More

    ಬೆಳೆವಿಮೆ ಯೋಜನೆಗೆ ಅನುಮೋದನೆ, ನೋಂದಣಿ ವಿಸ್ತರಣೆಗೆ ಬೆಳೆಗಾರರ ಮನವಿ

    ಉಡುಪಿ: ಮುಂಗಾರು-ಹಿಂಗಾರು ಹಂಗಾಮು ಹವಮಾನ ಆಧಾರಿತ ಬೆಳೆ 2020-21ನೇ ಸಾಲಿನಿಂದ 2022-23ನೇ ಸಾಲಿನ ವಿಮೆ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ನೀಡಿರುವ ಮಾನದಂಡಗಳ ಆಧಾರದಲ್ಲಿ ತೋಟಗಾರಿಕೆ ರೈತರಿಗೆ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಉಂಟಾದಲ್ಲಿ ನಷ್ಟ ಪರಿಹಾರವನ್ನು ಪಡೆಯಲು ಈ ಯೋಜನೆ ಅವಕಾಶ ಕಲ್ಪಿಸುತ್ತದೆ.
    ಜೂನ್ ಒಳಗೆ ಆಗಬೇಕಿದ್ದ ಈ ಪ್ರಕ್ರಿಯೆ ಕೋವಿಡ್-19 ಮತ್ತು ವಿಮಾ ಕಂಪನಿಗಳ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆ ಸೇರಿದಂತೆ ಕೆಲ ಕಾರಣಗಳಿಂದ ಸಾಕಷ್ಟು ವಿಳಂಬವಾಗಿತ್ತು. ಮುಂಗಾರು ಹಂಗಾಮು ಬೆಳೆ ವಿಮಾ ಯೋಜನೆಗೆ ಸಂಬಂಧಿಸಿ ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 30ರ ಒಳಗೆ ಕೃಷಿಕರು ಬ್ಯಾಂಕುಗಳಲ್ಲಿ ನೋಂದಾಯಿಸಬೇಕು.

    ಅವಧಿ ವಿಸ್ತರಣೆಗೆ ರೈತರ ಮನವಿ: ಸರ್ಕಾರವು ಯೋಜನೆಗೆ ಅನುಮೋದನೆ ನೀಡಿರುವುದೇ ವಿಳಂಬವಾದ ಕಾರಣ ಇನ್ನೂ ಮೂರು ದಿನಗಳಲ್ಲಿ ರೈತರು ವಿಮಾ ಯೋಜನೆಗೆ ನೋಂದಯಿಸಿಕೊಳ್ಳಲು ಅಸಾಧ್ಯವಾಗಿದೆ. ಸರ್ಕಾರ ಈ ನೋಂದಣಿ ಅವಧಿಯನ್ನು ವಿಸ್ತರಿಸುವ ಬಗ್ಗೆ ಸದ್ಯ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ದಿನಾಂಕ ವಿಸ್ತರಣೆ ಮಾಡುವ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ರೈತರು ವಾರದ ಮಟ್ಟಿಗಾದರೂ ನೋಂದಣಿಗೆ ಅವಕಾಶ ಕೇಳಿದ್ದಾರೆ.

    ಶೇ.5 ರಷ್ಟು ವಿಮಾ ಕಂತು: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಅಡಕೆ ಮತ್ತು ಕಾಳು ಮೆಣಸು ಬೆಳೆಯನ್ನು ವಿಮಾ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಅಡಕೆ ಪ್ರತೀ ಹೆಕ್ಟೇರ್‌ಗೆ ವಿಮಾ ಮೊತ್ತ 1.28 ಲಕ್ಷ ರೂ, ರೈತರು ಪಾವತಿಸಬೇಕಾದ ವಿಮಾ ಕಂತು 6400 ರೂ, ಕರಿಮೆಣಸು 47 ಸಾವಿರ ರೂ, ರೈತರು ಪಾವತಿಸಬೇಕಿರುವುದು 2350 ರೂ. ಗಾಳಿ, ಆಲಿಕಲ್ಲು ಮಳೆ, ಭೂಕುಸಿತ, ಮೇಘಸ್ಫೋಟದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ವಿಮಾ ಪರಿಹಾರ ಪಡೆಯಬಹುದು. ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ 3339, 2017-18ನೇ ಸಾಲಿನಲ್ಲಿ 991, 2018-19ರ ಸಾಲಿನಲ್ಲಿ 1844, 2019-20ನೇ ಸಾಲಿನಲ್ಲಿ 3473 ರೈತರು ವಿಮಾ ಯೋಜನೆಗೆ ನೋಂದಾಯಿಸಿದ್ದರು. 2018-19ರಲ್ಲಿ ಜಿಲ್ಲೆಯ ಕೃಷಿಕರಿಗೆ ಬೆಳೆ ಹಾನಿ ಸಂಬಂಧಿಸಿ 5.12 ಕೋಟಿ ರೂ ಪರಿಹಾರ ದೊರೆತಿದೆ.

    ಮುಂಗಾರು-ಹಿಂಗಾರು ಹವಾಮಾನ ಆಧಾರಿತ ಬೆಳೆ ಬೆಳೆ ವಿಮೆ ಯೋಜನೆಗೆ ಜೂನ್ 25ರಂದು ಸರ್ಕಾರ ಅನುಮೋದನೆ ನೀಡಿದೆ. ರೈತರು ಈ ಬಗ್ಗೆ ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಕಚೇರಿ, ಖಾತೆ ಹೊಂದಿರುವ ಬ್ಯಾಂಕ್ ಶಾಖೆಗಳಲ್ಲಿ ವಿಚಾರಿಸಬಹುದು.
    – ಭುವನೇಶ್ವರಿ, ಉಪ ನಿರ್ದೇಶಕಿ, ತೋಟಗಾರಿಕೆ ಇಲಾಖೆ

    ಇದೊಂದು ಅತ್ಯುತ್ತಮ ಯೋಜನೆ ಆಗಿದ್ದು, ಬೆಳೆ ಹಾನಿಗೊಳಗಾದ ರೈತನಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ. ಗಾಳಿ-ಮಳೆಯಿಂದ ಹಾನಿಗೀಡಾಗಿದ್ದ ಅಡಕೆ ಮತ್ತು ಕಾಳು ಮೆಣಸಿಗೆ ವಿಮೇ ಪರಿಹಾರ ದೊರಕಲಿದೆ. ಈ ವರ್ಷ ಪಕ್ರಿಯೆ ವಿಳಂಬವಾಗಿದ್ದು, ಕೆಲವು ದಿನ ಅರ್ಜಿ ಸಲ್ಲಿಕೆ, ನೋಂದಣಿಗೆ ಕಾಲವಕಾಶ ವಿಸ್ತರಿಸಿದರೆ ಎಲ್ಲಾ ರೈತರಿಗೆ ಅನುಕೂಲವಾಗಲಿದೆ.
    – ಅಮರ್‌ನಾಥ್ ಚಾತ್ರ, ಹಳ್ಳಿಹೊಳೆ, ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts