More

    500 ರೂಪಾಯಿಗೋಸ್ಕರ 30 ಕಿ.ಮೀ. ನಡೆದ ಮಹಿಳೆಗೆ ಸಮಾಜ ನೀಡಿತು ಭರಪೂರ ನೆರವು..

    ಆಗ್ರಾ: ಕೇವಲ 500 ರೂಪಾಯಿಗೋಸ್ಕರ ಮಹಿಳೆಯೊಬ್ಬರು ಬರೋಬ್ಬರಿ 30 ಕಿ.ಮೀ. ನಡೆದೇ ಹೋಗಿದ್ದರು. ಅವರಿಗೆ ಬೆನ್ನೆಲುಬಿನ ಸಮಸ್ಯೆ ಇದ್ದು, ಸರ್ಕಾರ ನೀಡುವ 500 ರೂಪಾಯಿ ಹಣಕಾಸಿನ ನೆರವು ಪಡೆಯುವುದಕ್ಕಾಗಿ ಅವರು ನಡೆದು ಕೊಂಡು ಹೋಗಿದ್ದರು. ಅಷ್ಟು ದೂರ ನಡೆದಾಕೆ ನಿರಾಸೆ ಕಾದಿತ್ತು. ಜನಧನ ಖಾತೆ ಇಲ್ಲದ ಕಾರಣ ಹಣ ಸಿಗಲಿಲ್ಲ. ಆದರೆ, ಈ ಕಥೆ ಕೇಳಿದ ಸಮಾಜ ಆಕೆಯ ಕೈ ಬಿಡಲಿಲ್ಲ.

    ಅಂದ ಹಾಗೆ ಈ ಮಹಿಳೆಯ ಹೆಸರು ರಾಧಾದೇವಿ. ವಯಸ್ಸು 50. ಫಿರೋಜಾಬಾದ್​ ಜಿಲ್ಲೆಯ ಹಿಮ್ಮತ್​​ಪುರ ಗ್ರಾಮದ ಹರವೀರ್ ಅವರ ಪತ್ನಿ. ಅವರು ಆಗ್ರಾದ ಶಂಭು ನಗರ ಎಂಬಲ್ಲಿಗೆ 20 ವರ್ಷಗಳ ಹಿಂದೆ ವಲಸೆ ಬಂದಿದ್ದು, ದಿನಗೂಲಿ ಕೆಲಸ ಮಾಡುತ್ತಾರೆ. ಲಾಕ್​ಡೌನ್ ಅವಧಿಯಲ್ಲಿ ಅದಕ್ಕೆ ಹೊಡೆತ ಬಿದ್ದ ಕಾರಣ, ಯಾರೋ ಹೇಳಿದ ಮಾತು ಕೇಳಿ 500 ರೂಪಾಯಿ ಆಸೆಗೋಸ್ಕರ 15 ವರ್ಷದ ಮಗನ ಜತೆಗೆ ಆಗ್ರಾಕ್ಕೆ ತೆರಳಿದ್ದರು ರಾಧಾ ದೇವಿ.

    ಇದನ್ನೂ ಓದಿ: ಪೆಟ್ರೋಲ್​, ಡೀಸೆಲ್​ಗಳನ್ನೂ ಜಿಎಸ್​ಟಿ ವ್ಯಾಪ್ತಿಗೆ ತನ್ನಿ: ಅಸೋಚಾಮ್ ಮನವಿ

    ಜನಧನ ಖಾತೆ ಇಲ್ಲದೇ ಹೋದರೂ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್​ಬಿಐ)ದ ಪಚೋಖರ ಬ್ರಾಂಚ್​ನಲ್ಲಿ ಆಕೆಯದೊಂದು ಅಕೌಂಟ್ ಇತ್ತು. ಆಕೆಗೆ ನಿರಾಸೆಯಾದ ಕಥೆ ಸುದ್ದಿಯಾಗಿ ಪ್ರಕಟವಾದ ಬೆನ್ನಿಗೆ ಸಮಾಜ ಸ್ಪಂದಿಸಿತು. ಕೇವಲ 207 ರೂಪಾಯಿ ಇದ್ದ ಬ್ಯಾಂಕ್ ಖಾತೆಯಲ್ಲಿ ಕೆಲವೇ ಗಂಟೆಗಳ ಅವಧಿಯಲ್ಲಿ 26,000 ರೂಪಾಯಿ ಜಮೆ ಆಗಿತ್ತು! ಬ್ಯಾಂಕ್​ನ ಮೂಲಗಳ ಪ್ರಕಾರ, ಕೆಲವೇ ಗಂಟೆಗಳ ಅವಧಿಯಲ್ಲಿ ಆಕೆಗೆ ಆ ಮೊತ್ತದ ದುಡ್ಡು ಜಮೆ ಮಾಡಿದವರ ಸಂಖ್ಯೆ 29.

    ಇದನ್ನೂ ಓದಿ: ಇದು ಸಸ್ಪೆನ್ಸ್​: ತುರಿದ ಚೀಸ್​ ಬಳಸಿ ಆ ವಿದ್ಯಾರ್ಥನಿಯರು ಹಲ್ಲೆ ನಡೆಸಿದ್ದು ಹೇಗೆ?!!!

    ರಾಧಾದೇವಿಯವರ ವಿಚಾರ ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು, ಸರ್ಕಾರಿ ಯೋಜನೆ ಮೂಲಕ ಆಕೆಗೆ ನೆರವು ಒದಗಿಸುವ ನಿಟ್ಟಿನಲ್ಲಿ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರ ಸಹಾಯಕರು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಬೆಳವಣಿಗೆ ಕಂಡು ಗದ್ಗದಿತರಾಗಿರುವ ರಾಧಾ ದೇವಿ, ನನ್ನ ಖುಷಿಗೆ ಪಾರವೇ ಇಲ್ಲ. ಜನತೆ ನನ್ನ ಮೇಲೆ ಇಷ್ಟೊಂದು ಪ್ರೀತಿ ತೋರುತ್ತಾರೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಸಮಾಜಕ್ಕೆ ನಾನು ಚಿರಋಣಿ ಎಂದಿದ್ದಾರೆ. (ಏಜೆನ್ಸೀಸ್​)

    7 ಲಕ್ಷ ಕೋಟಿ ರೂಪಾಯಿ ಕೇವಲ ಎರಡೇ ದಿನದಲ್ಲಿ ಕೈ ಬಿಟ್ಟು ಹೋಯಿತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts