More

    ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬೃಹತ್​ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಗದಗ
    ಭಾರತೀಯ ಜನತಾ ಪಾಟಿರ್ ಗದಗ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಹುಬ್ಬಳಿಯ ಅಂಜಲಿ ಹತ್ಯೆ ಖಂಡಿಸಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬೃಹತ್​ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯೆ ನಿರ್ಮಲಾ ಕೊಳ್ಳಿರವರ ನೇತೃತ್ವದಲ್ಲಿ ಬೃಹತ್​ ಪ್ರತಿಭಟನೆ ನಡೆಸಿ ಜಿಲ್ಲಾ-ಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ರಾಜ್ಯವು ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಅಪರಾದಗಳನ್ನು ಕನಿಷ್ಠ ಪ್ರಮಾಣದಲ್ಲಿ ಇಡುವ ನಿಟ್ಟಿನಲ್ಲಿ ಪ್ರಸಿದ್ಧಿ ಹಾಗು ಉತ್ತಮ ಹೆಸರು ಪಡೆದಿತ್ತು. ಆದರೆ ಇಂದಿನ ಕರ್ನಾಟಕ ರಾಜ್ಯದ ಕಾಂಗ್ರೆಸ್​ ಸರ್ಕಾರದ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ. ಇದೀಗ ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ, ಸುಲಿಗೆಗಳು ಹಾಗು ಬಡವರು, ಶೋಷಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಕರ್ನಾಟಕ “ಅಪರಾದಗಳ ರಾಜ್ಯ’ ಎಂಬ ಕೆಟ್ಟ ಹೆಸರು ಪಡೆಯುವಂತಾಗಿದೆ ಎಂದು ಆರೋಪಿಸಿದರು.
    ಮಹಿಳಾ ಮೋರ್ಚಾ ಜಿಲ್ಲಅಧ್ಯೆ ನಿರ್ಮಲಾ ಮಾತನಾಡಿ, ಕಾಂಗ್ರೆಸ್​ ಸರ್ಕಾರ ರಚನೆಯಾದ ನಂತರ ಒಂದು ಕೋಮಿನವರ ಮನವೊಲಿಸಿ ಅಪರಾಧ ಪ್ರಕರಣಗಳು ಹೆಚ್ಚಾಗುವಂತೆ ಮಾಡಲಾಗುತ್ತಿದೆ. ಅಪರಾಧಿಗಳಿಗೆ ರಣೆ ನೀಡುವುದರೊಂದಿಗೆ ಗುಂಡಾ ರಾಜ್ಯದ ಪರಿಕಲ್ಪನೆಗಳಲ್ಲಿ ತೇಲುತ್ತಿರುವ ಹಾಗು ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆಗಳಂತಹ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಅಂಜಲಿ ಅಂಬಿಗೇರ ಹಾಗು ನೇಹಾ ಹಿರೇಮಠ ರವರ ಹತ್ಯೆಗಳು ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವದು ಸ್ಪಷ್ಟವಾಗಿ ಕಾಣುತ್ತಿದೆ ಡಂದು ಆರೋಪಿಸಿದರು.
    ಬಿಜೆಪಿ ಜಿಲ್ಲಾಧ್ಯ ರಾಜು ಕುರುಡಗಿ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಲರಾಗಿ ರಾಜ್ಯದಲ್ಲಿ ಮಹಳೆಯರ ಮೇಲೆ ಅಪರಾಧಗಳು ನಡೆಯುವಂತಾಗಿದೆ ಎಂದು ಆರೋಪಿಸದರು.
    ರತ್ನಾ ಕುರಗೋಡ, ರೇವತಿ ಉಪನಾಳ, ಕಸ್ತೂರಿ ಕಮ್ಮಾರ, ಜ್ಯೋತಿ ಹಾನಗಲ್​, ಪವಿತ್ರಾ ಕಲ್ಕುಟಗರ್​, ನಂದಾ ಪಲ್ಲೇದ, ಶಾರದಾ ದಳವಾಯಿ, ಜ್ಯೋತಿ ಪಾಯಪ್ಪಗೌಡ್ರ, ಸುಮಂಗಲಾ ಕಲ್ಲಾಪೂರ, ಪುಷ್ಪಾ ಉಕ್ಕಲಿ, ಲಕ್ಷಿ$್ಮ ಕಾಕಿ, ರೇಖಾ ಬಂಗಾರಶೆಟ್ಟರ, ಶಾಂತಾ ತಿಮ್ಮಾಪೂರ, ಚನ್ನಮ್ಮ ಹುಳಕಣ್ಣವರ, ಶೇಖವ್ವ ಮಾಸರಡ್ಡಿ, ಕಮಲಾ ತಕ್ಕಲಕೋಟಿ, ಸುಮಂಗಲಾ ಕೊನೆವಾಲ, ರಾಜೇಶ್ವರಿ ಹಾದಿಮನಿ, ಶಿವಲೀಲಾ ಉಮಚಗಿ, ರಾಧಾ ಬಾರಕೇರ, ವೀಣಾ ಬೂದಿಹಾಳ, ಮಂಜುಳಾ ಹೆಬ್ಬಳಮಠ, ಪ್ರಭಾವತಿ ಬೆಳವಣಿಕಿಮಠ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts