More

    AIESLನಿಂದ ನೇಮಕಾತಿಗೆ ಅಧಿಸೂಚನೆ; ಪದವೀಧರರಿಗೆ ಅರ್ಜಿ ಸಲ್ಲಿಸಲು ಅವಕಾಶ

    ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸ್ ಲಿಮಿಟೆಡ್(AIESL) ಏರ್‌ಕ್ರಾಫ್ಟ್ ನಿರ್ವಹಣೆ, ದುರಸ್ತಿ ಹಾಗೂ ಕೂಲಂಕುಷ ಪರೀಕ್ಷೆ(ಎಂಆರ್‌ಒ) ಕೈಗೊಳ್ಳುವ ಸಂಸ್ಥೆಯಾಗಿದ್ದು, 2013ರಲ್ಲಿ ಸ್ಥಾಪನೆಗೊಂಡಿತು. ದೇಶದಲ್ಲಿ ಎಂಆರ್‌ಒ ಕಾರ್ಯ ಕೈಗೊಳ್ಳಲು ಡೈರೆಕ್ಟೋರೆಟ್ ಜನರಲ್ ಆಫ್​​​ ಸಿವಿಲ್ ಆ್ಯವಿಯೇಷನ್(ಡಿಜಿಸಿಎ) ಹಾಗೂ ಇತರ ಅಂತಾರಾಷ್ಟ್ರೀಯ ನಿಯಂತ್ರಕ ಮಂಡಳಿಯಿಂದ ಮಾನ್ಯತೆ ಪಡೆದಿದೆ. ಪ್ರಸ್ತುತ ಎಐಇಎಸ್‌ಎಲ್‌ನಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ಪದವೀಧರರಿಗೆ ಉದ್ಯೋಗವಕಾಶ ಕಲ್ಪಿಸಿದ್ದು, ಆಸಕ್ತರು ಇಲ್ಲಿ ನೀಡಿರುವ ಮಾಹಿತಿ ಆಧರಿಸಿ ಅರ್ಜಿ ಸಲ್ಲಿಸಬಹುದು.

    ಒಟ್ಟು ಹುದ್ದೆಗಳು: 283

    ಹುದ್ದೆಗಳ ವಿವರ
    ಅಸಿಸ್ಟೆಂಟ್ ಸೂಪರ್‌ವೈಸರ್ -209
    ಗ್ರಾಜುಯೇಟ್ ಇಂಜಿನಿಯರ್ ಟ್ರೇನಿ-74

    ವಿದ್ಯಾರ್ಹತೆ, ಅನುಭವ 
    * ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಅಸಿಸ್ಟೆಂಟ್ ಸೂಪರ್‌ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿವುಳ್ಳವರು 3 ವರ್ಷ ಅವಧಿಯ ಬಿಸಿಎ/ಬಿಎಸ್ಸಿ/ಬಿ.ಕಾಂ/ಬಿಎ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ್ದು, 1 ವರ್ಷ ಅವಧಿಯ ಕಂಪ್ಯೂಟರ್ ಸರ್ಟಿಫಿಕೆಟ್ ಕೋರ್ಸ್ ಪೂರ್ಣಗೊಳಿಸಿರಬೇಕು. ಜತೆಗೆ ಡೇಟಾ ಎಂಟ್ರಿ/ಕಂಪ್ಯೂಟರ್ ಅಪ್ಲಿಕೇಷನ್‌ನಲ್ಲಿ ಕನಿಷ್ಠ 1 ವರ್ಷ ಅನುಭವವುಳ್ಳವರಾಗಿರಬೇಕು.
    * ಗ್ರಾಜುಯೇಟ್ ಇಂಜಿನಿಯರ್ ಟ್ರೇನಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಸಂಬಂಧಿತ ವಿಷಯದಲ್ಲಿ ಬಿ.ಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು.

    ವಯೋಮಿತಿ 
    2024 ಜನವರಿ 1ಕ್ಕೆ ಅಸಿಸ್ಟೆಂಟ್ ಸೂಪರ್‌ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿಯಾಗಿದೆ. ಇನ್ನು ಇಂಜಿನಿಯರ್ ಟ್ರೇನಿ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದವರು 35 ವರ್ಷ, ಒಬಿಸಿ ವರ್ಗದವರು 38 ವರ್ಷ ಹಾಗೂ ಎಸ್ಸಿ/ಎಸ್ಟಿ ವರ್ಗದವರು 40 ವರ್ಷ ಮೀರದವರಾಗಿರಬೇಕು.

    ವೇತನ 
    ಅಸಿಸ್ಟೆಂಟ್ ಸೂಪರ್‌ವೈಸರ್‌ಗಳಾಗಿ ಆಯ್ಕೆಯಾಗುವವರಿಗೆ 27,000ರೂ. ವೇತನ ನಿಗದಿಪಡಿಸಿದ್ದು, 5 ವರ್ಷಕ್ಕೊಮ್ಮೆ ಅನುಭವ ಹಾಗೂ ಕೆಲಸ ನಿರ್ವಹಿಸಿದ ಅವಧಿಯ ಆಧಾರದ ಮೇಲೆ ಏರಿಕೆ ಕಾಣಲಿದೆ. ಇಂಜಿನಿಯರಿಂಗ್ ಟ್ರೇನಿಗಳಿಗೆ ಮೊದಲ ವರ್ಷದಲ್ಲಿ 40,000ರೂ. ಸ್ಟೆಪೆಂಡ್ ನೀಡಲಿದ್ದು, ಟ್ರೇನಿಂಗ್ ಅವಧಿ ಪೂರ್ಣಗೊಂಡ ನಂತರ 59,000ರೂ.-79,000ರೂ. ವೇತನ ನೀಡಲಾಗುವುದು.

    ಸರ್ವಿಸ್ ಬಾಂಡ್ 
    ಗ್ರಾಜುಯೇಟ್ ಇಂಜಿನಿಯರಿಂಗ್ ಟ್ರೇನಿಗಳಾಗಿ ಆಯ್ಕೆಗೊಂಡವರು 5 ವರ್ಷಗಳ ಅವಧಿಗೆ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕಿದ್ದು, ಒಂದು ವೇಳೆ ಅವಧಿಗೂ ಮುನ್ನ ಉದ್ಯೋಗ ತೊರೆದಲ್ಲಿ 3 ಲಕ್ಷ ಹಣ ಕಟ್ಟಿಕೊಡಬೇಕಿರುತ್ತದೆ.

    ಉದ್ಯೋಗಾವಧಿ
    ಪ್ರಾರಂಭಿಕವಾಗಿ ಅಭ್ಯರ್ಥಿಯನ್ನು 5 ವರ್ಷಗಳ ಅವಧಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನಂತರ ಕಂಪನಿಯ ಅವಶ್ಯಕತೆ ಹಾಗೂ ಅಭ್ಯರ್ಥಿಯ ಕಾರ್ಯವೈಖರಿಯ ಆಧಾರದ ಮೇಲೆ ಉದ್ಯೋಗಾವಧಿ ವಿಸ್ತರಿಸಲಾಗುವುದು.

    ಆಯ್ಕೆ ಪ್ರಕ್ರಿಯೆ ಹೇಗೆ?
    ಕೌಶಲ ಆಧಾರಿತ ಪರೀಕ್ಷೆ, ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ಮುಖೇನ ಸಮರ್ಥ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

    ಅರ್ಜಿ ಸಲ್ಲಿಕೆ ಹೇಗೆ? 
    ಅಧಿಕೃತ AIESL ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಸಂಬಂಧಿತ ದಾಖಲಾತಿಗಳೊಂದಿಗೆ ಅಂಚೆ ಮೂಲಕ ಅಧಿಸೂಚನೆಯಲ್ಲಿ ತಿಳಿಸಿರುವ ವಿಳಾಸಕ್ಕೆ ಕಳುಹಿಸಬೇಕು.

    ಅರ್ಜಿ ಸಲ್ಲಿಕೆಯ ಅಂತಿಮ ದಿನ: 15.01.2024 

    AIESLನಲ್ಲಿ ಪದವಿ ಪಾಸಾದವರಿಗೆ ಉದ್ಯೋಗಾವಕಾಶ: 283 ಹುದ್ದೆಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts