ಅಹಮದಾಬಾದ್: ಗಣರಾಜ್ಯೋತ್ಸವದ ಹಿನ್ನೆಲೆ ಬಾಂಬ್ ಸ್ಫೋಟಿಸುವುದಾಗಿ ಅಹಮದಾಬಾದ್ ಪೊಲೀಸ್ ಕಮಿಷನರ್ ಕಚೇರಿಗೆ ಬೆದರಿಕೆ ಪತ್ರ ಕಳಿಸಿದ್ದ ಪ್ರಕರಣ ಬೆನ್ನಟ್ಟಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಹಮದಾಬಾದ್ ರೈಲು ನಿಲ್ದಾಣ(ಕಲುಪುರ್ ರೈಲು ನಿಲ್ದಾಣ) ಮತ್ತು ಗೀತಾ ಮಂದಿರ ಬಸ್ ನಿಲ್ದಾಣ(ಅಹಮದಾಬಾದ್‌ನ ಅತಿದೊಡ್ಡ ಬಸ್ ನಿಲ್ದಾಣ)ಕ್ಕೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಪತ್ರದಲ್ಲಿ ಬರೆದು ಆರೋಪಿಗಳು ಪೊಲೀಸರಿಗೆ ರವಾನಿಸಿದ್ದರು. ಇದು ಆತಂಕಕ್ಕೆ ಕಾರಣವಾಗಿತ್ತು.
ಮಿಂಚಿನ ಕಾರ್ಯಾಚರಣೆ ನಡೆಸಿದ ಅಹಮದಾಬಾದ್ ಕ್ರೈಂ ಬ್ರಾಂಚ್ ಪೊಲೀಸರು 8 ತಂಡಗಳನ್ನ ರಚಿಸಿ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಓರ್ವ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ದೆಹಲಿಯ ರಾಜಪಥ್ನಲ್ಲಿ ಗಣರಾಜ್ಯೋತ್ಸವ ಸಂಭ್ರಮ: ಪರೇಡ್ನಲ್ಲಿ ಅನಾವರಣಗೊಳ್ಳಲಿದೆ ದೇಶದ ಮಿಲಿಟರಿ ಸಾಮರ್ಥ್ಯ
ಅವನಿಗೆ ಪ್ಯಾಂಟ್ ಬಿಚ್ಚೋಕೆ ನಾನು ಹೇಳಿದ್ನಾ? ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಆಕ್ರೋಶ
ಬಿಎಚ್ ಸರಣಿ ನಂಬರ್ಗೆ ಡಿಮಾಂಡ್! ಯಾವ ರಾಜ್ಯಕ್ಕೆ ಹೋದರೂ ವಾಹನ ಸಂಖ್ಯೆ ಒಂದೇ; ರಾಜ್ಯದಲ್ಲಿ 4700 ನೋಂದಣಿ