More

    ನಾಳೆಯಿಂದ ಮೈಸೂರಲ್ಲಿ ವಿಜಯವಾಣಿ ಕೃಷಿ ಮೇಳ: ಶುಕ್ರವಾರ ಬೆಳಗ್ಗೆ ಸಿಎಂ ಯಡಿಯೂರಪ್ಪರಿಂದ ಚಾಲನೆ

    ಮೈಸೂರು: ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಮತ್ತು ‘ದಿಗ್ವಿಜಯ’ 24ಗಿ7 ನ್ಯೂಸ್ ಚಾನಲ್ ಆಯೋಜಿಸಿರá-ವ ರಾಜ್ಯಮಟ್ಟದ ಕೃಷಿ ಮೇಳ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಫೆ.21ರಿಂದ 23ರವರೆಗೆ ಮೇಳೈಸಲಿದೆ. ಸಿದ್ಧತೆಗಳು ಈಗಾಗಲೇ ಅಂತಿಮ ರೂಪು ಪಡೆದುಕೊಂಡಿದ್ದು, ಮೈಸೂರು ವಿಶ್ವವಿದ್ಯಾಲಯ ಸಹಯೋಗ ನೀಡಿದೆ. ನಾಡಿನ ವಿವಿಧ ಭಾಗಗಳಿಂದ ರೈತರು, ಕೃಷಿ ತಜ್ಞರು, ವಿದ್ವಾಂಸರು, ಪ್ರಗತಿಪರ ಕೃಷಿಕರು ಭಾಗವಹಿಸುವ ಮೇಳಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಫೆ.21ರಂದು ಬೆಳಗ್ಗೆ 10.30ಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ವಿಆರ್​ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅಧ್ಯಕ್ಷತೆ ವಹಿಸಲಿದ್ದು, ಕೃಷಿ ಸಚಿವ ಬಿ.ಸಿ.ಪಾಟೀಲ್ ಕರುಗಳು, ಕುರಿ, ವಿವಿಧ ತಳಿಗಳ ಹಸುಗಳ ಪ್ರದರ್ಶನಕ್ಕೆ ಚಾಲನೆ ನೀಡುವರು.

    ಕೃಷಿಮೇಳದ ಅಂಗವಾಗಿ ‘ವಿಜಯವಾಣಿ’ ಹೊರತಂದಿರುವ ವಿಶೇಷ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬಿಡುಗಡೆಗೊಳಿಸುವರು. ಕೃಷಿ ಸಂಸ್ಕೃತಿ, ಆಧುನಿಕ ಯಂತ್ರೋಪಕರಣ, ಹೈನುಗಾರಿಕೆ ಸೇರಿ ಇನ್ನಿತರ ಮಾಹಿತಿ ನೀಡುವ ಮಳಿಗೆಗಳನ್ನು ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಉದ್ಘಾಟಿಸಲಿದ್ದಾರೆ. ಕೃಷಿ ಉತ್ಪನ್ನಗಳು, ಕೃಷಿ ಸಲಕರಣೆಗಳು ಸೇರಿ ನೂರಕ್ಕೂ ಹೆಚ್ಚು ಮಳಿಗೆಗಳು ಗಮನ ಸೆಳೆಯಲಿವೆ.

    ಸುಸ್ಥಿರ ಕೃಷಿ ಅಭಿವೃದ್ಧಿಯ ಧ್ಯೇಯದೊಂದಿಗೆ ಏರ್ಪಡಿಸಿರುವ ಈ ಮೇಳದ ಉದ್ಘಾಟನೆಗೂ ಮುನ್ನಾ ಫೆ.21ರಂದು ಬೆಳಗ್ಗೆ 10ಕ್ಕೆ ನಗರದ ಶ್ರೀಬಸವೇಶ್ವರ ವೃತ್ತ (ಸಂಸ್ಕೃತ ಪಾಠಶಾಲೆ)ದಿಂದ ಮಹಾರಾಜ ಕಾಲೇಜು ಮೈದಾನದವರೆಗೆ ಆಕರ್ಷಕ ಮೆರವಣಿಗೆ ಇರಲಿದೆ. ರಂಗಕರ್ವಿು ಜನಾರ್ದನ್(ಜನ್ನಿ) ಅವರಿಂದ ಜಾನಪದ, ರೈತ ಗೀತೆಗಳ ಗಾಯನ ಇರಲಿದೆ. ‘ಕೃಷಿ ಮತ್ತು ರೈತರ ತವಕ-ತಲ್ಲಣ’ ಕುರಿತು ಚಿಂತನಮಂಥನಕ್ಕೆ ವೇದಿಕೆಯಾಗುವ ವಿಚಾರಗೋಷ್ಠಿಯನ್ನು ಫೆ.22ರಂದು ಬೆಳಗ್ಗೆ 10ಕ್ಕೆ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಉದ್ಘಾಟಿಸುವರು. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಧ್ಯಕ್ಷತೆ ವಹಿಸವರು. ಬಳಿಕ ‘ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ’, ಮಧ್ಯಾಹ್ನ 12ಕ್ಕೆ ‘ಸುಸ್ಥಿರ ಕೃಷಿ-ಮಾರುಕಟ್ಟೆ ಸವಾಲುಗಳá-’ ಕá-ರಿತು ಗೋಷ್ಠಿ ಜರುಗಲಿದ್ದು, ಹಲವು ತಜ್ಞರು ವಿಷಯ ಮಂಡಿಸಲಿದ್ದಾರೆ.

    ಫೆ.23ರಂದು ಬೆಳಗ್ಗೆ 10ಕ್ಕೆ ‘ಕೃಷಿ ನೀರು ನಿರ್ವಹಣೆ’ ಮತ್ತು ಮಧ್ಯಾಹ್ನ 12ಕ್ಕೆ ‘ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯ ಮೌಲ್ಯವರ್ಧಿತ ಅಂಶ ಸೇರ್ಪಡೆ ಹೇಗೆ’ ಗೋಷ್ಠಿ ಇರಲಿದ್ದು, ವಿಷಯ ಪರಿಣಿತರೊಂದಿಗೆ ಚರ್ಚೆ ಇರಲಿದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ಆಯ್ದ ಸಾಧಕರನ್ನು ಸನ್ಮಾನಿಸಲಾಗುವುದು.

    ಮೇಳದಲ್ಲಿ ಮನೋಲ್ಲಾಸ: ಕೃಷಿಮೇಳದಲ್ಲಿ ಕೇವಲ ಗೋಷ್ಠಿ, ವಿಚಾರ ಸಂಕಿರಣ ಮಾತ್ರ ಇರದೆ ರೈತರು ಹಾಗೂ ಇನ್ನಿತರ ಸಾರ್ವಜನಿಕರ ಮನೋಲ್ಲಾಸಗೊಳಿಸುವ ಹಲವು ಸ್ಪರ್ಧೆಗಳು, ನೃತ್ಯ ಇರಲಿವೆ. ಮೊದಲ ದಿನ ಮಧ್ಯಾಹ್ನ 3ಕ್ಕೆ ಮುಖ್ಯವೇದಿಕೆಯಲ್ಲಿ ಜಾನಪದ ನೃತ್ಯ ಸ್ಪರ್ಧೆ ನಡೆಯಲಿದೆ. ಅದೇ ಹೊತ್ತಿಗೆ ಹೊರಾಂಗಣ ವೇದಿಕೆಯಲ್ಲಿ ದೇಸಿ ಕ್ರೀಡೆಗಳು, ಮಹಿಳೆಯರಿಗೆ ರಾಗಿ ಬೀಸುವುದು, ರಂಗೋಲಿ ಸ್ಪರ್ಧೆ, ಬಿಂದಿಗೆ ಹೊತ್ತು ಓಡುವುದು, ಕೂಸುಮರಿ, ಒಂದು ಕಾಲಿನ ಓಟ, ಗೋಣಿಚೀಲದ ಓಟ, ಅವರೆಕಾಯಿ ಬಿಡಿಸುವುದು, ಹಗ್ಗಜಗ್ಗಾಟ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಬಳಿಕ ಜಾನಪದ ಗಾಯಕ ಮೈಸೂರು ಗುರುರಾಜ್ ಅವರು ಮಂಟೇಸ್ವಾಮಿ ಕಥಾ ಪ್ರಸಂಗ ನಡೆಸಿಕೊಡಲಿದ್ದಾರೆ. 2ನೇ ದಿನ ಬೆಳಗ್ಗೆ 10ಕ್ಕೆ ರಂಗೋಲಿ ಸ್ಪರ್ಧೆ, ಮಧ್ಯಾಹ್ನ 3ಕ್ಕೆ ವೇಷಭೂಷಣ ಸ್ಪರ್ಧೆ ಜರುಗಲಿದೆ. ಪುರುಷರಿಗಾಗಿ ಹಗ್ಗಜಗ್ಗಾಟ, ಬುಗುರಿ, ಲಗೋರಿ, ಕುದುರೆ ಓಟ, 3 ಕಾಲಿನ ಓಟ, ಮೂಟೆ ಹೊರುವ ಸ್ಪರ್ಧೆ, ಗೋಣಿಚೀಲ ಓಟ, ಹಿಮ್ಮುಖ ಓಟದ ಸ್ಪರ್ಧೆಗಳು ಜರುಗಲಿವೆ.

    ಸಂಜೆ 6ಕ್ಕೆ ರಂಗಕರ್ವಿು ಮಂಡ್ಯ ರಮೇಶ್ ನಿರ್ದೇಶನದಲ್ಲಿ ‘ಚೋರ ಚರಣದಾಸ’ ನಾಟಕವನ್ನು ನಟನ ರಂಗಶಾಲೆ ತಂಡ ಪ್ರಸ್ತುತಪಡಿಸಲಿದೆ. ಕೊನೆದಿನ ಬೆಳಗ್ಗೆ 10ಕ್ಕೆ ರಾಗಿಮುದ್ದೆ, ಬಾಳೆಹಣ್ಣು, ಕಡ್ಲೆಪುರಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ. 23ರಂದು ಮಧ್ಯಾಹ್ನ 2ಕ್ಕೆ ಜರುಗುವ ಸಮಾರೋಪದಲ್ಲಿ ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ.ಎಂ.ಮಹದೇವಪ್ಪ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ವಿ.ಶ್ರೀನಿವಾಸಪ್ರಸಾದ್, ಪ್ರತಾಪ್ ಸಿಂಹ, ಸುಮಲತಾ, ಪ್ರಜ್ವಲ್ ರೇವಣ್ಣ ಇತರರು ಭಾಗವಹಿಸಲಿದ್ದಾರೆ.

    ನವಧಾನ್ಯಗಳ ಶಿವಲಿಂಗ ಪ್ರತಿಷ್ಠಾಪನೆ

    ರಾಜ್ಯಮಟ್ಟದ ಕೃಷಿಮೇಳದಲ್ಲಿ ನವಧಾನ್ಯಗಳ ಶಿವಲಿಂಗ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುವ ಮೂಲಕ ಶಿವರಾತ್ರಿಯ ಭಕ್ತಿಗೂ ಸಾಕ್ಷಿಯಾಗಲಿದೆ. ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಈ ನವಧಾನ್ಯ ಶಿವಲಿಂಗ ನಿರ್ಮಾಣ ಮಾಡಲಿದೆ. ರೈತರು ಬೆಳೆದ ಬೆಳೆಗಳಲ್ಲಿಯೇ ನವಗ್ರಹಗಳನ್ನು ಪ್ರತಿನಿಧಿಸುವ ನವಧಾನ್ಯಗಳಿಂದ 9 ಶಿವಲಿಂಗಗಳನ್ನು ನಿರ್ಮಾಣ ಮಾಡುವ ಮೂಲಕ ಮೇಳದಲ್ಲಿಯೂ ಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು.ನವಧಾನ್ಯಗಳಾದ ಅಕ್ಕಿ, ಗೋಧಿ, ಉದ್ದಿನಕಾಳು, ಹೆಸರುಕಾಳು, ಅವರೆಕಾಳು, ಕಡ್ಲೆಕಾಳು, ತೊಗರಿಬೇಳೆ, ಎಳ್ಳು, ಹುರುಳಿಕಾಳುಗಳಿಂದ ಲಿಂಗಗಳನ್ನು ಅಲಂಕರಿಸಿ ಆಕರ್ಷಕವಾಗಿ ಅಲಂಕಾರಗೊಳಿಸಲಾಗುವುದು. ಸಂಜೆ 5ಕ್ಕೆ ನವಧಾನ್ಯ ಶಿವಲಿಂಗದ ಸ್ಥಾಪನೆ, ವಿಶೇಷ ಪೂಜೆ, ಧವನ ಸಮರ್ಪಣೆ ಕಾರ್ಯಕ್ರಮ ಇರಲಿದೆ. ಶಿವರಾತ್ರಿಯಿಡೀ ಧಾರ್ವಿುಕ ಆಚರಣೆಗಳು, ಗೀತಗಾಯನ ಇರಲಿದೆ. ಶಿವಲಿಂಗಗಳ ದರ್ಶನಕ್ಕೆ ಮೂರೂ ದಿನಗಳು ಸಾರ್ವಜನಿಕರಿಗೆ ಮುಕ್ತ ಪ್ರವೇಶಾವಕಾಶ ಇರಲಿದೆ.

    ಚೋರ ಚರಣದಾಸ!

    ‘ಕೃಷಿ ಮೇಳ’ದಲ್ಲಿ 22 ರಂದು ಸಂಜೆ 6 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಾಸ್ಯ ಪ್ರಧಾನ ‘ಚೋರ ಚರಣದಾಸ’ ನಾಟಕ ಪ್ರದರ್ಶನವಾಗಲಿದೆ. ದೇಶದ ಪ್ರತಿಷ್ಠಿತ ವೇದಿಕೆಗಳಲ್ಲಿ 250ಕ್ಕೂ ಹೆಚ್ಚಿನ ಪ್ರದರ್ಶನ ನೀಡಿ ಜನಮನ ಗೆದ್ದಿರುವ ಈ ನಾಟಕವನ್ನು ಮಂಡ್ಯ ರಮೇಶ್ ನಿರ್ದೇಶಿಸಿದ್ದಾರೆ. ಹಬೀಬ್ ತನ್ವೀರ್ ರಚಿಸಿದ್ದಾರೆ. ಮೈಸೂರಿನ ನಟನ ರಂಗಶಾಲೆ ವಿದ್ಯಾರ್ಥಿಗಳು ಅಭಿನಯಿಸಲಿದ್ದಾರೆ. ಚಂದ್ರಶೇಖರ ಹೆಗ್ಗೂಠಾರ (ಸ್ವರ ಸಂಯೋಜನೆ), ಸರೋಜ ಹೆಗಡೆ ರಂಗಾಯಣ (ಉಡುಪು), ಮೇಘ ಸಮೀರ, ದಿಶಾ ರಮೇಶ್ (ಸಂಗೀತ, ಸಾಂಗತ್ಯ), ಮಂಡ್ಯ ರಮೇಶ್ (ವಿನ್ಯಾಸ) ತಾಂತ್ರಿಕವಾಗಿ ಸಹಕರಿಸಿದ್ದಾರೆ. ನಾಟಕ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಮೂರು ದಶಕದಷ್ಟು ಹಿಂದಿನ ಈ ನಾಟಕವು ಸಾರ್ವಕಾಲಿಕವೆನ್ನುವಷ್ಟು ಸತ್ಯವನ್ನು ಧ್ವನಿಸುತ್ತದೆ. ಪ್ರಸ್ತುತ ಪ್ರಯೋಗವನ್ನು ಅತ್ಯಂತ ಹಾಸ್ಯಮಯವಾಗಿ ಮತ್ತು ವಿಡಂಬನಾತ್ಮಕವಾಗಿ ಕೃತಿಯ ಆಂತರಿಕ ಧ್ವನಿಯೊಂದಿಗೆ ಈ ಜಾಯಮಾನಕ್ಕೆ ಒಗ್ಗುವ ಹಾಗೆ ಕಟ್ಟಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts