More

    ರೈತರಿಂದ ತುಂತೂರು ನೀರಾವರಿ ಘಟಕಕ್ಕಾಗಿ ಅರ್ಜಿ ಆಹ್ವಾನ

    ರಾಣೆಬೆನ್ನೂರ: 2023-24ನೇ ಸಾಲಿನ ಸೂಕ್ಷ್ಮ ನೀರಾವರಿ ಯೋಜನೆಯಡಿ ಕೃಷಿ ಇಲಾಖೆ ವತಿಯಿಂದ ತುಂತೂರು ನೀರಾವರಿ ಘಟಕ ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಆಸಕ್ತ ರೈತರು ತಮ್ಮ ಆಧಾರಕಾರ್ಡ್, ಅಖಾತೆ-ಉತಾರ, ಆರ್.ಟಿ.ಸಿ-ಉತಾರ, ಬೆಳೆ ಹಾಗೂ ನೀರಾವರಿ ಮೂಲದ ದೃಢೀಕರಣ ಪತ್ರ, ಬ್ಯಾಂಕ್ ಪಾಸ್‌ಬುಕ್ ನಕಲು ಪ್ರತಿ ಹಾಗೂ 2 ಘೋಟೊಗಳೊಂದಿಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ಕೂಡಲೇ ಅರ್ಜಿ ಸಲ್ಲಿಸಲು ಸೂಚಿಸಿದೆ.
    ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡ ವರ್ಗದ ರೈತರು ಕಡ್ಡಾಯವಾಗಿ ಆರ್.ಡಿ ನಂಬರ್ ಹೊಂದಿರುವ ಜಾತಿ ಪ್ರಮಾಣ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಿದೆ. ಕಬ್ಬು ಬೆಳೆ ಬೆಳೆದಂತಹ ರೈತರು ಗರಿಷ್ಠ 2.0 ಹೆಕ್ಟೇರ್‌ವರೆಗೆ ಹನಿ ನೀರಾವರಿ ಘಟಕಗಳಿಗೂ ಸಹ ಅರ್ಜಿ ಸಲ್ಲಿಸಬಹುದಾಗಿದೆ.
    ಕೃಷಿ ಯಾಂತ್ರಿಕರಣ ಮತ್ತು ಕೃಷಿ ಸಂಸ್ಕರಣೆ ಯೋಜನೆಯಡಿ ಎಣ್ಣೆಗಾಣಗಳು, ಹಿಟ್ಟಿನ ಗಿರಣಿ, ಕಾರ ಕುಟ್ಟುವ ಮಶಿನ್, ರೊಟ್ಟಿ ಮಷಿನ್, ಮಿನಿ ಆಯಿಲ್ ಎಕ್ಸ್‌ಪೇಲರ್, ರಾಗಿ ಕ್ಲೀನಿಂಗ್ ಮಶಿನ್, ಮಿನಿ ರೈಸ್‌ಮಿಲ್‌ಗಳಿಗಾಗಿ ಸಹ ಆಸಕ್ತ ರೈತರು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts