More

    ಸಾಲ ಮರುಪಾತಿಸಿದಾಗ ಸಹಕಾರಿ ಉಳಿವು

    ಮಾನ್ವಿ: ಸಾಲ ಮರುಪಾವತಿಯಾಗುವಂತೆ ನೋಡಿಕೊಳ್ಳುವುದು ಸಹಕಾರಿಯ ಆಡಳಿತ ಮಂಡಳಿ ಜವಾಬ್ದಾರಿ ಎಂದು ರಾಯಚೂರು ಸಹಕಾರ ಸಂಘಗಳ ಉಪನಿಬಂಧಕ ಮನೋಹರ ತಿಳಿಸಿದರು.

    ಸಾಲ ಮರುಪಾವತಿಯಾಗುವಂತೆ ನೋಡುವುದು ಆಡಳಿತ ಮಂಡಳಿ ಜವಾಬ್ದಾರಿ

    ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಭವನದಲ್ಲಿ ಶನಿವಾರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದರು. ಸಾಲವನ್ನು ಮರು ಪಾವತಿಸಿದಾಗ ಮಾತ್ರ ಸಹಕಾರಿಗಳು ಉಳಿಯಲು ಸಾಧ್ಯ ಎಂದರು.

    ಇದನ್ನೂ ಓದಿ: ಬೀರೇಶ್ವರ  ಕ್ರೆಡಿಟ್ ಸೊಸೈಟಿ ಕಲಬುರಗಿ ಶಾಖೆ ಉದ್ಘಾಟನೆ ನಾಳೆ : ಪಾಟೀಲ್ ಕಲ್ಲಾ ಹೇಳಿಕೆ

    ಆಸ್ತಿಯನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುವ ಪರಿಸ್ಥಿತಿ ಬರುವ ಸಂಭವವಿರುವುದರಿಂದ ಸಾಲವನ್ನು ನೀಡುವಾಗ ಸರಿಯಾದ ದಾಖಲಾತಿಗಳನ್ನು ಪರಿಶೀಲಿಸಬೇಕು. ಅಲ್ಲದೆ ಕಾನೂನು ಸಲಹೆಯನ್ನು ಪಡೆಯಬೇಕು. ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಮರುಪಾವತಿ ಸಾಮರ್ಥ್ಯ ಇರುವವರಿಗೆ ಮಾತ್ರ ಸಾಲವನ್ನು ನೀಡಬೇಕು ಎಂದು ಹೇಳಿದರು.

    ಹೊಸಪೇಟೆಯ ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ, ಸಂಪನ್ಮೂಲ ವ್ಯಕಿ ಲಿಯಾಕತ್ ಅಲಿ ಅವರು ಸಹಕಾರಿ ಸಂಘದಿಂದ ನೀಡಿದ ಸಾಲ ವಸೂಲಾತಿಯಲ್ಲಿ ಅನುಸರಿಸಬೇಕಾದ ಮಹತ್ವದ ಕ್ರಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
    ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಶಿವಪ್ಪಗೌಡ, ತಾಲೂಕು ಆರ್‌ಡಿಸಿಸಿ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಲಿಂಗರೆಡ್ಡಿ, ಎಪಿಎಂಸಿ ಲೆಕ್ಕಾಧಿಕಾರಿ ಇಸ್ಮಾಯಿಲ್, ಜಿಲ್ಲಾ ಸಹಕಾರ ಶಿಕ್ಷಕಿ ಕೆ.ಅಶ್ವಿನಿ, ಸಹ ಶಿಕ್ಷಕಿ ಮಂಜುಳಾ ಸೇರಿದಂತೆ ಮಾನ್ವಿ ಮತ್ತು ಸಿರವಾರ ತಾಲೂಕುಗಳಲ್ಲಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts