More

    ಏರ್​ ಇಂಡಿಯಾ ಮಾರಾಟ: ಕೇಂದ್ರಕ್ಕೆ ಎಚ್ಚರಿಕೆ ನೀಡಿದ ಬಿಜೆಪಿ ಸಂಸದ ಸುಬ್ರಮಣಿಯನ್​ ಸ್ವಾಮಿ, ಕಾಂಗ್ರೆಸ್​ ಟೀಕೆ

    ನವದೆಹಲಿ: ಏರ್​ ಇಂಡಿಯಾದಲ್ಲಿನ ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯನ್ನು ಬಿಜೆಪಿಯ ಹಿರಿಯ ನಾಯಕ, ಸಂಸದ ಸುಬ್ರಮಣಿಯನ್​ ಸ್ವಾಮಿ ಟೀಕಿಸಿದ್ದು, ಸುಪ್ರೀಂಕೋರ್ಟ್​ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್​ ಕೂಡ ಸರ್ಕಾರವನ್ನು ಟೀಕಿಸಿದೆ.

    ಟ್ವೀಟ್​ ಮೂಲಕ ತಮ್ಮ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಬ್ರಮಣಿಯನ್​ ಸ್ವಾಮಿ ಏರ್​ ಇಂಡಿಯಾ ಮಾರಾಟ ಮಾಡುವುದು ದೇಶ ವಿರೋಧಿ ನಿರ್ಧಾರ ಎಂದು ಕರೆದಿದ್ದಾರೆ.

    ಏರ್​ ಇಂಡಿಯಾ ಮಾರಾಟ ಪ್ರಕ್ರಿಯೆಗೆ ಇಂದಿನಿಂದ ಮರುಚಾಲನೆ ಸಿಕ್ಕಿದೆ. ಈ ಒಪ್ಪಂದ ಸಂಪೂರ್ಣ ದೇಶ ವಿರೋಧಿಯಾಗಿದೆ. ಇದು ನನ್ನನ್ನು ಬಲವಂತವಾಗಿ ಕೋರ್ಟ್​ ಮೆಟ್ಟಿಲೇರುವಂತೆ ಮಾಡುತ್ತದೆ. ನಮ್ಮ ಕುಟುಂಬದ ಬೆಳ್ಳಿಯನ್ನು​ ನಾವು ಮಾರಾಟ ಮಾಡಬಾರದು ಎಂದಿದ್ದಾರೆ.

    ಅಲ್ಲದೆ, ಏರ್​ ಇಂಡಿಯಾ ಚೇತರಿಕೆ ಕಾಣುತ್ತಿದೆ. ಅದಕ್ಕೆ ಪೂರಕವಾಗಿ ಏಪ್ರಿಲ್-ಡಿಸೆಂಬರ್​ ಅಂಕಿಅಂಶಗಳು ಧನಾತ್ಮಕವಾಗಿವೆ. ಹೀಗಿರುವಾಗ ಪ್ರಧಾನಿ ಮೋದಿಯವರೆ ಏರ್​ ಇಂಡಿಯಾವನ್ನು ಬಲಪಡಿಸದೇ ಮಾರಾಟ ಮಾಡಲು ಏಕೆ ಮುಂದಾಗಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

    ಇದೇ ವೇಳೆ ಕಾಂಗ್ರೆಸ್ ಕೂಡ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದೆ. ಹಿರಿಯ ನಾಯಕ ಕಪಿಲ್​ ಸಿಬಲ್​ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಖಜಾನೆಯಲ್ಲಿ ಹಣ ಇಲ್ಲದಿದ್ದಾಗ ಸರ್ಕಾರ ಏನು ಮಾಡುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಸರ್ಕಾರದಲ್ಲಿ ಹಣವಿಲ್ಲ. ಆರ್ಥಿಕ ಬೆಳವಣಿಗೆ ಶೇ 5ಕ್ಕಿಂತಲೂ ಕಡಿಮೆ ಇದೆ. ನರೇಗಾ ಯೋಜನೆಯ ಹಣ ವಸೂಲಾಗಿಲ್ಲ. ಹೀಗಾಗಿ ಮೌಲ್ಯಯುತವಾದ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್​)

    ಏರ್​ ಇಂಡಿಯಾದಲ್ಲಿನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಮುಂದಾದ ಕೇಂದ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts