್ ಇಂಡಿಯಾ ಮತ್ತು ಟಾಟಾ ಸನ್ಸ್‌ನ ಮತ್ತೊಂದು ಅಂಗಸಂಸ್ಥೆಯಾದ ವಿಸ್ತಾರಾವನ್ನು ಹೆಚ್ಚು ಏಕೀಕೃತ ಘಟಕವನ್ನು ರಚಿಸಲು ವಿಲೀನಗೊಳಿಸಲಾಗುವುದು ಎಂದು ಘೋಷಿಸಲಾಯಿತು. ಈ ಪಾರ್ಟ್​​​ನರ್​​​ಶಿಪ್​​​ ಮಾರ್ಚ್ 2024 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts