More

    ಜ್ವಾಲಾಮುಖಿಯ ಭಯದಲ್ಲೇ ಬದುಕುತ್ತಿವೆ ಇಲ್ಲಿನ ಕುಟುಂಬಗಳು! ಅತ್ಯಂತ ಭಯ ತರಿಸುವ ಈ ದ್ವೀಪ ಯಾವುದು ಗೊತ್ತೇ?

    ಟೋಕ್ಯೋ: ಜ್ವಾಲಾಮುಖಿ ಎಂದರೆ ಯಾರಿಗೆ ತಾನೆ ಭಯವಿರುವುದಿಲ್ಲ. ಭೂಮಿ ಬೆಂಕಿ ಹೊರ ಹಾಕುತ್ತ ಕುಳಿತಿದ್ದರೆ ಸುತ್ತ ಮುತ್ತ ನೂರಾರು ಕಿ.ಮೀನಲ್ಲಿ ವಾಸವಿರುವ ಜನರು ಅಲ್ಲಿಂದ ಕಾಲು ಕೀಳಲೇ ಬೇಕಾದ ಅಸಹಾಯಕತೆ ಬಂದೊದಗಿಬಿಡುತ್ತದೆ. ಅದೇ ರೀತಿ ಈ ದ್ವೀಪವೂ ಕೂಡ ಜ್ವಾಲಾಮುಖಿಯ ದ್ವೀಪವೇ, ಆದರೂ ಇಲ್ಲಿ 170 ಜನರು ಅದೇ ಭಯದ ನಡುವೆ ಬದುಕುತ್ತಿದ್ದಾರೆ.

    ಈ ರೀತಿಯ ಒಂದು ದ್ವೀಪವಿರುವುದು ಜಪಾನ್​ನಲ್ಲಿ. ಅಗಾಶಿಮಾ ಹೆಸರಿನ ದ್ವೀಪದಲ್ಲಿ 1781ರಿಂದ 1785ರವರೆಗೆ ಕೊನೆಯ ಬಾರಿಗೆ ಜ್ವಾಲಾಮುಖಿ ಸಂಭವಿಸಿತ್ತು. ಆದರೆ ಇದುವರೆಗೂ ಅಲ್ಲಿ ಜ್ವಾಲಾಮುಖಿ ಸಂಭವಿಸಬಲ್ಲಂತ ಅಂಶಗಳಿದೆ ಎಂದು ಹವಾಮಾನ ಇಲಾಖೆ ಅದನ್ನು ಜ್ವಾಲಾಮುಖಿ ದ್ವೀಪ ಎಂದೇ ಕರೆದಿದೆ. ಕೊನೆಯ ಬಾರಿ ಜ್ವಾಲಾಮುಖಿ ಎದ್ದಾಗ 140 ಜನರು ಸಾವನ್ನಪ್ಪಿದ್ದರಂತೆ. ಅಷ್ಟಾದರೂ ಹೆದರದ ಜನರು ಈಗಲೂ ಅಲ್ಲಿದ್ದಾರೆ. 170 ಜನರು ಈಗಲೂ ಅಲ್ಲಿ ಜೀವನ ನಡೆಸುತ್ತಿದ್ದಾರೆ.

    ಅಂದಹಾಗೆ ಈ ದ್ವೀಪ ಹೇಳುವಷ್ಟು ದೊಡ್ಡವೂ ಇಲ್ಲ. 8.75 ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. ಇಲ್ಲಿನ ಜ್ವಾಲಾಮುಖಿ ಬೆಟ್ಟ ಸುಮಾರು 3.5 ಕಿಮೀ ಎತ್ತರವಿದ್ದು, 2.5 ಕಿಮೀ ಅಗಲವಿದೆ. (ಏಜೆನ್ಸೀಸ್​)

    ಕೇಂದ್ರ ಬಟೆಜ್​ನಲ್ಲಿ ಬೆಂಗಳೂರಿಗೆ ಬಂಪರ್​ ಕೊಡುಗೆ

    ಹೌದು.. ಅವನೇ ಅಪರಾಧಿ; ಎಟಿಎಂನಲ್ಲಿ ಜ್ಯೋತಿ ಉದಯ್​ ಮೇಲಿನ 7 ವರ್ಷಗಳ ಹಿಂದಿನ ಹಲ್ಲೆ ಪ್ರಕರಣ, 3 ವರ್ಷಗಳ ಬಳಿಕ ಆರೋಪ ಸಾಬೀತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts