More

    ಕೋವಿಡ್ ಮುನ್ನೆಚ್ಚರಿಕೆ; ಆರೋಗ್ಯ ಇಲಾಖೆಯಿಂದ ಹೊಸ ಆದೇಶ!

    ಬೆಂಗಳೂರು: ದೇಶದಲ್ಲಿ ಕೋವಿಡ್​ನ ಹೊಸ ರೂಪಾಂತರಿ ಪತ್ತೆಯಾಗಿರುವುದು ಹಾಗೂ ಜಗತ್ತಿನ ಹಲವೆಡೆ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಆರೋಗ್ಯ ಇಲಾಖೆ ಮೂಲಕ ಹೊಸದೊಂದು ಆದೇಶವನ್ನು ಹೊರಡಿಸಿದೆ.

    ರಾಜ್ಯದಲ್ಲಿ ದೈನಂದಿನ ಕೋವಿಡ್ ಪ್ರಕರಣ 200-250 ಇದ್ದು, ಪಾಸಿಟಿವಿಟಿ ಪ್ರಮಾಣ ಶೇ. 0.29 ಇದ್ದು ಕೋವಿಡ್ ಪರಿಸ್ಥಿತಿ ಉತ್ತಮವಾಗಿ ನಿಯಂತ್ರಣದಲ್ಲಿದೆ. ಅದಾಗ್ಯೂ ರಾಜ್ಯದಲ್ಲಿ ಕರೊನಾ ಪರೀಕ್ಷೆ ನಡೆಸಿ ನಿಗಾ ವಹಿಸಲು ಮುಂದಾಗಿದೆ.

    ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಅನುಕ್ರಮವಾಗಿ ಪ್ರತಿನಿತ್ಯ 50 ಹಾಗೂ 25 ಮಾದರಿಗಳನ್ನು ಆರ್​ಟಿಪಿಸಿಆರ್​ ಪರೀಕ್ಷೆಗೆ ಒಳಪಡಿಸಬೇಕು. ಅಲ್ಲದೆ ಅದರಲ್ಲಿ ಪಾಸಿಟಿವ್ ಬಂದ ಮಾದರಿಗಳನ್ನು ಹೊಸ ರೂಪಾಂತರಿಯ ಪತ್ತೆ ಸಾಧ್ಯತೆಯ ಹಿನ್ನೆಲೆಯಲ್ಲಿ ಜೀನೋಮಿಕ್​ ಸೀಕ್ವೆನ್ಸಿಂಗ್​ಗೆ ಕಳುಹಿಸಬೇಕು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

    ಬಿಬಿಎಂಪಿ ಸೇರಿ ಎಲ್ಲ ಜಿಲ್ಲಾಡಳಿತಗಳು ಮುಂದಿನ ಆದೇಶದವರೆಗೆ ಈ ಪ್ರಕ್ರಿಯೆಯನ್ನು ನಡೆಸಿ, ದೈನಂದಿನ ಕ್ರೋಢೀಕೃತ ಮಾಹಿತಿಯನ್ನು ರಾಜ್ಯ ಕಣ್ಗಾವಲು ಘಟಕಕ್ಕೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಕೋವಿಡ್ ಮುನ್ನೆಚ್ಚರಿಕೆ; ಆರೋಗ್ಯ ಇಲಾಖೆಯಿಂದ ಹೊಸ ಆದೇಶ!

    ಕಾರು ನಿಲ್ಲಿಸಿ ಹೋಗುತ್ತಿದ್ದೀರಾ, ಎಚ್ಚರ!; ಒಂದೇ ದಿನ ಒಂದೇ ಥರದ ಎರಡು ಪ್ರಕರಣ..

    ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

    5 ಮದ್ವೆ, 3 ಡೈವೋರ್ಸ್, ಸದ್ಯ ಇಬ್ರು ಹೆಂಡ್ತಿ; ಪತ್ನಿ ಬೇಗ ಮನೆಗೆ ಬರಲಿ ಎಂದೇ ಫ್ಲೈಓವರ್!; ಏನಿದು, ಯಾರ ಕಥೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts