More

    ಅಗ್ನಿಪಥ್ ವಿವಾದ; ಈ ರಾಜ್ಯದ 12 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಬಂದ್

    ಪಾಟ್ನಾ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅಗ್ನಿಪಥ್ ನೇಮಕ ವಿರೋಧಿಸಿ ಇಂದು ಭಾರತ ಬಂದ್​ ನಡೆಯುತ್ತಿದೆ. ಬಿಹಾರದಲ್ಲಿ ಯುವಕರು ಅಗ್ನಿಪಥ್​ಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬಿಹಾರ ಸರ್ಕಾರವು 20 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

    ಜೂನ್ 17 ರಿಂದ 12 ಜಿಲ್ಲೆಗಳಲ್ಲಿ ಇಂಟರ್​ನೆಟ್​ ಸೇವೆ ಸ್ಥಗಿತ ಆದೇಶ ಈಗಾಗಲೇ ಜಾರಿಯಲ್ಲಿದೆ ಮತ್ತು ಇನ್ನೂ ಎಂಟು ಜಿಲ್ಲೆಗಳಿಗೂ ಈ ನಿಷೇಧವನ್ನು ವಿಸ್ತರಿಸಿ ಬಿಹಾರ ಸರ್ಕಾರ ಆದೇಶ ಹೊರಡಿಸಿದೆ. ಇಂಟರ್‌ನೆಟ್ ಸೇವೆಗಳ ಅಮಾನತು ಮಾಡಿರುವುದರಿಂದ ಹಿಂಸಾಚಾರ ತಕ್ಕಮಟ್ಟಿಗೆ ತಹಬದಿಗೆ ಬಂದಿದೆ.

    ಕೈಮೂರ್, ಭೋಜ್‌ಪುರ, ಔರಂಗಾಬಾದ್, ರೋಹ್ತಾಸ್, ಬಕ್ಸರ್, ನಾವಡಾ, ಪಶ್ಚಿಮ ಚಂಪಾರಣ್, ಸಮಸ್ತಿಪುರ್, ಲಖಿಸರಾಯ್, ಬೇಗುಸರಾಯ್, ವೈಶಾಲಿ, ಸರನ್, ಮುಜಾಫರ್‌ಪುರ್, ಮೋತಿಹಾರಿ, ದರ್ಬಂಗಾ, ಗಯಾ, ಮಧುಬನಿ, ಜಹಾನಾಬಾದ್, ಖಗಾರಿಯಾ ಮತ್ತು ಶೇಖ್‌ಪುರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

    ಅಗ್ನಿಪಥ್ ಯೋಜನೆ: ಸುಳ್ಳು ಸುದ್ದಿ ಹರಡಿ ಹಿಂಸೆಗೆ ಪ್ರಚೋದನೆ- ವಾಟ್ಸ್​ಆ್ಯಪ್​ ಬ್ಯಾನ್​, 10 ಮಂದಿ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts