More

    ದ್ವಿಗುಣವಾಗಿದೆ ಕೃಷಿಕರ ಆದಾಯ

    ಮಾನ್ವಿ: ರಾಜ್ಯದ ರೈತರ ಏಳಿಗೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ ಹೇಳಿದರು.

    ಪಟ್ಟಣದ ತೊಗಟವೀರ ಸಮುದಾಯ ಭವನದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ರೈತ ಸಮಾವೇಶ ಉದ್ಘಾಟಿಸಿ ಬುಧವಾರ ಮಾತನಾಡಿದರು. ಸರ್ಕಾರದ ನೆರವಿನೊಂದಿಗೆ ಬೆಳೆಗೆ ಉತ್ತಮ ಬೆಲೆ ದೊರೆಯುತ್ತಿರುವುದರಿಂದ ರೈತರ ವಾರ್ಷಿಕ ಆದಾಯ ದ್ವಿಗುಣವಾಗಿದೆ ಎಂದರು.
    ಕೃಷಿ ಸಮ್ಮಾನ್ ಯೋಜನೆಯಡಿ ಪ್ರತಿ ರೈತರ ಖಾತೆಗೆ ಕೇಂದ್ರ ಸರ್ಕಾರದಿಂದ 6 ಸಾವಿರ ರೂ. ಹಾಗೂ ರಾಜ್ಯ ಸರ್ಕಾರ 4 ಸಾವಿರ ರೂ. ನೀಡುತ್ತಿದೆ. ಈ ಮೂಲಕ 5 ವರ್ಷದಲ್ಲಿ ರೈತರಿಗೆ 50 ಸಾವಿರ ರೂ. ಅರ್ಥಿಕ ನೆರವು ಸಿಗಲಿದೆ. ಜಿಲ್ಲೆಯಲ್ಲಿ ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗದ ಜಮೀನುಗಳಿಗೂ ನೀರು ಹರಿಯಲಿ ಎನ್ನುವ ಉದ್ದೇಶದಿಂದ ಯಡಿಯೂರಪ್ಪ ಸಿಎಂ ಇದ್ದಾಗ ಕಾಲುವೆ ಅಧುನಿಕರಣ ಮಾಡಿಸಿದ್ದರು ಎಂದು ತಿಳಿಸಿದರು.

    ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿ, ರೈತರು ಸ್ವಾಭಿಮಾನದಿಂದ ಋಣ ಮುಕ್ತರಾಗಿ ಬದುಕಬೇಕು ಎನ್ನುವ ಉದ್ದೇಶದಿಂದ ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತ ಪರವಾದ ಆಡಳಿತ ನೀಡಿದ್ದಾರೆ. ರೈತರಿಗೆ ಅಗತ್ಯವಾದ ವಿದ್ಯುತ್, ಹನಿ ನೀರಾವರಿ, ಉತ್ತಮ ಮಾರುಕಟ್ಟೆ ವ್ಯವಸ್ಥೆ, ರಸಗೊಬ್ಬರ ಸಹಾಯಧಾನ, ಫಸಲ್ ಬಿಮಾ ಯೋಜನೆ ಸೇರಿ ರೈತರ ಪರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.

    ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ, ರೈತ ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಎಲ್ಪಿಜಿ ಸೌಲಭ್ಯ, ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ ಸೌಲಭ್ಯ ಸೇರಿ ಹಲವು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಕಲ್ಪಿಸಿದ್ದಾರೆ. ದೇಶದ ರೈತರು ಹಾಗೂ ಸೈನಿಕರಿಗೆ ಪ್ರಧಾನಿ ಗೌರವ ತಂದುಕೊಟ್ಟಿದ್ದಾರೆ ಎಂದು ತಿಳಿಸಿದರು. ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts