More

    ಸರ್ಕಾರ ಕೃಷಿ ಕೂಲಿಕಾರರ ಸಮಸ್ಯೆಗೆ ಸ್ಪಂದಿಸಲಿ; ಯು.ಬಸವರಾಜ್ ಒತ್ತಾಯ

    ಗಂಗಾವತಿ: ಕೃಷಿ ಕೂಲಿಕಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕಿದ್ದು, ಪರಿಹಾರದ ಮೂಲಕ ಸೌಲಭ್ಯಗಳನ್ನು ಒದಗಿಸುವಂತೆ ಸಿಐಪಿ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ್ ಹೇಳಿದರು.

    ತಾಲೂಕಿನ ಹೇಮಗುಡ್ಡದ ಶ್ರೀ ದುರ್ಗಾದೇವಿ ಸಮುದಾಯ ಭವನದಲ್ಲಿ ಸಿಪಿಐ(ಎಂ) ಜಿಲ್ಲಾ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ವಿಭಾಗೀಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಭಾಗ್ಯ ಜ್ಯೋತಿ ರೈತರಿಗೆ ಶೇ.75 ಯೂನಿಟ್ ನೀಡಲು ಮುಂದಾಗಿದ್ದು ಸರಿಯಲ್ಲ. ಪ್ರಣಾಳಿಕೆಯಲ್ಲಿ ೋಷಿಸಿದಂತೆ 200 ಯೂನಿಟ್ ವಿದ್ಯುತ್ ನೀಡಬೇಕು. ಕೂಲಿಕಾರರಿಗಾಗಿ ಕಲ್ಯಾಣ ಮಂಡಳಿ ರಚನೆಯೊಂದಿಗೆ ಸೌಲಭ್ಯಗಳನ್ನು ಒದಗಿಸಬೇಕು. ಐದು ಗ್ಯಾರಂಟಿಗಳನ್ನು ಯಾವುದೇ ಷರತ್ತಿಲ್ಲದೆ ಸಮರ್ಪಕ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.

    ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಮಾತನಾಡಿ, ಕೃಷಿ ಕೂಲಿಕಾರರ ಹಕ್ಕುಗಳಿಗಾಗಿ ಸಿಪಿಐ(ಎಂ) ಸಂವಿಧಾನತ್ಮಾಕವಾಗಿ ಹೋರಾಟ ಹಮ್ಮಿಕೊಂಡಿದ್ದು, ಬಡಜನರಿಗೆ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುತ್ತಿದೆ ಎಂದರು.

    ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ನಿತ್ಯಾನಂದಸ್ವಾಮಿ, ಸಿಪಿಐ(ಎಂ) ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್, ಪದಾಧಿಕಾರಿಗಳಾದ ಭೀಮಶೆಟ್ಟಿ ಯಂಪಳ್ಳಿ, ಸುಂಕಪ್ಪ ಗದಗ, ಬಸವರಾಜ ಮರಕುಂಬಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts