More

    ಜಮ್ಮು-ಕಾಶ್ಮೀರ ಡಿಡಿಸಿ ಚುನಾವಣೆ- ಗುಪ್ಕರ್ ಮೈತ್ರಿ ದೇಶ ವಿರೋಧಿ, ಕಾಂಗ್ರೆಸ್​ಗೆ “ರಾಷ್ಟ್ರೀಯತೆ”ಯ ಸವಾಲು!

    ನವದೆಹಲಿ : ಜಮ್ಮು-ಕಾಶ್ಮೀರದಲ್ಲಿ ಡಿಸ್ಟ್ರಿಕ್ಟ್ ಡೆವಲಪ್​ಮೆಂಟ್ ಕೌನ್ಸಿಲ್​ ಚುನಾವಣೆಗೂ ಮೊದಲು ಭಾರತೀಯ ಜನತಾ ಪಾರ್ಟಿ ಸೋಮವಾರ, ಗುಪ್ಕರ್ ಮೈತ್ರಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ಟೀಕಾ ಪ್ರಹಾರ ಮಾಡಿದೆ. ಅನುಚ್ಛೇದ 370 ವಾಪಸ್ ತರಬೇಕೆಂಬ ಗುಪ್ಕರ್ ಮೈತ್ರಿಯ ಉದ್ದೇಶವನ್ನು ಕಟುವಾಗಿ ಟೀಕಿಸಿರುವ ಬಿಜೆಪಿ ನಾಯಕರು, ಈ ಬಗ್ಗೆ ಕಾಂಗ್ರೆಸ್ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇದರೊಂದಿಗೆ ಗುಪ್ಕರ್ ಮೈತ್ರಿ ದೇಶ ವಿರೋಧಿ ಎಂಬುದರತ್ತ ಬೊಟ್ಟು ಮಾಡಿರುವ ನಾಯಕರು, ಕಾಂಗ್ರೆಸ್ ಪಕ್ಷಕ್ಕೂ “ರಾಷ್ಟ್ರೀಯತೆ”ಯ ಸವಾಲನ್ನು ಒಡ್ಡಿದ್ದಾರೆ.

    ಬಿಜೆಪಿಯ ವಕ್ತಾರ ಸಂಬಿತ್ ಪಾತ್ರ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದು, ಗುಪ್ಕರ್ ಮೈತ್ರಿಯು ಸಂಪೂರ್ಣವಾಗಿ ಪಾಕಿಸ್ತಾನ ಮತ್ತು ಭಾರತ ವಿರೋಧಿ ಶಕ್ತಿಯ ಧ್ವನಿಯಾಗಿದೆ. ಭಾರತದ ಸಂವಿಧಾನದಲ್ಲಿನ ಅನುಚ್ಛೇದ 370 ರದ್ದುಗೊಳಿಸಿದ್ದನ್ನು ಖಂಡಿಸಿ ಪಾಕಿಸ್ಥಾನ ತನಗೆ ಸಿಕ್ಕ ವೇದಿಕೆಗಳಲ್ಲೆಲ್ಲ ಪ್ರಸ್ತಾಪಿಸುತ್ತ ಬಂದಿದೆ. ಈಗ ಗುಪ್ಕರ್ ಮೈತ್ರಿಯೂ ಅದನ್ನೆ ಮಾಡುತ್ತಿದೆ. ಈಗ ಸೋನಿಯಾ ಹಾಗೂ ರಾಹುಲ್ ಗಾಂಧಿಯವರು ಗುಪ್ಕರ್ ಮೈತ್ರಿ ನಾಯಕರ ಘೋಷಣೆಯ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸವಾಲೆಸೆದಿದ್ದಾರೆ.

    ಇದನ್ನೂ ಓದಿ:  ತನ್ನ ಮೊಮ್ಮಗಳಿಗೆ ತಾನೇ ಜನ್ಮ ನೀಡಿದ 51 ವರ್ಷದ ಮಹಿಳೆ: ವಿರಳ ಘಟನೆ ಹಿಂದಿದೆ ಮನಕಲಕುವ ಕತೆ!

    ಇನ್ನೊಂದಡೆ, ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಅವರೂ, ಗುಪ್ಕರ್ ಮೈತ್ರಿಯನ್ನು ಖಂಡಿಸಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿದ್ದವರೂ ಚೀನಾ ಸಹಕಾರ ತೆಗೆದುಕೊಂಡು ಭಾರತದ ಸಂವಿಧಾನದ ಅನುಚ್ಛೇದ 370 ಮರುಸ್ಥಾಪಿಸುತ್ತೇವೆ ಎಂದೆಲ್ಲ ಹೇಳುತ್ತಿದ್ದಾರೆ. ಇದು ನಿಜವಾಗಿಯೂ ದೇಶ ವಿರೋಧಿ ಚಟುವಟಿಕೆಯೇ ಸರಿ. ಅನುಚ್ಛೇದ 370ರ ಮರುಸ್ಥಾಪನೆ ಬಗ್ಗೆ ಸೋನಿಯ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. (ಏಜೆನ್ಸೀಸ್)

    ಭಾರತದ ರಾಷ್ಟ್ರೀಯ ಆಹಾರ ವೆಜ್ ಬಿರಿಯಾನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts