More

    ಕೃಷಿಯಿಂದ ಸ್ವಾವಲಂಬನೆ ಸಾಧ್ಯ

    ರಾಯಚೂರು: ಮಹಿಳೆಯರು ವೈಯಕ್ತಿಕ ಮತ್ತು ವೃತ್ತಿಪರವಾಗಿ ಅಭಿವೃದ್ಧಿಗೆ ಹಲವು ರೀತಿಯ ಕೊಡುಗೆಗಳನ್ನು ನೀಡಿದ್ದು, ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಶ್ರಮ ಬಹಳ ಪ್ರಮುಖವಾಗಿದೆ ಎಂದು ಕೃಷಿ ಸಾಧಕಿ ಕವಿತಾ ಮಿಶ್ರಾ ಹೇಳಿದರು.

    ರಾಯಚೂರು ವಿವಿಯಲ್ಲಿ ಮಹಿಳಾ ಅಧ್ಯಯನ ವಿಭಾಗದಿಂದ ಮಹಿಳೆ ಮತ್ತು ಉದ್ಯಮಶೀಲತೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಮಹಿಳೆಯರು ದೃಢ ಮನಸ್ಸಿನಿಂದ ಕೃಷಿಯಲ್ಲಿ ತೊಗಡಗಿಸಿಕೊಂಡರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಬಿಗಳಾಗಲು ಸಾಧ್ಯ ಎಂದರು.

    ಮಹಿಳೆಯರು ಶಕ್ತಿಶಾಲಿಗಳಾಗಿದ್ದು, ಮನೆ ಮತ್ತು ಸಮಾಜ ಬದಲಿಸುವ ಶಕ್ತಿ ಹೊಂದಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಪಾಲ್ಗೊಳ್ಳುತ್ತಿದ್ದು, ಸಮಾನ ಬದುಕು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಕವಿತಾ ಮಿಶ್ರಾ ಹೇಳಿದರು. ಉಪ ಕುಲಸಚಿವ ಡಾ.ಜಿ.ಎಸ್.ಬಿರಾದರ ಮಾತನಾಡಿ, ಮಹಿಳೆಯರು ಸಮಾಜದ ಶಕ್ತಿ. ಕವಿತಾ ಮಿಶ್ರಾ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಯಶಸ್ವಿಯಾಗಿ ಜಿಲ್ಲೆಗೆ ಹೆಸರು ತಂದಿದ್ದಾರೆ ಎಂದರು.

    ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರೊ.ನುಸ್ರತ್ ಫಾತೀಮಾ ಮಾತನಾಡಿ, ಬಹುತೇಕ ಕ್ಷೇತ್ರಗಳಲ್ಲಿ ಮಹಿಳೆಯರು ಗುರುತಿಸಿಕೊಂಡಿದ್ದು, ದೌರ್ಜನ್ಯ, ದಬ್ಬಾಳಿಕೆ, ಹಿಂಸೆಯಂತಹ ಸಮಸ್ಯೆ ಮೆಟ್ಟಿ ನಿಂತಿದ್ದಾರೆ ಎಂದು ತಿಳಿಸಿದರು. ಪ್ರಾಧ್ಯಾಪಕರಾದ ತಾಯಪ್ಪ, ಡಾ.ಭೀಮೇಶ ನಾಯಕ, ಡಾ.ಶಾಂತಾದೇವಿ, ಡಾ.ಅನಿಲ್ ಕುಮಾರ ಮಾಣಿಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts